ಮಂಗಳೂರು: ಕಟೀಲು ಯಕ್ಷಗಾನ ಮೇಳದ ವಿವಾದ ಭುಗಿಲೆದ್ದಿದ್ದು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರಿಗೆ ಯಕ್ಷಗಾನ ಪ್ರಸಂಗದಲ್ಲಿ ಅವಮಾನ ಮಾಡಿದ ಘಟನೆ ನಡೆದಿದೆ.
ಈ ವರ್ಷದ ಕಟೀಲು ಯಕ್ಷಗಾನದ ತಿರುಗಾಟ ನಿನ್ನೆ ಆರಂಭವಾಗಿದ್ದು, ಮೊದಲ ದಿನವೇ ಪಟ್ಲ ಸತೀಶ್ ಶೆಟ್ಟಿ ಅಭಿಮಾನಿಗಳ ಮುಂದೆ ಅವಮಾನ ಮಾಡಲಾಗಿದೆ. ನಿನ್ನೆ ರಾತ್ರಿ ಕಟೀಲು ಮೇಳದ ಆರು ಮೇಳಗಳ ಪ್ರಸಂಗ ಏಕಕಾಲದಲ್ಲಿ ಕಟೀಲು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಈ ಹಿಂದಿನಂತೆ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ಭಾಗವತ ನಿರ್ವಹಿಸಲು ವೇದಿಕೆಗೆ ಬಂದಿದ್ದರು. ಆದರೆ, ಅವರು ವೇದಿಕೆ ಏರಿ ಕೂರುತ್ತಿದ್ದಂತೆ ಅವರನ್ನು ವಾಪಸು ಕರೆಸಲಾಗಿದೆ. ಈ ಮೂಲಕ ಯಕ್ಷಗಾನ ಅಭಿಮಾನಿಗಳ ಮುಂದೆಯೇ ಅವರಿಗೆ ಅವಮಾನ ಮಾಡಲಾಗಿದೆ.
ಯಕ್ಷಗಾನ ಮೇಳ ನಿರ್ವಹಣೆ ಸಂಬಂಧಿಸಿ ವಿವಾದವು ಹೈಕೋರ್ಟ್ ಮೆಟ್ಟಿಲೇರಿತ್ತು. ಇದರಲ್ಲಿ ಪಟ್ಲ ಸತೀಶ್ ಶೆಟ್ಟಿ ಕಲಾವಿದರ ಪರ ಇದ್ದರೆಂದು ಅವರನ್ನು ವೇದಿಕೆಗೆ ಕರೆದು ಅವಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.