ETV Bharat / state

ಬೀದಿ ನಾಯಿಗಳಿಗೆ ಕಡಿವಾಣ ಹಾಕಲು ಉಚಿತ ಸಂತಾನ ಹರಣ ಶಸ್ತ್ರಚಿಕಿತ್ಸೆ: ಲವ್ 4​​ ಪಾವ್ಸ್ ಸಂಸ್ಥೆಯ ಕಾಳಜಿ - ಬೆಕ್ಕುಗಳ ಸಂತಾನ ಹರಣ

ಇತ್ತೀಚೆಗೆ ಎಲ್ಲೆ ಹೋದರೂ ಬೀದಿ ನಾಯಿಗಳ ಕಾಟ ಅಧಿಕವಾಗುತ್ತಿದೆ. ಇಂತಹ ಬೀದಿ ನಾಯಿಗಳಿಂದ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸೋದು ಇದೆ. ಇದಕ್ಕೆ ಕಡಿವಾಣ ಹಾಕಲು ಸಂಸ್ಥೆಯೊಂದು ಮುಂದಾಗಿದೆ.

love four pavs
ಲವ್ 4​​ ಪಾವ್ಸ್ ಸಂಸ್ಥೆ
author img

By

Published : Jun 24, 2020, 5:04 PM IST

ಮಂಗಳೂರು: ಇತ್ತೀಚೆಗೆ ಎಲ್ಲೇ ಹೋದರೂ ಬೀದಿ ನಾಯಿಗಳ ಹಾವಳಿ ತೀವ್ರವಾಗಿದೆ. ಇವುಗಳಿಗೆ ಕಡಿವಾಣ ಹಾಕಲು ಮಂಗಳೂರಿನ ಲವ್ 4 ಪಾವ್ಸ್ ಎಂಬ ಸಂಸ್ಥೆ ನಾಯಿಗಳಿಗೆ ಉಚಿತವಾಗಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ವಿನೂತನ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಖಾಸಗಿಯಾಗಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸಲು‌ ಕನಿಷ್ಠ 2,500 ಸಾವಿರ ರೂ. ವೆಚ್ಚ ತಗುಲುತ್ತದೆ. ಈ ದುಬಾರಿ ವೆಚ್ಚದ ಪರಿಣಾಮ ಹಲವಾರು ಮನೆಯಲ್ಲಿ ಸಾಕಿರುವ ದೇಸೀ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಲು ಹಿಂದೇಟು ಹಾಕುತ್ತಾರೆ. ಮುಂದೆ ನಾಯಿಮರಿಗಳನ್ನು ನೇರವಾಗಿ ಬೀದಿಯಲ್ಲಿ ಬಿಟ್ಟು ಬರುತ್ತಾರೆ‌. ಇದರಿಂದ ಬೀದಿನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಈ ತೊಂದರೆ ತಪ್ಪಿಸಲು ಲವ್ 4 ಪಾವ್ಸ್ ಸಂಸ್ಥೆಯು ಖಾಸಗಿ ಪಶು ವೈದ್ಯರೋರ್ವರ ಸಹಕಾರದಿಂದ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುತ್ತಿದ್ದಾರೆ. ಇದಕ್ಕೆ ಯಾರಿಂದಲೂ ಹಣವನ್ನು ಅಪೇಕ್ಷೆ ಪಡುವುದಿಲ್ಲ. ಆದರೆ ಯಾರಾದರೂ ಹಣ ನೀಡಿದ್ದಲ್ಲಿ ಲವ್ 4 ಪಾವ್ಸ್ ಸಂಸ್ಥೆಗೆ ಬಳಸುತ್ತಾರೆ‌.

ಲವ್ 4​​ ಪಾವ್ಸ್ ಸಂಸ್ಥೆ

ಕಳೆದ ಒಂದೂವರೆ ವರ್ಷಗಳಿಂದ ಲವ್ 4 ಪಾವ್ಸ್ ಸಂಸ್ಥೆ ಬೀದಿ ನಾಯಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ. ಬೀದಿಯಲ್ಲಿ ಬಿದ್ದಿರುವ ನಾಯಿ ಮರಿಗಳು, ಬೆಕ್ಕಿನ ಮರಿಗಳನ್ನು ಕೊಂಡೊಯ್ದು ಆರೈಕೆ ಮಾಡಿ ಅಗತ್ಯವಿದ್ದವರಿಗೆ ಉಚಿತವಾಗಿ ದತ್ತುಕೊಡುವ ಕಾರ್ಯದಲ್ಲಿ ತೊಡಗಿತ್ತು. ಈಗಾಗಲೇ ಬೀದಿಯಲ್ಲಿ ಬಿದ್ದಿರುವ ಸುಮಾರು 300ರಷ್ಟು ನಾಯಿ ಹಾಗೂ ಬೆಕ್ಕಿನ ಮರಿಗಳನ್ನು ರಕ್ಷಣೆ ಮಾಡಿ ಕ್ಯಾಂಪ್ ಮೂಲಕ ಉಚಿತವಾಗಿ ದತ್ತು ಕೊಡುವ ಕಾರ್ಯ ಮಾಡಿದೆ. ಈಗಾಗಲೇ ಈ ಸಂಸ್ಥೆ ಸುಮಾರು 60ಕ್ಕೂ ಅಧಿಕ ನಾಯಿ ಹಾಗೂ ಬೆಕ್ಕಿನ ಮರಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿದೆ.

ಈ ಬಗ್ಗೆ ಲವ್ ಫಾರ್ ಸಂಸ್ಥೆಯ ಉಷಾ ಸುವರ್ಣ ಮಾತನಾಡಿ, ಬೀದಿ ನಾಯಿಗಳ ಸಂಖ್ಯೆ ಕಡಿಮೆ ಮಾಡಲು ನಮ್ಮ‌ ಲವ್ 4 ಪಾವ್ಸ್ ಸಂಸ್ಥೆಯ ಮೂಲಕ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುತ್ತಿದ್ದೇವೆ. ಈಗಾಗಲೇ ಸುಮಾರು 60ರಷ್ಟು ನಾಯಿ ಹಾಗೂ ಬೆಕ್ಕುಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿದ್ದೇವೆ. ಹಣದ ತೊಂದರೆ ಇದ್ದವರು ನಮ್ಮನ್ನು ಸಂಪರ್ಕಿಸಿದ್ದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಪ್ರಾಣಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಕೊಡುತ್ತೇವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.