ಮಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ನೇತ್ರಾವತಿ ನದಿಗೆ ಹಾರಿದ ವೃದ್ಧೆಯನ್ನು ಬಂಟ್ವಾಳ ತಾಲೂಕಿನ ಕಡೆಶಿವಾಲಯದಲ್ಲಿ ರಕ್ಷಣೆ ಮಾಡಲಾಗಿದೆ.
ಮಂಜಕ್ಕ ಎಂಬುವರೇ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ ಎನ್ನಲಾಗಿದೆ. ಆಕೆ ಉಪ್ಪಿನಂಗಡಿ ಸಮೀಪ ನದಿಗೆ ಹಾರಿದ್ದು, ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಕಡೆಶಿವಾಲಯದ ಬಳಿ ತೇಲಿ ಬರುತ್ತಿದ್ದಾಗ ಅಂಬಿಗ ಅಬ್ಬಾಸ್ ಎಂಬುವರು ಗಮನಿಸಿ ಅವರನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಘಟನೆಯಲ್ಲಿ ವೃದ್ಧೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.