ETV Bharat / state

ಪೆಟ್ರೋಲ್​, ಡೀಸೆಲ್ ಬೆಲೆ ಹೆಚ್ಚಳ : ದ.ಕ.ದಲ್ಲಿ ವಾಹನಗಳಿಗೆ ಸಿಎನ್​ಜಿ ಅಳವಡಿಸಿದ ಸವಾರರಿಗೆ ಸಂಕಷ್ಟ

ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ಕಾದರೂ ವಾಹನಗಳಿಗೆ ಸಿಎನ್​ಜಿ ಸಿಗುತ್ತದೆ ಎಂಬ ಖಾತರಿಯು ಇಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಎನ್​ಜಿ ಮದರ್ ಸ್ಟೇಷನ್ ಆರಂಭದವರೆಗೂ ವಾಹನಗಳಿಗೆ ಸಿಎನ್​ಜಿ ಅಳವಡಿಸುವುದನ್ನು ಮುಂದೂಡಿ ಎನ್ನುತ್ತಾರೆ ಸಿಎನ್​ಜಿ ಬಳಕೆದಾರರು..

cng-gas-problem-in-dakshina-kannada-district
ಸಿಎನ್​ಜಿ ಕಿಟ್
author img

By

Published : Oct 12, 2021, 8:27 PM IST

Updated : Oct 14, 2021, 12:20 PM IST

ಮಂಗಳೂರು : ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗಿದ್ದರಿಂದ ನಗರದ ವಾಹನ ಸವಾರರು ಪರ್ಯಾಯ ಮಾರ್ಗ ಹುಡುಕುತ್ತಾ ಕೆಲವರು ಇಲೆಕ್ಟ್ರಿಕ್ ವಾಹನಕ್ಕೆ ಮೊರೆ ಹೋದ್ರೆ, ಮತ್ತೆ ಕೆಲವರು ಎಲ್​ಪಿಜಿ, ಸಿಎನ್​ಜಿ ಅಳವಡಿಕೆಗೆ ಮುಂದಾದ್ರು. ಆದ್ರೆ, ಇಂದು ಸಿಎನ್​​ಜಿ ಪೂರೈಕೆಯಲ್ಲಿ ಸಾಕಷ್ಟು ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆ ಮತ್ತೆ ವಾಹನ ಸವಾರರು ಪರದಾಡುವಂತಾಗಿದೆ.

ಸಿಎನ್​ಜಿ ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್ (ಸಿಎನ್​ಜಿ) ಮೂಲಕ ವಾಹನಗಳನ್ನು ಓಡಿಸಲು ಸಾಧ್ಯವಾದ ಹಿನ್ನೆಲೆ ಕೆಲವರು ಸಿಎನ್​ಜಿಯನ್ನು ತಮ್ಮ ವಾಹನಗಳಿಗೆ ಅಳವಡಿಸಿದರು.

ಅದೇ ರೀತಿ ಮಂಗಳೂರಿನಲ್ಲಿಯೂ ಸಹ ಹಲವು ರಿಕ್ಷಾಗಳು, ಕಾರುಗಳಲ್ಲಿ ಸಿಎನ್​ಜಿ ಕಿಟ್ ಅಳವಡಿಸಲಾಗಿದೆ‌. ಸದ್ಯ ಇದೆ ವಾಹನಸವಾರರಿಗೆ ಮುಳ್ಳಾಗಿದ್ದು, ಮಂಗಳೂರಿನಲ್ಲಿ ಸಿಎನ್​ಜಿ ಪೂರೈಸುವ ಬಂಕ್​ಗಳ ಕೊರತೆ ಹಿನ್ನೆಲೆ ಜನ ಪರದಾಡುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್, ಮುಲ್ಕಿ, ಹೊಸಬೆಟ್ಟು, ಹಳೆಯಂಗಡಿ ಮತ್ತು ಕಾವೂರುನಲ್ಲಿ ಮಾತ್ರ ಸಿಎನ್​ಜಿ ಬಂಕ್​ಗಳು ಇವೆ. ಇಲ್ಲಿ ಸಿಎನ್​ಜಿ ಪೂರೈಕೆಯಾಗುವ ಸಮಯ ಕಾದು ವಾಹನ ಸವಾರರು ಕ್ಯೂನಲ್ಲಿ ಗಂಟೆಗಟ್ಟಲೆ ನಿಂತು ತಮ್ಮ ವಾಹನಗಳಿಗೆ ಗ್ಯಾಸ್​ ತುಂಬಿಸುವ ಪರಿಸ್ಥಿತಿ ಬಂದಿದೆ.

ಪೆಟ್ರೋಲ್​, ಡೀಸೆಲ್ ಬೆಲೆ ಹೆಚ್ಚಳ : ದ.ಕ.ದಲ್ಲಿ ವಾಹನಗಳಿಗೆ ಸಿಎನ್​ಜಿ ಅಳವಡಿಸಿದ ಸವಾರರಿಗೆ ಸಂಕಷ್ಟ

ದ.ಕ ಜಿಲ್ಲೆಯಲ್ಲಿ‌ ಪ್ರಸ್ತುತ 600ಕ್ಕೂ ಅಧಿಕ ವಾಹನಗಳು ಸಿಎನ್​ಜಿ ಕಿಟ್ ಅಳವಡಿಸಿಕೊಂಡಿವೆ. ಅವರಿಗೆ ಬೇಕಾದಷ್ಟು ಸಿಎನ್​ಜಿ ಪೂರೈಕೆ ಯಾಗುತ್ತಿಲ್ಲ. ಇದರಿಂದ ಬೇಸತ್ತಿರುವ ಸಿಎನ್​ಜಿ ಬಳಕೆದಾರರ ಸಂಘ ದಕ್ಷಿಣ ಕನ್ನಡದಲ್ಲಿ ಮದರ್ ಸ್ಟೇಷನ್ ಸ್ಥಾಪನೆಯಾಗಬೇಕೆಂಬುದು ಆಗ್ರಹಿಸಿದೆ.

ಸದ್ಯ ಜಿಲ್ಲೆಯಲ್ಲಿ ಇರುವ ಸಿಎನ್​ಜಿ ವಾಹನಗಳಿಗೆ ಬೇಕಾದಷ್ಟು ಗ್ಯಾಸ್​​ ಲಭ್ಯವಾಗುತ್ತಿಲ್ಲ. ಇದರ ಮಧ್ಯೆ ಬೇರೆ ಜಿಲ್ಲೆಗಳಿಂದ ಬರುವ ಲಾರಿಗಳು ಇಲ್ಲಿಂದಲೇ ಸಿಎನ್​ಜಿ ತುಂಬಿಸಿಕೊಂಡು ಹೋಗುತ್ತಿದೆ.

ಗಂಟೆ ಗಟ್ಟಲೆ ಸರತಿ ಸಾಲಿನಲ್ಲಿ ಕಾದರೂ ವಾಹನಗಳಿಗೆ ಸಿಎನ್​ಜಿ ಸಿಗುತ್ತದೆ ಎಂಬ ಖಾತರಿಯು ಇಲ್ಲ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿಎನ್​ಜಿ ಮದರ್ ಸ್ಟೇಷನ್ ಆರಂಭದವರೆಗೂ ವಾಹನಗಳಿಗೆ ಸಿಎನ್​ಜಿ ಅಳವಡಿಸುವುದನ್ನು ಮುಂದೂಡಿ ಎನ್ನುತ್ತಾರೆ ಸಿಎನ್​ಜಿ ಬಳಕೆದಾರರು.

Last Updated : Oct 14, 2021, 12:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.