ಮಂಗಳೂರು: ಕೊರೊನಾ ಭೀತಿ ಹಿನ್ನೆಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸೌದಿ, ಕತಾರ್, ಕುವೈತ್ಗೆ ತೆರಳುವ ವಿಮಾನಗಳನ್ನು ರದ್ದು ಮಾಡಲಾಗಿದೆ.
ಭಾರತ ಸರ್ಕಾರದ ಸೂಚನೆಯಂತೆ ಈ ದೇಶಗಳಿಗೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಲಾಗಿದೆ. ಏರ್ ಇಂಡಿಯಾ ವಿಮಾನ ಮತ್ತು ಸ್ಪೈಸ್ ಜೆಟ್ ವಿಮಾನ ಸೌದಿ ಅರೇಬಿಯಾ, ಕುವೈತ್, ಕತಾರ್ಗೆ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ದುಬೈ, ಅಬುದಾಬಿ, ಮಸ್ಕತ್ಗಳಿಗೆ ವಿಮಾನಯಾನ ಸೇವೆ ಎಂದಿನಂತೆ ಮುಂದುವರೆದಿದೆ.