ಸುಳ್ಯ: ಬಾಲಕನೊಬ್ಬ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಬಿಗಿದು ಮೃತಪಟ್ಟಿರುವ ಘಟನೆ ಸುಳ್ಯ ಸಮೀಪದ ಚೆಂಬು ಗ್ರಾಮದಲ್ಲಿ ನಡೆದಿದೆ. ಪನೇಡ್ಕ ತಾರಾಕುಮಾರ್ ಎಂಬವರ ಪುತ್ರ ಭರತ್ (10) ಮೃತಪಟ್ಟ ಬಾಲಕ. ಭರತ್ 4 ನೇ ತರಗತಿಯಲ್ಲಿ ಓದುತ್ತಿದ್ದ. ನಿನ್ನೆ ಸಾಯಂಕಾಲ ಮನೆಯಲ್ಲಿ ಜೋಕಾಲಿ ಆಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
![Boy death in swing playing, Boy death in swing playing in Sullia, Sullia news, Sullia crime news, ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ದಾರುಣ ಸಾವು, ಸುಳ್ಯದಲ್ಲಿ ಜೋಕಾಲಿ ಹಗ್ಗ ಕುತ್ತಿಗೆಗೆ ಸಿಲುಕಿ ಬಾಲಕ ದಾರುಣ ಸಾವು, ಸುಳ್ಯ ಸುದ್ದಿ, ಸುಳ್ಯ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/kn-dk-01-chailddeath-av-pho-kac10008_01072021111308_0107f_1625118188_1099.jpg)
ಬಾಲಕನ ಮೃತದೇಹವನ್ನು ಸುಳ್ಯದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಇನ್ನು ಮಡಿಕೇರಿಯ ಉಂಜಿಗನಹಳ್ಳಿಯ ನಿವಾಸಿಗಳಾದ ರಾಜು ಹಾಗೂ ಜಯಂತಿ ದಂಪತಿಯ ಇಬ್ಬರು ಮಕ್ಕಳಾದ ಪ್ರತೀಕ್ಷ (14), ಪೂರ್ಣೆಶ್ (12) ಸಾವನ್ನಪ್ಪಿದ್ದಾರೆ. ಸೀರೆಯಿಂದ ಜೋಕಾಲಿ ಕಟ್ಟಿ ಆಡುತ್ತಿದ್ದಾಗ ಆಕಸ್ಮಿಕವಾಗಿ ಸೀರೆಯೇ ಕೊರಳಿಗೆ ಸುತ್ತಿಕೊಂಡು, ಉಸಿರುಗಟ್ಟಿ ಮಕ್ಕಳು ಮೃತಪಟ್ಟಿದ್ದಾರೆ.