ETV Bharat / state

ಯೋಗಿ ವಿರುದ್ಧದ ಹೇಳಿಕೆಯಿಂದ ಕಾಂಗ್ರೆಸ್ ನಿಜಬಣ್ಣ ಬಯಲು: ಸುದರ್ಶನ ಮೂಡುಬಿದಿರೆ - Statement by congress Youth Morcha President Mithun Rai

ದಕ್ಷಿಣ ಕನ್ನಡ ಜಿಲ್ಲೆಗೆ ಯೋಗಿ ಆದಿತ್ಯನಾಥ್ ಬಂದಲ್ಲಿ ಮಸಿ ಬಳಿಯಲಾಗುತ್ತದೆ ಎಂದು ಕಾಂಗ್ರೆಸ್ ದ. ಕ. ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ. ಈ ಹೇಳಿಕೆಯಿಂದ ಮಿಥುನ್ ರೈಯವರ ಯೋಗ್ಯತೆ ಹಾಗೂ ಕಾಂಗ್ರೆಸ್‌ನ ನಿಜಬಣ್ಣ ಬಯಲಾಗಿದೆ ಎಂದು ಬಿಜೆಪಿ‌ ದ. ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ತಿರುಗೇಟು ನೀಡಿದ್ದಾರೆ.

Congress satement on Yogi Adityanath is opposive: Sudarshana Moodabidri
ಯೋಗಿ ಆದಿತ್ಯನಾಥ್ ವಿರುದ್ಧದ ಹೇಳಿಕೆಯಿಂದ ಕಾಂಗ್ರೆಸ್ ನಿಜಬಣ್ಣ ಬಯಲು: ಸುದರ್ಶನ ಮೂಡುಬಿದಿರೆ
author img

By

Published : Oct 10, 2020, 2:51 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಯೋಗಿ ಆದಿತ್ಯನಾಥ್ ಬಂದಲ್ಲಿ ಮಸಿ ಬಳಿಯಲಾಗುತ್ತದೆ ಎಂದು ಕಾಂಗ್ರೆಸ್ ದ. ಕ. ಜಿಲ್ಲಾ ಯುವ ಮೋರ್ಚ ಅಧ್ಯಕ್ಷ ಮಿಥುನ್ ರೈ ಹೇಳಿದ್ದಾರೆ. ಈ ರೀತಿಯ ಹೇಳಿಕೆಯಿಂದ ಮಿಥುನ್ ರೈಯವರ ಯೋಗ್ಯತೆ ಹಾಗೂ ಕಾಂಗ್ರೆಸ್ ಪಕ್ಷದ ನಿಜಬಣ್ಣ ಬಯಲಾಗಿದೆ ಎಂದು ಬಿಜೆಪಿ‌ ದ. ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ತಿರುಗೇಟು ನೀಡಿದ್ದಾರೆ.

ಯೋಗಿ ಆದಿತ್ಯನಾಥ್ ವಿರುದ್ಧದ ಹೇಳಿಕೆಯಿಂದ ಕಾಂಗ್ರೆಸ್ ನಿಜಬಣ್ಣ ಬಯಲು: ಸುದರ್ಶನ ಮೂಡುಬಿದಿರೆ

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ನಾಥ ಪರಂಪರೆಯ ಕೊಡುಗೆ ಮಹತ್ತರವಾದದ್ದು. ಈ ನಾಥ ಪಂಥದ ಪರಮೋಚ್ಚ ಗುರು ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮಹಾರಾಜ್ ಅವರ ಬಗ್ಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈಯವರು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಹೇಳಿದರು.

ಇಂತಹ ಹೇಳಿಕೆ ನೀಡಿರುವ ಮಿಥುನ್ ರೈಯವರೇನಾದರು ದ. ಕ. ಜಿಲ್ಲೆಯನ್ನು ಖರೀದಿಸಿದ್ದಾರೆಯೇ ಎಂದು ಕೇಳಿದ ಸುದರ್ಶನ ಅವರು, ದ. ಕ. ಜಿಲ್ಲೆಗೆ ನಾಥ ಪಂಥದ ಕೊಡುಗೆ ಬಹಳಷ್ಟಿದೆ. ಜಿಲ್ಲೆಯ ನಾಥ ಪಂಥದ ಪ್ರಮುಖ ಮಠ ದ. ಕ. ಜಿಲ್ಲೆಯ ಕದ್ರಿಯಲ್ಲಿದೆ. ಇಲ್ಲಿನ‌ ಪೀಠಾಧಿಪತಿಯ ಪಟ್ಟಾಭಿಷೇಕವಾಗಬೇಕಾದರೆ ನಾಥಪಂಥದ ಪರಮೋಚ್ಚ ಗುರು ಯೋಗಿ ಆದಿತ್ಯನಾಥ್ ಮಹಾರಾಜ್ ಅವರ ಉಪಸ್ಥಿತಿ ಇರಬೇಕು. ಇದನ್ನು ಮಿಥುನ್ ರೈಯವರು ಮರೆತಿದ್ದಾರೆ. ಹಾಗಾಗಿ ನಾನಿದನ್ನು ಅವರಿಗೆ ನೆನಪಿಸಲು ಇಚ್ಚಿಸುತ್ತೇನೆ ಎಂದು ಹೇಳಿದರು.

ಪ್ರಸ್ತುತ ನಡೆಯುತ್ತಿರುವ ಹೋರಾಟಗಳನ್ನು ಗಮನಿಸಿದಾಗ ಕಾಂಗ್ರೆಸ್ಸಿಗರಿಗೆ ಸಂವಿಧಾನದ ಮೇಲೆ ಗೌರವ ಇಲ್ಲ ಎಂಬ ವಿಚಾರ ಬೆಳಕಿಗೆ ಬರುತ್ತದೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಯಾರೂ ಪ್ರತಿಭಟನೆ ನಡೆಸುವಂತಿಲ್ಲ. ಸಂವಿಧಾನದ ಹುದ್ದೆಯಲ್ಲಿರುವ ಪ್ರಧಾನ ಮಂತ್ರಿ ಅಥವಾ ಮುಖ್ಯಮಂತ್ರಿಗಳನ್ನು ತುಚ್ಚವಾಗಿ ಕಾಣುವುದು, ಅವಹೇಳನ ಮಾಡುವುದು ಅಥವಾ ಏಕವಚನದಲ್ಲಿ ಬೈಯ್ಯುವುದಕ್ಕಾಗಲಿ ಕಾನೂನಿನಲ್ಲಿ ಅವಕಾಶವಿಲ್ಲ. ದೇಶದ ಯಾವುದೇ ಮೂಲೆಯಲ್ಲಿ ಅತ್ಯಾಚಾರ ವಾದರೂ ಬಿಜೆಪಿ ಸಹಿಸೋಲ್ಲ. ಅತ್ಯಾಚಾರಿಗಳನ್ನು ರಕ್ಷಿಸುವ ಕೆಲಸವನ್ನೂ ನಾವು ಮಾಡೋದಿಲ್ಲ.‌ ಅತ್ಯಾಚಾರ ನಿಯಂತ್ರಣಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಠಿಣ ಕಾನೂನು ತಂದಿದೆ. ಇದನ್ನು ಕಾಂಗ್ರೆಸ್ ಮರೆತಿದೆ ಎಂದು ಸುದರ್ಶನ ಮೂಡುಬಿದಿರೆ ಹೇಳಿದರು.

ಕೇರಳದಲ್ಲಿ ಕೋವಿಡ್ ಸೋಂಕಿತೆಯ ಮೇಲೆ ಆ್ಯಂಬುಲೆನ್ಸ್ ಚಾಲಕನೇ ಅತ್ಯಾಚಾರ ಮಾಡಿದಾಗ, ಅಮೇಠಿಯಲ್ಲಿ‌ ಅತ್ಯಾಚಾರ, ಬಾಳೆಪುಣಿಯಲ್ಲಿ ಅತ್ಯಾಚಾರ ಆದಾಗ ಕಾಂಗ್ರೆಸ್ ಪ್ರತಿಭಟನೆ ಮಾಡಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಅತ್ಯಾಚಾರವನ್ನು ಇರಿಸಿ ಯೋಗಿಯವರನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಮಾಡುತ್ತದೆ. ಈ ರೀತಿಯ ರಾಜಕೀಯ ದ್ವಂದ್ವ ನೀತಿಯ ಮೂಲಕ ದೇಶದಲ್ಲಿ ಗಲಭೆ ಸೃಷ್ಟಿಸುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದೆ.

ಉತ್ತರ ಪ್ರದೇಶದಲ್ಲಿ ಗೂಂಡಾಗಿರಿಯನ್ನು ಸಂಪೂರ್ಣ ನಿಯಂತ್ರಿಸಿದ ಏಕೈಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್. ದೇಶದ್ರೋಹಿ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಅವರು ಸಫಲರಾಗಿದ್ದಾರೆ. ಇದನ್ನೆಲ್ಲಾ ಸಹಿಸದ ಕಾಂಗ್ರೆಸ್ ಈ ರೀತಿಯಲ್ಲಿ ಇಲ್ಲಸಲ್ಲದ ಹೇಳಿಕೆಯನ್ನು ಹೇಳಿಕೊಂಡು ತಿರುಗುತ್ತಿದೆ. ಆದ್ದರಿಂದ ಮಿಥುನ್ ರೈಯವರ ಹೇಳಿಕೆಯನ್ನು ದ.ಕ.ಜಿಲ್ಲಾ ಬಿಜೆಪಿ ಖಂಡಿಸುತ್ತದೆ‌ ಎಂದು ಸುದರ್ಶನ ಮೂಡುಬಿದಿರೆ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.