ಉಳ್ಳಾಲ, ದಕ್ಷಿಣ ಕನ್ನಡ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ಫೇಸ್ಬುಕ್ ಪೇಜ್ನಲ್ಲಿ ಬರೆದಿದ್ದ ಕಾಂಗ್ರೆಸ್ ಮುಖಂಡ ಎನ್ನಲಾದ ಲುಕ್ಮಾನ್ ಅಡ್ಯಾರ್ ಎಂಬಾತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಾಕ್ ಸ್ವಾತಂತ್ರ್ಯದ ನೆಪದಲ್ಲಿ ದೇಶದ ಪ್ರಧಾನಿಯನ್ನು ಏಕವಚನದಲ್ಲಿ ಸಂಬೋಧಿಸಿದ್ದಲ್ಲದೆ, ನರಕ ಯಾತನೆ ಅನುಭವಿಸುವಂತಾಗಲು ಪ್ರಾರ್ಥಿಸಬೇಕೆಂದು ತನ್ನ ಫೇಸ್ಬುಕ್ ಪೇಜ್ನಲ್ಲಿ ಲುಕ್ಮಾನ್ ಮನವಿ ಮಾಡಿ ವಿಕೃತಿ ಮೆರೆದಿದ್ದನು.
ಇದನ್ನೂ ಓದಿ: ಪ್ರೀತ್ಸೋದ್ ತಪ್ಪಾ ಅಂತ ಅವರಿಬ್ಬರೂ ಒಂದಾದ್ರೇ.. ಹುಡುಗಿ ತಂದೆ ಪ್ರಿಯಕರನ ಕೊಲೆ ಮಾಡ್ಬಿಟ್ಟ..
ಬಿಜೆಪಿ ಮುಖಂಡ ಫಜಲ್ ಅಸೈಗೋಳಿ ದೂರು ದಾಖಲಿಸಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಪವಿತ್ರ ಮೆಕ್ಕಾ ಸೇರಿದಂತೆ ವಿಶ್ವದಾದ್ಯಂತ ಭಾರತದ ಒಳಿತಿಗಾಗಿ ಪ್ರಾರ್ಥನೆ ನಡೆಯುತ್ತಿದೆ.
ವಿಶ್ವದ ನಾನಾ ರಾಷ್ಟ್ರಗಳು ಭಾರತಕ್ಕೆ ಸಹಾಯ ಹಸ್ತ ಚಾಚುತ್ತಿರುವಾಗ ಲುಕ್ಮಾನ್ ಅಡ್ಯಾರ್ ಎಂಬ ವ್ಯಕ್ತಿ ಪವಿತ್ರ ರಂಜಾನ್ ತಿಂಗಳಲ್ಲೂ ವಿಷ ಬೀಜವನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.