ETV Bharat / state

ಮಂಗಳೂರು: ಬಿಕೋ ಎನ್ನುತ್ತಿದೆ ಮಂಗಳೂರು ಈದ್ಗಾ ಜುಮಾ ಮಸೀದಿ - ಪವಿತ್ರ ಹಬ್ಬವಾದ ರಂಜಾನ್​ ಮೇಲೆ ಕೊರೊನಾ ಪರಿಣಾಮ

ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಜುಮಾ ಮಸೀದಿಯಲ್ಲಿ ಪ್ರತಿ ವರ್ಷವೂ ಸಾವಿರಾರು ಮಂದಿ ಸೇರಿ ಸಾಮೂಹಿಕವಾಗಿ ನಮಾಜ್​ ನೆರವೇರಿಸುತ್ತಾರೆ. ಆದರೆ ಮಂಗಳೂರಿನ ಖಾಜಿಗಳ ಆದೇಶದಂತೆ ಈ ಬಾರಿ ಯಾವುದೇ ಮುಸ್ಲಿಮರು ಮಸೀದಿ ಕಡೆಗೆ ಬಾರದ ಹಿನ್ನೆಲೆ, ಈದ್ಗಾ ಜುಮಾ ಮಸೀದಿ ಬಿಕೋ ಎನ್ನುತ್ತಿದೆ.

corona effect on ramzan festival
ಬಿಕೋ ಎನ್ನುತ್ತಿದೆ ಮಂಗಳೂರು ಈದ್ಗಾ ಜುಮ್ಮಾ ಮಸೀದಿ
author img

By

Published : May 24, 2020, 11:32 AM IST

ಮಂಗಳೂರು: ಪವಿತ್ರ ರಂಜಾನ್​ ದಿನದಂದು, ಮುಸ್ಲಿಂ ಬಾಂಧವರು ಮಸೀದಿಗಳಿಗೆ ತೆರಳಿ ನಮಾಜ್ ಮಾಡುವುದು ಪದ್ಧತಿ. ಆದರೆ ಈ ಬಾರಿ ಕೊರೊನಾ ಭೀತಿ ಎಲ್ಲೆಡೆ ಆವರಿಸಿದ್ದು, ಎಲ್ಲರೂ ಮನೆಯಲ್ಲಿಯೇ ನಮಾಜ್​ ಮಾಡುತ್ತಿದ್ದಾರೆ.

ಇಂದು ಎಲ್ಲಾ ಮಸೀದಿಗಳು ನಮಾಜ್​ ಮಾಡುವವರಿಲ್ಲದೇ ಖಾಲಿ ಖಾಲಿಯಾಗಿವೆ. ನಗರದ ಬಾವುಟಗುಡ್ಡೆ ಈದ್ಗಾ ಜುಮಾ ಮಸೀದಿಯಲ್ಲಿ ಪ್ರತಿ ವರ್ಷವೂ ಸಾವಿರಾರು ಮಂದಿ ಸೇರಿ ಸಾಮೂಹಿಕವಾಗಿ ನಮಾಜ್​ ನೆರವೇರಿಸುತ್ತಾರೆ. ಆದರೆ ಮಂಗಳೂರಿನ ಖಾಜಿಗಳ ಆದೇಶದಂತೆ ಈ ಬಾರಿ ಯಾವುದೇ ಮುಸ್ಲಿಮರು ಮಸೀದಿ ಕಡೆಗೆ ಬಾರದ ಹಿನ್ನೆಲೆ, ಈದ್ಗಾ ಜುಮಾ ಮಸೀದಿ ಬಿಕೋ ಎನ್ನುತ್ತಿದೆ.

ಬಿಕೋ ಎನ್ನುತ್ತಿದೆ ಮಂಗಳೂರು ಈದ್ಗಾ ಜುಮಾ ಮಸೀದಿ

ಪ್ರತೀ ವರ್ಷ ಮಸೀದಿಯ ಒಳಗಡೆ ಸ್ಥಳವಿಲ್ಲದೇ ಸುತ್ತಮುತ್ತಲಿನ ಆವರಣದಲ್ಲಿಯೂ ನಮಾಜ್​ ಮಾಡಲಾಗುತ್ತಿತ್ತು. ಇತ್ತ ವಾಹನ ಸಂಚಾರವೂ ಇಲ್ಲದ ಪರಿಣಾಮ ಇಂದು ಎಲ್ಲವೂ ಸ್ತಬ್ಧವಾಗಿದೆ. ಮಸೀದಿಯಲ್ಲಿ ಧರ್ಮಗುರುಗಳ ಹೊರತು ಬೇರೆ ಯಾರೂ ಇಲ್ಲ. ಅಲ್ಲದೆ ಪೊಲೀಸರು ಮಸೀದಿಗೆ ಯಾರೂ ನಮಾಜ್​ ನೆರವೇರಿಸಲು ಬಾರದಂತೆ ಹದ್ದಿನ ಕಣ್ಣಿರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.