ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಪ್ರಾಣಾಪಾಯಕ್ಕೆ ಸಿಲುಕುವವರನ್ನು ರಕ್ಷಿಸಲು ನಾಡದೋಣಿ ಬೇಕು ಎನ್ನುವ ಪಾಣೆ ಮಂಗಳೂರು ಪರಿಸರದ ಈಜುಗಾರರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ.
ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಸಭಾಭವನದಲ್ಲಿ ಸೇವಾಂಜಲಿ ರಕ್ಷಕ ನಾಮಾಂಕಿತ ದೋಣಿಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ದೋಣಿ ಹಸ್ತಾಂತರಿಸಿ ಶುಭ ಹಾರೈಸಿದರು. ಗ್ರಾಮಾಂತರ ಠಾಣಾ ಎಸ್ಐ ಪ್ರಸನ್ನ ಲೈಫ್ ಜಾಕೇಟ್ ವಿತರಿಸಿದರು.
ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ, ಏರ್ಯ ಬಾಲಕೃಷ್ಣ ಹೆಗ್ಡೆ ಮತ್ತಿತರರ ಸಹಕಾರದೊಂದಿಗೆ ಅಂದಾಜು 70 ಸಾವಿರ ರೂಪಾಯಿ ವೆಚ್ಚದಲ್ಲಿ ಹೊಸ ನಾಡದೋಣಿಯನ್ನು ಈಜುಗಾರರಿಗೆ ನೀಡಲಾಗಿದೆ.