ಸುಬ್ರಹ್ಮಣ್ಯ: ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಠಿ ಮಹೋತ್ಸವ ಆರಂಭಗೊಂಡಿದ್ದು, ಈ ಹಿಂದಿನಿಂದಲೂ ಚಂಪಾಷಷ್ಠಿ ಸಂದರ್ಭದಲ್ಲಿ ಭಕ್ತಾದಿಗಳು ನಡೆಸುತ್ತಿದ್ದ ಎಡೆಸ್ನಾನ ಸೇವೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷವೂ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.
ಚಂಪಾಷಷ್ಠಿ ಮಹೋತ್ಸವದ ಚೌತಿ, ಪಂಚಮಿ, ಷಷ್ಠಿ (ಡಿ. 7,8 ಹಾಗೂ9ರಂದು) ದಿನಗಳಂದು ದೇವಸ್ಥಾನದ ಹೊರಾಂಗಣದಲ್ಲಿ ಭಕ್ತಾದಿಗಳು ಹರಕೆಯ ರೂಪದಲ್ಲಿ ಸ್ವಯಂ ಆಗಿ ನಡೆಸುತ್ತಿದ್ದ ಎಡೆಸ್ನಾನ ಸೇವೆಯನ್ನು ಕಳೆದ ವರ್ಷದಂತೆ ಈ ವರ್ಷವೂ ರದ್ದು ಮಾಡಲಾಗಿದೆ. ಕೋವಿಡ್ 19 ಕಾರಣ ಕಳೆದ ವರ್ಷವೂ ಎಡೆಸ್ನಾನ ಸೇವೆ ರದ್ದುಗೊಂಡಿತ್ತು.
ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಲ್ಲಿ ಪುತ್ತೂರು ಉಪ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಅಧಿಕಾರಿಗಳ ಮತ್ತು ಆಡಳಿತ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ವಾರೇವ್ಹಾ.. ಹೈದರಾಬಾದ್ನ 3 ಅಡಿ ಎತ್ತರದ ವ್ಯಕ್ತಿಗೆ ಡ್ರೈವಿಂಗ್ ಲೈಸನ್ಸ್.. ಚಾಲನಾ ಪರವಾನಿಗೆ ಪಡೆದ ದೇಶದ ಮೊದಲ ಕುಬ್ಜ..