ETV Bharat / state

ಕೊರೊನಾ ಸೋಂಕಿತ ಉಪ್ಪಿನಂಗಡಿಯ ಮಹಿಳೆ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ - ಕೋವಿಡ್​ 19 ರಿಪೋರ್ಟ್​

ಕೊರೊನಾ ಸೋಂಕಿನಿಂದ ಗುಣಮುಖರಾದ 38 ವರ್ಷದ ಉಪ್ಪಿನಂಗಡಿ ಮಹಿಳೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಒಟ್ಟಾರೆ ನಗರದಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ 16 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

Corona infected Uppinagadi  woman Cured
ಕೊರೊನಾ ಸೋಂಕಿತ ಉಪ್ಪಿನಂಗಡಿಯ ಮಹಿಳೆ ಗುಣಮುಖ
author img

By

Published : May 14, 2020, 9:03 PM IST

ಮಂಗಳೂರು: ಕೊರೊನಾ ದೃಢಪಟ್ಟು ಚಿಕಿತ್ಸೆ ಪಡೆಯುತ್ತಿದ್ದ ಉಪ್ಪಿನಂಗಡಿ ಮಹಿಳೆ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಇವರ ಪತಿ ಕೂಡ ಇತ್ತೀಚೆಗೆ ಕೊರೊನಾದಿಂದ ಗುಣಮುಖರಾಗಿದ್ದರು.

ಈ 38 ವರ್ಷದ ಮಹಿಳೆ ಕೊರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಏ. 19ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 10 ಮತ್ತು 13ರಂದು ಇವರ ಗಂಟಲು ದ್ರವ ಪರೀಕ್ಷೆಯ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಗುಣಮುಖ ಎಂದು ಘೋಷಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇಂದು 184 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಒಟ್ಟು 252 ಮಂದಿಯ ಗಂಟಲು ದ್ರವದ ವರದಿ ನಿರೀಕ್ಷಿಸಲಾಗುತ್ತಿದೆ. ಈ ಹಿಂದೆ ಕಳುಹಿಸಲಾದ 49 ಮಂದಿಯ ಗಂಟಲು ದ್ರವದ ಪರೀಕ್ಷೆ ವರದಿಯಲ್ಲಿ 49 ವರದಿ ನೆಗೆಟಿವ್ ಬಂದಿವೆ. ಈವರೆಗೆ 4,788 ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇದರಲ್ಲಿ 34 ಪಾಸಿಟಿವ್ ಮತ್ತು 4502 ನೆಗೆಟಿವ್ ಬಂದಿದೆ. ಇಂದು 183 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಈವರೆಗೆ ಒಟ್ಟು 41095 ಮಂದಿಯನ್ನು ಸ್ಕ್ರೀನಿಂಗ್ ಮಾಡಿದಂತಾಗಿದೆ.

ಎನ್​ಐಟಿಕೆಯಲ್ಲಿ 22 ಮಂದಿ, ಇಎಸ್ಐ ಆಸ್ಪತ್ರೆಯಲ್ಲಿ 9 ಮಂದಿ ಕ್ವಾರಂಟೈನ್​ನಲ್ಲಿದ್ದಾರೆ. ಇಂದಿಗೆ 6073 ಮಂದಿ 28 ದಿನದ ಹೋಮ್ ಕ್ವಾರಂಟೈನ್ ಪೂರೈಸಿದ್ದಾರೆ. ಒಟ್ಟಾರೆ ನಗರದಲ್ಲಿ ಕೊರೊನಾ ಪಾಸಿಟಿವ್ ಬಂದಿದ್ದ 16 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಐವರು ಸಾವನ್ನಪ್ಪಿದ್ದಾರೆ. 13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.