ಮಂಗಳೂರು: ಆಯುಷ್ ಎಂದಿಗೂ ಅಲೋಪಥಿಯೊಂದಿಗೆ ಸ್ಪರ್ಧಿಸುತ್ತಿಲ್ಲ. ಆಯುಷ್ನಿಂದ ರೋಗಿಗಳು ಗುಣಮುಖರಾಗುವುದು ಮುಖ್ಯ. ಆದ್ದರಿಂದ ಆಯುಷ್ ವೈದ್ಯಕೀಯ ವಿಜ್ಞಾನವನ್ನು ವ್ಯವಹಾರ ದೃಷ್ಟಿಯಿಂದ ನೋಡದೆ, ಸೇವೆಯಾಗಿ ಪರಿಗಣಿಸಿ ಎಂದು ಕೇಂದ್ರ ಸರಕಾರದ ಆಯುಷ್ ಮಂತ್ರಿ ಶ್ರೀಪಾದ ಯಸ್ಸೋ ನಾಯಕ್ ಹೇಳಿದರು.
ನಗರದ ವೆನ್ಲಾಕ್ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆಯುಷ್ ಫೌಂಡೇಶನ್ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಯುಷ್ನ ಯಶಸ್ಸಿನ ಹಿಂದೆ ನಾನೊಬ್ಬ ಮಾತ್ರ ಅಲ್ಲ, ಎಲ್ಲರ ಪ್ರಯತ್ನದಿಂದ ಯಶಸ್ಸು ಸಾಧಿಸಲು ಸಾಧ್ಯವಾಯಿತು ಎಂದರು.
ವೈದ್ಯಕೀಯ ವೃತ್ತಿಯನ್ನು ಸೇವೆಯಾಗಿ ಪರಿಗಣಿಸಿ, ಈ ಹಿನ್ನೆಲೆಯಲ್ಲಿ ದೇಶದ ಜನತೆ ಆರೋಗ್ಯವಾಗಿದ್ದಲ್ಲಿ ದೇಶ ಯಾವುದೇ ತೊಂದರೆಗೆ ಒಳಗಾಗದೆ ಅಭಿವೃದ್ಧಿ ಕಾಣುತ್ತದೆ. ಇದು ದೇಶದ ಪ್ರಗತಿಗೂ ಪೂರಕ. ಇದರಿಂದ ನಾವು ಯಶಸ್ಸನ್ನೂ ಸಾಧಿಸಬಹುದು ಅಭಿಪ್ರಾಯ ಪಟ್ಟರು.