ETV Bharat / state

ಬಿಜೆಪಿಯ ದ್ವೇಷ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ: ಸೂರಜ್ ಹೆಗ್ಡೆ - Congress Meeting in mangalore

ಕಾಂಗ್ರೆಸ್ ಮುಖಂಡ ಡಿಕೆಶಿಯವರು ಎಲ್ಲಾ ಸಮನ್ಸ್‌ಗೂ ಹಾಜರಾಗಿದ್ದಾರೆ. ಆದರೆ ಈವರೆಗೆ ಇಡಿಯವರು ಎಡಿಆರ್ ಯಾಕೆ ಕೊಟ್ಟಿಲ್ಲ? ಎಫ್ಐಆರ್ ಯಾಕೆ ದಾಖಲಿಸಿಲ್ಲ? ಮೂರು ವರ್ಷಗಳಿಂದ ಈ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇನ್ನು ಎಷ್ಟು ದಿನ ಇದೇ ರೀತಿ ಮುಂದೂಡುತ್ತಾರೆ ಎಂದು ಸೂರಜ್​ ಹೆಗ್ಡೆ ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿಯ ದ್ವೇಷ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ : ಸೂರಜ್ ಹೆಗ್ಡೆ
author img

By

Published : Sep 15, 2019, 3:19 PM IST

ಮಂಗಳೂರು: ದೇಶದಲ್ಲಿ ಯಾವುದೇ ವಿರೋಧ ಪಕ್ಷಗಳು ಉಳಿಯಲೇಬಾರದು ಎಂಬ ಉದ್ದೇಶದಿಂದ ಇಡಿಯವರ ಮೂಲಕ ರಾಜಕಾರಣಿಗಳಿಗೆ ಬಿಜೆಪಿಗೆ ಕಿರುಕುಳ ನೀಡುತ್ತಿದೆ. ಅಲ್ಲದೆ ಅವರ ಮನೆಯವರನ್ನು ಕರೆಸಿ ಅವರಿಗೆ ಕಿರುಕುಳ ಕೊಡಿಸುತ್ತಿದೆ. ಈ ರೀತಿಯಲ್ಲಿ ಬಿಜೆಪಿ ನಡೆಸುತ್ತಿರುವ ದ್ವೇಷದ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಾಂಗ್ರೆಸ್ ಮುಖಂಡ, ಶಕ್ತಿ ಪ್ರಾಜೆಕ್ಟ್​ನ ಮುಖ್ಯ ಪ್ರವರ್ತಕ ಸೂರಜ್ ಹೆಗ್ಡೆ ಕಿಡಿಕಾರಿದರು.

ಬಿಜೆಪಿಯ ದ್ವೇಷ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ : ಸೂರಜ್ ಹೆಗ್ಡೆ

ಮುಖ್ಯಮಂತ್ರಿಯವರು ಡಿಕೆಶಿ ಬಗ್ಗೆ ಅನುಕಂಪ ಇದೆ. ಈ ತರಹ ನಡೆದುಕೊಳ್ಳಬಾರದಿತ್ತು ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಹೇಗಿದೆ. ಎರಡು ವರ್ಷಗಳ ಕಾಲ ನಷ್ಟದಲ್ಲಿದ್ದ ಅಮಿತ್ ಶಾ ಅವರ ಮಗನ ಕಂಪನಿ ಒಂದೇ ವರ್ಷದಲ್ಲಿ 80 ಕೋಟಿ ರೂ. ಲಾಭ ಗಳಿಸುತ್ತದೆ. ಆದ್ರೆ ಇಡಿಯವರು ಇಲ್ಲಿವರೆಗೆ ಸಮನ್ಸ್ ಯಾಕೆ ನೀಡಿಲ್ಲ ಎಂದು ಪ್ರಶ್ನೆ ಮಾಡಿದರು.

ರೈತರ ಸಾಲಮನ್ನಾದ ಬಗ್ಗೆ ಕಾಂಗ್ರೆಸ್‌ಗೆ ಪ್ರಶ್ನೆ ಕೇಳುತ್ತಿದ್ದ ಬಿಜೆಪಿಗರು, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಇಷ್ಟು ಸಮಯವಾದರೂ ಯಾಕೆ ಅದರ ಬಗ್ಗೆ ಚಿಂತನೆ ಮಾಡಿಲ್ಲ. ಮೂರು ನಾಲ್ಕು ವರ್ಷಗಳಿಂದ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇದ್ದರೆ, ಈಗ ಪ್ರವಾಹದ ಭೀಕರತೆಯಿಂದ ಎಲ್ಲಾ ಕಡೆಗಳಲ್ಲಿ ಹಾನಿಯಾಗಿದೆ. ಎನ್ ಡಿ ಆರ್ ಎಫ್ ಗೆ ನಾವು ಇದನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ಎಂದು ಘೋಷಣೆ ಮಾಡಿ ಎಂದು ಕೇಳಿಕೊಂಡಿದ್ದೆವು. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ. ಆದರೆ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.

Intro:ಮಂಗಳೂರು: ಬಿಜೆಪಿಯು ಯಾವುದೇ ಪ್ರತಿಪಕ್ಷಗಳು ಉಳಿಯಲೇಬಾರದು ಎಂಬ ಉದ್ದೇಶದಿಂದ ಇಡಿಯವರ ಮೂಲಕ ರಾಜಕಾರಣಿಗಳಿಗೆ ಕಿರುಕುಳ ನೀಡುತ್ತಿದೆ. ಅಲ್ಲದೆ ಅವರ ಮನೆಯವರನ್ನು ಕರೆಸಿ ಅವರಿಗೆ ಕಿರುಕುಳ ಕೊಡಿಸುತ್ತಿದೆ. ಈ ರೀತಿಯಲ್ಲಿ ಬಿಜೆಪಿ ನಡೆಸುತ್ತಿರುವ ದ್ವೇಷದ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಾಂಗ್ರೆಸ್ ಮುಖಂಡ, ಶಕ್ತಿ ಪ್ರಾಜೆಕ್ಟ್ ನ ಮುಖ್ಯ ಪ್ರವರ್ತಕ ಸೂರಜ್ ಹೆಗ್ಡೆ ಹೇಳಿದರು.

ಡಿಸಿಸಿ ಅಧ್ಯಕ್ಷ ಬದಲಾವಣೆಯ ವೀಕ್ಷಕ ವಿವರಣೆಗೆ ದ.ಕ.ಜಿಲ್ಲೆಗೆ ಆಗಮಿಸಿದ ಅವರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಮುಖಂಡ ಡಿಕೆಶಿಯವರು ಎಲ್ಲಾ ಸಮನ್ಸ್ ಗಳಿಗೂ ಹಾಜರಾಗಿದ್ದಾರೆ. ಆದರೆ ಈವರೆಗೆ ಇಡಿಯವರು ಎಡಿಆರ್ ಯಾಕೆ ಕೊಟ್ಟಿಲ್ಲ. ಎಫ್ಐಆರ್ ಯಾಕೆ ದಾಖಲಿಸಿಲ್ಲ. ಮೂರು ವರ್ಷಗಳಿಂದ ಈ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇನ್ನು ಎಷ್ಟು ದಿನ ಇದೇ ರೀತಿ ಮುಂದೂಡುತ್ತಾರೆ ಎಂದು ಅವರು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ಡಿಕೆಶಿ ಬಗ್ಗೆ ಅನುಕಂಪ ಇದೆ ಈ ತರಹ ನಡೆದುಕೊಳ್ಳಬಾರದಿತ್ತು ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಹೇಗಿದೆ. ಎರಡು ವರ್ಷಗಳ ಕಾಲ ನಷ್ಟದಲ್ಲಿದ್ದ ಅಮಿತ್ ಷಾ ಅವರ ಮಗನ ಕಂಪನಿ ಒಂದೇ ವರ್ಷದಲ್ಲಿ 80 ಕೋಟಿ ರೂ ಲಾಭ ಗಳಿಸುತ್ತದೆ. ಇಡಿಯವರು ಇಲ್ಲಿವರೆಗೆ ಸಮನ್ಸ್ ಯಾಕೆ ನೀಡಿಲ್ಲ. ಶಾರದಾ ಸ್ಕ್ಯಾಮ್ ನಲ್ಲಿ ಮುಕುಲ್ ರಾಯ್, ಹೇಮಂತ್ ಶರ್ಮ ಹೆಸರಿದೆ. ಅದನ್ನು ತನಿಖೆಗೆ ಕೊಟ್ಟಿದ್ದು ಬಿಜೆಪಿಯವರು. ಆದರೆ ಅದರ ಬಗ್ಗೆ ಈವರೆಗೆ ಯಾಕೆ ತನಿಖೆ ಕೈಗೊಂಡಿಲ್ಲ. ಅಂದರೆ ನಾಳೆ ಡಿಕೆಶಿಯವರು ಬಿಜೆಪಿ ಪಕ್ಷಕ್ಕೆ ಸೇರಿದರೆ ಅವರ ಬಗ್ಗೆಯೂ ನೀವು ಕ್ರಮ ಕೈಗೊಳ್ಳುದಿಲ್ಲವಾ ಎಂದು ಸೂರಜ್ ಹೆಗ್ಡೆ ವ್ಯಂಗ್ಯ ವಾಡಿದರು.

Body:ರೈತರ ಸಾಲಮನ್ನಾದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಕೇಳುತ್ತಿದ್ದ ಬಿಜೆಪಿಗರು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಇಷ್ಟು ಸಮಯವಾದರೂ ಯಾಕೆ ಅದರ ಬಗ್ಗೆ ಚಿಂತನೆ ಮಾಡಿಲ್ಲ. ಮೂರು ನಾಲ್ಕು ವರ್ಷಗಳಿಂದ ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇದ್ದರೆ, ಈಗ ಪ್ರವಾಹದ ಭೀಕರತೆಯಿಂದ ಎಲ್ಲಾ ಕಡೆಗಳಲ್ಲಿ ಹಾನಿಯಾಗಿದೆ. ಎನ್ ಡಿಆರ್ ಎಫ್ ಗೆ ನಾವು ಇದನ್ನು ರಾಷ್ಟ್ರೀಯ ಪ್ರಕೃತಿ ವಿಕೋಪ ಎಂದು ಘೋಷಣೆ ಮಾಡಿ ಎಂದು ಕೇಳಿಕೊಂಡಿದ್ದೆವು. ಗೃಹ ಮಂತ್ರಿ ಅಮಿತ್ ಷಾ, ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಬಂದು ವೀಕ್ಷಣೆ ಮಾಡಿ ಹೋಗಿದ್ದಾರೆ. ಆದರೆ ಈವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.

ಕೇಂದ್ರ ಸರಕಾರ ವಾಹನ ದಂಡ ವಸೂಲಾತಿಯ ಮೂಲಕ ಜನರ ಹಣವನ್ನು ಯಾವ ರೀತಿಯಲ್ಲಿ ಪಡೆದುಕೊಳ್ಳಬೇಕು ಎಂದು ಯೋಚನೆ ಮಾಡುವುದು ಬಿಟ್ಟು ಜನರ ಕಷ್ಟಕ್ಕೆ ಸ್ಪಂದಿಸಲಿ. ನೆರೆ ಸಂತ್ರಸ್ತರಿಗೆ ಶೀಘ್ರದಲ್ಲೇ ಪರಿಹಾರ ಕೊಡುವ ವ್ಯವಸ್ಥೆಯಾಗಲಿ ಎಂದು ನಾವು ಹೇಳಿದರೆ, ಮಂತ್ರಿ ಜೆ.ಸಿ.ಮಾಧುಸ್ವಾಮಿಯವರು ಕರ್ನಾಟಕದಲ್ಲಿ ಅಷ್ಟು ದೊಡ್ಡ ಪ್ರವಾಹ ಭೀತಿಯಿಲ್ಲ ಎಂದು ಹೇಳುತ್ತಿದ್ದಾರೆ. ಯಾವ ರೀತಿಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಅವರು ಹೇಳಿದರು.

ಮಾಜಿ ಸಚಿವರಾದ ರಮಾನಾಥ ರೈ, ಶಕುಂತಲಾ ಶೆಟ್ಟಿ, ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಡಿಸಿಸಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.