ETV Bharat / state

ಕರ್ನಾಟಕದಲ್ಲಿ ಎನ್​ಆರ್​ಸಿ ಜಾರಿಗೊಳಿಸಿದ್ರೆ ರಾಜ್ಯವೇ ಹೊತ್ತಿ ಉರಿಯಲಿದೆ: ಖಾದರ್ ಎಚ್ಚರಿಕೆ - ಪೌರತ್ವ ತಿದ್ದುಪಡಿ ಖಂಡಿಸಿ ಮಂಗಳೂರಿನಲ್ಲಿ ಕಾಂಗ್ರೆಸ್​ ಪ್ರತಿಭಟನೆ

ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಎನ್​ಆರ್​ಸಿ ಕಾಯ್ದೆಯ ವಿರುದ್ಧ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಧರಣಿ ಸತ್ಯಾಗ್ರಹ ನಡೆಯಿತು.

U.T Khader
ಯು.ಟಿ.ಖಾದರ್
author img

By

Published : Dec 17, 2019, 11:00 PM IST

ಮಂಗಳೂರು: ಎನ್​ಆರ್​ಸಿ ಜಾರಿಯಿಂದ ಇಡೀ ದೇಶವೇ ಹೊತ್ತಿ ಉರಿಯುತ್ತಿದ್ದರೂ, ಕರ್ನಾಟಕ ರಾಜ್ಯ ಶಾಂತಿಯುತವಾಗಿದೆ. ಆದರೆ ರಾಜ್ಯದಲ್ಲಿ ಕೂಡಾ ಎನ್​ಆರ್​ಸಿಯನ್ನು ಜಾರಿಗೊಳಿಸುವ ಯತ್ನ ಮಾಡಿದರೆ, ಇಡೀ ರಾಜ್ಯ ಹೊತ್ತಿ ಉರಿಯಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ.ಖಾದರ್

ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಎನ್​ಆರ್​ಸಿ ಕಾಯ್ದೆಯ ವಿರುದ್ಧ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ ಧರಣಿ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದ ಅವರು, ದ‌.ಕ.ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಬಿಜೆಪಿಯ ಶಾಸಕರು ದೇಶದ್ರೋಹಿ ಎಂದು ಕರೆದಿದ್ದರು. ನಿಮಗೆ ತಾಕತ್ತಿದ್ದರೆ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯನ್ನು ದೇಶದ್ರೋಹಿ ಹಾಗೂ ಭಯೋತ್ಪಾದಕರೆಂದು ಕರೆಯಿರಿ ಎಂದು ಸವಾಲೆಸೆದರು.

ಭಾರತ ಇಂದು ಹೊತ್ತಿ ಉರಿಯುತ್ತಿದೆ ಅಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ಕಾರಣ. ಅದಕ್ಕಾಗಿ ಈ ದೇಶದ ಸರ್ವ ಜನರೂ ಜಾತಿ, ಮತ, ಭೇದ ಮರೆತು ಭಾರತ ದೇಶವನ್ನು ಉಳಿಸಲು ಇಲ್ಲಿಂದಲೇ ಹೋರಾಟ ಪ್ರಾರಂಭಿಸಬೇಕು. ಎನ್​ಆರ್​ಸಿ ಮೂಲಕ ತಂದ ಸಿಎಬಿ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದು. ಇದನ್ನು ಈ ದೇಶದಲ್ಲಿ ಯಾರೂ ಕೂಡಾ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್​ನ ಕಾರ್ಯಕರ್ತರಾಗಿ ನಾವು ಯಾರೂ ಎನ್​ಆರ್​ಸಿಗೆ ನಮ್ಮ ಮಾಹಿತಿ ನೀಡುವುದಿಲ್ಲ. ಕೇಂದ್ರ ಸರ್ಕಾರ ಪೌರತ್ವವಲ್ಲ, ನಮ್ಮ ಜೀವ ತೆಗೆದರೂ ಎನ್​ಆರ್​ಸಿಗೆ ನಮ್ಮ ಬೆಂಬಲವಿಲ್ಲ. ಇಡೀ ಭಾರತದಲ್ಲಿ ತಾನು ಭಾರತೀಯ, ನಿಜವಾದ ದೇಶ ಪ್ರೇಮಿ‌ ಎಂದು ಸರ್ಟಿಫಿಕೇಟ್ ಪಡೆದು ಸಾಬೀತು ಮಾಡಬೇಕಿದ್ದರೆ ಅದು ಅಮಿತ್ ಷಾ ಹಾಗೂ ನರೇಂದ್ರ ಮೋದಿ ಮಾಡಬೇಕು ಎಂದು ಯು.ಟಿ.ಖಾದರ್ ಕಿಡಿ ಕಾರಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭಾರತವನ್ನು ಬ್ರಿಟಿಷರು ವಿಭಜನೆ ಮಾಡಿದ ರೀತಿಯಲ್ಲಿ ಮಾರಕ ಕಾನೂನುಗಳನ್ನು ಜಾರಿಗೊಳಿಸಿ ದೇಶದ್ರೋಹದ ಕೃತ್ಯ ನಡೆಸುತ್ತಿದ್ದಾರೆ. ಒಂದೊಂದು ಚುನಾವಣೆಗೂ ಒಂದೊಂದು ಕಾನೂನು ಜಾರಿಗೊಳಿಸುತ್ತಿದ್ದಾರೆ‌. ಉತ್ತರ ಪ್ರದೇಶದ ಚುನಾವಣೆ ಸಂದರ್ಭ ನೋಟ್ ಬ್ಯಾನ್, ಹರಿಯಾಣ - ಮಹಾರಾಷ್ಟ್ರ ಚುನಾವಣೆಗೆ 370ನೇ ವಿಧಿ ರದ್ದು, ಈಗ ಜಾರ್ಖಾಂಡ್ ಹಾಗೂ ಪಶ್ಚಿಮ ಬಂಗಾಳದ ಚುನಾವಣೆ ಬರುತ್ತದೆ ಎಂದು ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಯು.ಟಿ‌.ಖಾದರ್ ಆರೋಪಿಸಿದರು.

Intro:ಮಂಗಳೂರು: ಎನ್ ಆರ್ ಸಿ ಜಾರಿಯಿಂದ ಇಡೀ ದೇಶವೇ ಹೊತ್ತಿ ಉರಿಯುತ್ತಿದ್ದರೂ, ಕರ್ನಾಟಕ ರಾಜ್ಯ ಶಾಂತಿಯುತವಾಗಿದೆ. ಆದರೆ ಕರ್ನಾಟಕದಲ್ಲಿ ಕೂಡಾ ಎನ್ ಆರ್ ಸಿಯನ್ನು ಜಾರಿಗೊಳಿಸು ಯತ್ನ ಮಾಡಿದರೆ, ಇಡೀ ಕರ್ನಾಟಕ ರಾಜ್ಯ ಹೊತ್ತಿ ಉರಿಯಲಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ಎನ್ ಆರ್ ಸಿ ಕಾಯ್ದೆಯ ವಿರುದ್ಧ ಇಂದು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ ಧರಣಿ ಸತ್ಯಾಗ್ರಹ ವನ್ನು ಉದ್ದೇಶಿಸಿ ಮಾತನಾಡಿ, ದ‌.ಕ.ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಬಿಜೆಪಿಯ ಶಾಸಕರು ದೇಶದ್ರೋಹಿ ಎಂದು ಕರೆದಿದ್ದರು. ನಿಮಗೆ ತಾಕತ್ತಿದ್ದರೆ ಮಹಾತ್ಮ ಗಾಂಧಿಯವರನ್ನು ಗುಂಡಿಕ್ಕಿ ಕೊಂದ ನಾಥೂರಾಂ ಗೋಡ್ಸೆಯನ್ನು ದೇಶದ್ರೋಹಿ ಹಾಗೂ ಭಯೋತ್ಪಾದಕರೆಂದು ಕರೆಯಿರಿ ಎಂದು ಸವಾಲೆಸೆದರು.

Body:ಭಾರತ ಇಂದು ಹೊತ್ತಿ ಉರಿಯುತ್ತಿದೆ ಅಂದರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರೇ ಕಾರಣ. ಅದಕ್ಕಾಗಿ ಈ ದೇಶದ ಸರ್ವಜನರೂ ಜಾತಿ, ಮತ, ಬೇಧ ಮರೆತು ಭಾರತ ದೇಶವನ್ನು ಉಳಿಸಲು ಇಲ್ಲಿಂದಲೇ ಹೋರಾಟ ವನ್ನು ಪ್ರಾರಂಭಿಸಬೇಕು. ಎನ್ ಆರ್ ಸಿ ಮುಖಾಂತರ ತಂದ ಸಿಎಬಿ ಮಸೂದೆ ಸಂವಿಧಾನಕ್ಕೆ ವಿರುದ್ಧವಾದುದು. ಇದನ್ನು ಈ ದೇಶದ ಯಾರೂ ಕೂಡಾ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ನ ಕಾರ್ಯಕರ್ತರಾಗಿ ನಾವು ಯಾರೂ ಎನ್ ಆರ್ ಸಿಗೆ ನಮ್ಮ ಮಾಹಿತಿ ನೀಡುವುದಿಲ್ಲ. ಕೇಂದ್ರ ಸರಕಾರ ಪೌರತ್ವವಲ್ಲ ನಮ್ಮ ಜೀವ ತೆಗೆದರೂ ಎನ್ ಆರ್ ಸಿಗೆ ನಮ್ಮ ಬೆಂಬಲವಿಲ್ಲ. ಇಡೀ ಭಾರತದಲ್ಲಿ ತಾನು ಭಾರತೀಯ, ನಿಜವಾದ ದೇಶ ಪ್ರೇಮಿ‌ ಎಂದು ಸರ್ಟಿಫಿಕೇಟ್ ಪಡೆದು ಸಾಬೀತು ಮಾಡಬೇಕಿದ್ದರೆ ಅದು ಅಮಿತ್ ಷಾ ಹಾಗೂ ನರೇಂದ್ರ ಮೋದಿ ಮಾಡಬೇಕು ಎಂದು ಯು.ಟಿ.ಖಾದರ್ ಕಿಡಿ ಕಾರಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಭಾರತವನ್ನು ಬ್ರಿಟಿಷರು ವಿಭಜನೆ ಮಾಡಿದ ರೀತಿಯಲ್ಲಿ ಮಾರಕ ಕಾನೂನುಗಳನ್ನು ಜಾರಿಗೊಳಿಸಿ ದೇಶದ್ರೋಹದ ಕೃತ್ಯ ನಡೆಸುತ್ತಿದ್ದಾರೆ. ಒಂದೊಂದು ಚುನಾವಣೆಗೂ ಒಂದೊಂದು ಕಾನೂನು ಜಾರಿಗೊಳಿಸುತ್ತಿದ್ದಾರೆ‌. ಉತ್ತರ ಪ್ರದೇಶದ ಚುನಾವಣೆ ಸಂದರ್ಭ ನೋಟ್ ಬ್ಯಾನ್, ಹರಿಯಾಣ - ಮಹಾರಾಷ್ಟ್ರ ಚುನಾವಣೆಗೆ 370ನೇ ವಿಧಿ ರದ್ದು, ಈಗ ಜಾರ್ಖಾಂಡ್ ಹಾಗೂ ಪಶ್ಚಿಮ ಬಂಗಾಳದ ಚುನಾವಣೆ ಬರುತ್ತದೆ ಎಂದು ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಯತ್ನ ಮಾಡುತ್ತಿದ್ದಾರೆ ಎಂದು ಯು.ಟಿ‌.ಖಾದರ್ ಹೇಳಿದರು.

Conclusion:ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳ ಮಧ್ಯೆ ವೈಮನಸ್ಸನ್ನು ಹುಟ್ಟಿಸುವ ಕಾರ್ಯ ನಡೆದಿದೆ. ಬಾಬರಿ ಮಸೀದಿ ಹಾಗೂ ರಾಮ ಮಂದಿರದ ವಿಷಯದಲ್ಲಿ ಏನೂ ಮಾತನಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದರೆ ಮತ್ತೆ ಜನರನ್ನು ಕೆರಳಿಸುವ ಇಂಥವರ ವಿರುದ್ಧ ಪೊಲೀಸ್ ಇಲಾಖೆ ಏನು ಕ್ರಮ ಕೈಗೊಂಡಿದೆ. ದ.ಕ.ಜಿಲ್ಲಾ ಎಸ್ಪಿಯವರು ಈ ಪ್ರಕರಣದ ಬಗ್ಗೆ ಸುಮೋಟ್ ಕೇಸ್ ದಾಖಲಿಸಲಿಲ್ಲ. ಅತ್ಯಂತ ದುರಾದೃಷ್ಟಕರವಾದ ಸಂಗತಿ ಎಂದರೆ ಉಪ ರಾಜ್ಯಪಾಲೆ ಕಿರಣ್ ಬೇಡಿ ಈ ಸಂದರ್ಭ ಭಾಗವಹಿಸಿದ್ದು, ಇದನ್ನು ಇನ್ನಷ್ಟು ಬೇರೆ ಕಡೆಗಳಲ್ಲಿ ಈ ಬಗ್ಗೆ ಹೇಳಿಕೊಂಡು ಬಂದರೆ ಈ ದೇಶದ ಪರಿಸ್ಥಿತಿ ಯಾವ ಕಡೆಗೆ ಹೋಗಲಿದೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಆದ್ದರಿಂದ ದ.ಕ.ಜಿಲ್ಲೆಯ ಸರ್ವ ಜನರೂ ಕಿರಣ್ ಬೇಡಿ ವಿರುದ್ಧ ಕೇಂದ್ರ ಸರಕಾರ ಹಾಗೂ ರಾಷ್ಟ್ರಪತಿಗೆ ಪತ್ರ ಬರೆದು ಅವರನ್ನು ಕಿತ್ತೊಗೆಯುವ ಕೆಲಸ ಮಾಡಬೇಕಾಗಿದೆ ಎಂದು ಯು.ಟಿ.ಖಾದರ್ ಆಗ್ರಹಿಸಿದರು.

ಈ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ದ.ಕ.ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಲೆಟ್ ಪಿಂಟೊ, ದ.ಕ.ಜಿಲ್ಲಾ ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಮಿಥುನ್ ರೈ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

Reporter_Vishwanath Panjimogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.