ಬಂಟ್ವಾಳ: ಅಖಿಲ ಕರ್ನಾಟಕ ಬ್ರಾಹ್ಮಣ ಪುರೋಹಿತ ಮತ್ತು ಅರ್ಚಕರ ಪರಿಷತ್ ( ರಿ.) ಬಂಟ್ವಾಳ, ಮಂಗಳೂರು, ಬೆಳ್ತಂಗಡಿ, ಪುತ್ತೂರು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮತ್ತು ಚಿಂತನ ಮಂಥನ ಕಾರ್ಯಕ್ರಮ ನಡೆಯಿತು.
ನಗರದ ಬ್ರಾಹ್ಮಣ ಪರಿಷತ್ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಕೃಷ್ಣರಾಜ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಜೇಶ್ ನಡ್ವಂತ್ತಿಲ್ಲಾಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಇನ್ನೋರ್ವ ನಿರ್ದೇಶಕರು, ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಡಾ ವೇ.ಮೂ ಬಿ.ಎಸ್ .ರಾಘವೇಂದ್ರ ಭಟ್ ಪರಿಷತ್ತಿನ ಧ್ಯೇಯೋದ್ದೇಶಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಮೀಸಲಾತಿ, ಜಾತಿ ಪ್ರಮಾಣ ಪತ್ರ, ಸಂಘಟನೆ, ಸರ್ಕಾರದ ಅನುದಾನ ಸದ್ಬಳಕೆ ಮೊದಲಾದ ವಿಷಯಗಳ ಕುರಿತು ಚಿಂತನ-ಮಂಥನ, ವಿವಿಧ ತಾಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪದಾಧಿಕಾರಿಗಳಾದ ವೇ.ಮೂ. ಕೃಷ್ಣ ಉಪಾಧ್ಯಾಯ, ವೇ.ಮೂ. ಹರಿ ಉಪಾಧ್ಯಾಯ, ರಾಘವೇಂದ್ರ ಹೊಳ್ಳ, ಶಿಬರೂರು ಅನಂತಪದ್ಮನಾಭ ಆಚಾರ್ಯ, ಧಾರ್ಮಿಕ ಪರಿಷತ್ ಸದಸ್ಯರಾದ ಕಶೆಕೋಡಿ ಸೂರ್ಯನಾರಾಯಣ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಹಾಗೂ ವಿವಿಧ ಪ್ರಮುಖರಾದಪೊಳಲಿ ಗಿರಿಪ್ರಕಾಶ್ ತಂತ್ರಿ, ಡಾ.ಸತ್ಯಕೃಷ್ಣ ಭಟ್, ಶಂಕರನಾರಾಯಣ ಶರ್ಮಾ, ಪ್ರಶಾಂತ್ ಗೋರೆ, ಸುಬ್ರಹ್ಮಣ್ಯ ಭಟ್, ಶಿವರಾಮ ಮಯ್ಯ, ಈಶ್ವರ ಭಟ್, ಶ್ರೀನಿಧಿ ಮುಚ್ಚಿನ್ನಾಯ, ಪೈಕ ವೆಂಕಟ್ರಮಣ ಭಟ್, ರಾಜಗೋಪಾಲ ಆಚಾರ್ಯ, ಸುದರ್ಶನ ಬಲ್ಲಾಳ್, ರಾಘವೇಂದ್ರ ರಾವ್, ಬಾಲಕೃಷ್ಣ ಕಾರಂತ, ಕೆ ವಾಸುದೇವ ಭಟ್ ಮೊದಲಾದವರು ಇದ್ದರು.