ಮಂಗಳೂರು: ಶಂಕಿತ ಡೆಂಘಿ ಮಹಾಮಾರಿಗೆ ಬಂಟ್ವಾಳದ ಉದ್ಯಮಿಯೋರ್ವರು ಬಲಿಯಾಗಿದ್ದಾರೆ. ಸಪ್ತವೆಂಚರ್ಸ್ನ ಪಾಲುದಾರ ಪ್ರಶಾಂತ್ ಸರಳಾಯ ಶಂಕಿತ ಡೆಂಘಿ ಜ್ವರದಿಂದ ಸಾವನ್ನಪ್ಪಿದವರು.
ನಾಲ್ಕು ದಿನಗಳ ಹಿಂದೆ ಡೆಂಘಿ ಜ್ವರಕ್ಕೆ ತುತ್ತಾಗಿ ಮಂಗಳೂರಿನ ಕೆಎಂಸಿ ಆಸ್ಪತ್ರೆ ದಾಖಲಾಗಿದ್ದ ಪ್ರಶಾಂತ್ ಸರಳಾಯ ಶುಕ್ರವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ದೇಲಂಪಾಡಿಯವರಾದ ಪ್ರಶಾಂತ್ ಸರಳಾಯ ಸದ್ಯ ಬಂಟ್ವಾಳ ತಾಲೂಕಿನ ಪೆರಮೊಗರು ಬಳಿ ವಾಸಿಸುತ್ತಿದ್ದರು. ಮೃತರು ತಂದೆ ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಇವರು, ಪುತ್ತೂರು ಜೇಸಿಯ ಸಕ್ರಿಯ ಸದಸ್ಯರಾಗಿದ್ದರು.