ಮಂಗಳೂರು (ದ.ಕ): ಕರ್ತವ್ಯದ ಸಮಯದಲ್ಲಿ ಸಿಸಿಬಿ ಪೊಲೀಸರು ನಗರದ ಕುತ್ತಾರ್ ಬಾರ್ನಲ್ಲಿ ಪಾರ್ಟಿ ಮಾಡಿದ್ದಾರೆಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರು ಸಿಸಿಬಿ ಪೊಲೀಸರು ಕುತ್ತಾರಿನ ಬಾರ್ ಒಂದರ ಹೊರಗಡೆ ವಾಹನ ನಿಲ್ಲಿಸಿ 8 ಮಂದಿ ಮದ್ಯ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ವಿಡಿಯೋ ವೈರಲ್ ಆಗಿದೆ. ಈ ಸಂದರ್ಭ ಕ್ರಿಕೆಟ್ ಬುಕ್ಕಿಗಳು ಜೊತೆಗಿದ್ದರು ಎಂಬ ಆರೋಪಗಳೂ ಸಹ ಕೇಳಿ ಬಂದಿದೆ.
ಈ ಕುರಿತು ಡಿಸಿಪಿ ಹರಿರಾಂ ಶಂಕರ್ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದು, ಪೊಲೀಸ್ ಟಿಟಿ ವಾಹನ ಬಾರ್ ಬಳಿಗೆ ಯಾಕೆ ಹೋಗಿದೆ, ಸಿಸಿಬಿ ಪೊಲೀಸರು ಬಾರ್ ಒಳಗೆ ಯಾಕೆ ತೆರಳಿದ್ದಾರೆಂದು ಪರಿಶೀಲನೆ ನಡೆಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: ಮನೆಗೆ ಬೆಂಕಿ: ಪ್ಲಾಸ್ಟಿಕ್ ಉತ್ಪನ್ನಗಳು ಅಗ್ನಿಗಾಹುತಿ