ಮಂಗಳೂರು: ಕೊರೊನಾ ಕಾರಣದಿಂದ ಸಾಕಷ್ಟು ಸಮಸ್ಯೆಗಳು ಎಲ್ಲಾ ರಂಗಗಳಲ್ಲೂ ಸೃಷ್ಟಿಯಾಗಿವೆ. ಇದೇ ರೀತಿಯಲ್ಲಿ ನಗರದಲ್ಲಿ ಕಟ್ಟಲಾಗುವ ಮನೆಗಳ ನಿರ್ಮಾಣಕ್ಕೂ ಕೂಡ ಸಮಸ್ಯೆಯಾಗಿದೆ. ಸರಿಯಾದ ಸಮಯದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆಯಲು ಹರಸಾಹಸ ಪಡಬೇಕಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಕಮೀಷನರ್ ಅಕ್ಷಯ್ ಶ್ರೀಧರ್ ಮಾತನಾಡಿ, ವಿವಿಧ ರಂಗಗಳಲ್ಲಿ ಸಮಸ್ಯೆ ಸೃಷ್ಟಿಸಿದ ಕೊರೊನಾ ಮನೆ ನಿರ್ಮಾಣ ಮಾಡುವುದಕ್ಕೆ ನಾಗರಿಕರು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದೆ. ಮನೆಯನ್ನು ಕಟ್ಟಲು ನಗರಪಾಲಿಕೆಯ ಅನುಮತಿ ಪತ್ರಗಳು ಬೇಕು. ಆದರೆ ಕೊರೊನಾ ಸಂದರ್ಭದಲ್ಲಿ ಜನರು ಸರಿಯಾದ ಸಮಯದಲ್ಲಿ ಅನುಮತಿ ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಅನುಮತಿ ಪಡೆಯುವ ಜೊತೆಗೆ ಗೃಹ ನಿರ್ಮಾಣದ ಕಾಮಗಾರಿಗೆ ಕಾರ್ಮಿಕರ ಸಮಸ್ಯೆಯೂ ಕಾಡುತ್ತಿದೆ. ಗೃಹ ನಿರ್ಮಾಣ ಸೇರಿದಂತೆ ಕಟ್ಟಡ ಕಾಮಗಾರಿಗಳಲ್ಲಿ ಇರುವ ಕಾರ್ಮಿಕರು ಹೆಚ್ಚಿನವರು ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದವರು. ಲಾಕ್ಡೌನ್ ವೇಳೆ ಮಾರ್ಚ್ನಲ್ಲಿ ಊರಿಗೆ ಹೋಗಿದ್ದ ಕಾರ್ಮಿಕರು ಈಗಷ್ಟೇ ಜಿಲ್ಲೆಗೆ ಆಗಮಿಸಲು ಆರಂಭಿಸಿದ್ದಾರೆ. ಕಾರ್ಮಿಕರನ್ನು ಎದುರು ನೋಡುತ್ತಿದ್ದ ಮನೆ ಕಟ್ಟುವವರು ಇನ್ನು ಪಾಲಿಕೆಯ ಅನುಮತಿ ಪತ್ರದ ಕಾರ್ಯಕ್ಕೆ ಮುಂದಾಗಲಿದ್ದಾರೆ.
ದೊಡ್ಡ ಪ್ರಮಾಣದಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ಕೇಳಿ ಬರುವ ಪತ್ರಗಳನ್ನು ಸರಿಯಾದ ಸಮಯದಲ್ಲಿ ಪಾಲಿಕೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.