ETV Bharat / state

ಕಣ್ಣಿಲ್ಲದಿದ್ದರೇನಂತೆ ಕಲಿಸುವ ಛಲವಿದೆ : ಮಂಗಳೂರು ವಿವಿಯಲ್ಲೊಬ್ಬರು ವಿಶೇಷಚೇತನ ಉಪನ್ಯಾಸಕ! - ಉಪನ್ಯಾಸಕನಾಗಿರುವ ಅನ್ವಿತ್ ಕುಮಾರ್

ಮಂಗಳೂರಿನ ಕುಂಪಲದ ಚಿತ್ರಾಂಜಲಿ ನಗರ ಅನ್ವಿತ್ ಕುಮಾರ್ ದೃಷ್ಟಿ ಕಳೆದುಕೊಂಡರೂ ತಮ್ಮ ಸತತ ಪರಿಶ್ರಮದಿಂದ ಇದೀಗ ತನ್ನದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಈ ಸಾಧನೆಯ ಹಾದಿ ಹೀಗಿದೆ..

Professor Anvit Kumar
ವಿಶೇಷ ಚೇತನ ಪ್ರೊಫೆಸರ್ ಅನ್ವಿತ್ ಕುಮಾರ್
author img

By

Published : Jan 27, 2023, 1:23 PM IST

Updated : Jan 27, 2023, 3:53 PM IST

ವಿಶೇಷಚೇತನ ಉಪನ್ಯಾಸಕ ಅನ್ವಿತ್ ಕುಮಾರ್

ಮಂಗಳೂರು: ಕಣ್ಣಿಲ್ಲ, ಕೈಯಿಲ್ಲ ಅಂತ ತನ್ನ ಅಂಗವೈಕಲ್ಯತೆಗೆ ಕಣ್ಣೀರು ಹಾಕುವಂತಹ ಹಲವರಿಗೆ ಮಾದರಿಯಾಗಿದ್ದಾರೆ ಮಂಗಳೂರಿನ ಕುಂಪಲದ ಚಿತ್ರಾಂಜಲಿ ನಗರ ಅನ್ವಿತ್ ಕುಮಾರ್. ಅಂಧರಾಗಿರುವ ಇವರೀಗ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕ. ಮಂಗಳೂರಿನ ಹೊರವಲಯದ ಕುಂಪಲದ ಅನ್ವಿತ್ ಕುಮಾರ್ ವಿಶೇಷ ಚೇತನ ವ್ಯಕ್ತಿ. ಇವರು ತಮ್ಮ ಅಂಗವೈಕಲ್ಯತೆಗೆ ಮರುಗಿ ಮನೆಯಲ್ಲಿ ಕುಳಿತುಕೊಂಡಿಲ್ಲ. ಕಣ್ಣಿಲ್ಲದಿದ್ದರೇನು, ಬದುಕುವ ಛಲ ಇದೆ ಎಂದುಕೊಂಡು ಸಾಧನೆ ಮಾಡಿದ್ದಾರೆ.

ಅನ್ವಿತ್ ಕುಮಾರ್ ರಾಜ್ಯಶಾಸ್ತ್ರದಲ್ಲಿ ಎಂಎ ಪದವಿ ಪೂರೈಸಿದವರು. ಅಂಧರಾಗಿದ್ದುಕೊಂಡೆ ಎಂಎ ವ್ಯಾಸಂಗ ಮಾಡಿದ ಅವರು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮೊದಲ ರ‍್ಯಾಂಕ್​ ಗಳಿಸಿದ್ದರು. ಅವರ ಆಸೆಯಂತೆ ಇದೀಗ ಅತಿಥಿ ಉಪನ್ಯಾಸಕರಾಗಿದ್ದಾರೆ. ಅದು ಕೂಡ ತಾವು ಕಲಿತ ಕಾಲೇಜಿನಲ್ಲಿಯೆ. ಅನ್ವಿತ್ ಕುಮಾರ್ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇದೀಗ ರಾಜ್ಯಶಾಸ್ತ್ರ ವಿಭಾಗಕ್ಕೆ ಅತಿಥಿ ಉಪನ್ಯಾಸಕರಾಗಿದ್ದಾರೆ. ವಾರದಲ್ಲಿ ಎರಡು ದಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾರೆ. ಅನ್ವಿತ್ ಕುಮಾರ್ ಅವರನ್ನು ಮೊದಲಿಗೆ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಆಯ್ಕೆ ಮಾಡಲಾಗಿತ್ತು.

ಕಳೆದ ಒಂದು ತಿಂಗಳಿನಿಂದ ಕೋಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತಿಳಿಸಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಚೇರ್​ಮೆನ್ ಜಯರಾಜ್ ಅಮೀನ್ ಅವರ ಮುತುವರ್ಜಿಯಿಂದ ಅನ್ವಿತ್ ಕುಮಾರ್ ಅವರಿಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸಾಧ್ಯವಾಗುತ್ತಿದೆ. ಅನ್ವಿತ್ ಕುಮಾರ್ ಅವರಿಗೆ ಕಣ್ಣು ದೃಷ್ಟಿ ಹೀನವಾಗಿದ್ದರೂ, ಅವರಲ್ಲಿ ಸಾಧಿಸಬೇಕೆಂಬ ವಿಶಾಲ ದೃಷ್ಟಿ ಕೋನವಿದೆ. ಅವರು ತಮ್ಮ ಶಿಕ್ಷಣದಲ್ಲಿ ಸಾಧನೆ ಮಾಡುತ್ತಲೆ ಮೇಲೆ ಬಂದಿದ್ದಾರೆ. ಅನ್ವಿತ್ ಕುಮಾರ್ ಅವರು ಎಸ್​ಎಸ್​ಎಲ್​ಸಿಯಲ್ಲಿ 87 ಶೇಕಡಾ ಅಂಕ ಗಳಿಸಿದ್ದರು. ಪಿಯುಸಿಯನ್ನು ಕುದ್ರೋಳಿಯ ಗೋಕರ್ಣನಾಥೇಶ್ವರ ಪಿಯು ಕಾಲೇಜಿನಲ್ಲಿ ಮುಗಿಸಿದ ಅವರು ಅಲ್ಲಿಯೂ 88 ಶೇಕಡಾ ಪಡೆದು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದರು.

ಪದವಿಯನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮಾಡಿ ಬಿಎ ಯಲ್ಲಿ 89.5 ಶೇಕಡ ಅಂಕ ಪಡೆದು ಗೋಲ್ಡ್ ಮೆಡಲ್ ಪಡೆದಿದ್ದರು. ಎಂಎ ಸ್ನಾತಕೋತ್ತರ ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮಾಡಿದ ಅವರು ಫಸ್ಟ್ ಱಂಕ್​ ಪಡೆದಿದ್ದರು. ಇದೀಗ ಮಂಗಳೂರು ವಿಶ್ವವಿದ್ಯಾಲಯದಲ್ಲಿ ತಾವು ಕಲಿಯುತ್ತಿದ್ದ ತರಗತಿಯಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸೌಭಾಗ್ಯ ಇವರಿಗೆ ಸಿಕ್ಕಿದೆ.

ಈ ಬಗ್ಗೆ ಮಾತನಾಡಿರುವ ಅವರು, 'ಈ ನನ್ನ ಜರ್ನಿಯಲ್ಲಿ ಹಲವರ ಸಹಕಾರ ಸಿಕ್ಕಿದೆ. ಪ್ರೆಂಡ್ಸ್, ಲೆಕ್ಚರರ್​, ತಾಯಿ, ಎಕ್ಸಾಂ ಬರೆದ ಸಹಾಯಕರು ಅವರೆಲ್ಲರ ಸಪೋರ್ಟ್​ನಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನನಗೆ ಉಪನ್ಯಾಸಕನಾಗಬೇಕೆಂಬುದು ಕನಸಾಗಿತ್ತು. ಇದೀಗ ಉಪನ್ಯಾಸಕನಾಗಿರುವುದು ಬಹಳಷ್ಟು ಖುಷಿ ಕೊಟ್ಟಿದೆ. ಎಂಎ ಮುಗಿಸಿ ಒಂದು ವರ್ಷ ಮನೆಯಲ್ಲಿ ಇದ್ದೆ. ಎರಡು ಮೂರು ಕಡೆ ಅರ್ಜಿ ಸಲ್ಲಿಸಿದ್ದರೂ ಕೆಲಸ ಸಿಗದೆ ಇದ್ದಾಗ ನಿರಾಸೆ ಆಗಿತ್ತು. ಇಲ್ಲಿ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ' ಎನ್ನುತ್ತಾರೆ.

ವಿದ್ಯಾರ್ಥಿನಿ ಭವ್ಯ ಮಾತನಾಡಿ, 'ಅನ್ವಿತ್ ಸರ್ ತುಂಬಾ ಎಫೆಕ್ಟಿವ್ ಆಗಿ ಪಾಠ ಮಾಡುತ್ತಾರೆ. ಯಾವುದೇ ವಿಷಯವನ್ನು ತುಂಬಾ ಸರಳವಾಗಿ ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ. ಅವರು ಅಂಧರಾಗಿದ್ದರೂ ಅದಕ್ಕಿಂತ ಮೀರಿ ನಮಗೆ ಅರ್ಥ ಮಾಡಿಸುತ್ತಾರೆ' ಎನ್ನುತ್ತಾರೆ. ಇನ್ನೂ ತರಗತಿಯಲ್ಲಿ ವಿದ್ಯಾರ್ಥಿಗಳು ಅನ್ವಿತ್ ಕುಮಾರ್ ಅವರಿಗೆ ತರಗತಿಯಿಂದ ಹೋಗುವಾಗ ಮತ್ತು ಬರುವಾಗ ಸಹಾಯ ಮಾಡುತ್ತಾರೆ. ತಮ್ಮ ಸ್ಟಿಕ್ ಮೂಲಕವೇ ಅವರು ತಮ್ಮ ಕಚೇರಿಗೆ ಹೋಗುವುದು ತರಗತಿಯೆಡೆಗೆ ಬರುವುದು ಮಾಡುತ್ತಾರೆ. ವಿದ್ಯಾರ್ಥಿಗಳು ಅನ್ವಿತ್ ಕುಮಾರ್ ಅವರಿಗೆ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ತಮ್ಮ ಕಣ್ಣುಗಳ ದೃಷ್ಟಿ ಹೀನವಾಗಿದ್ದರೂ ಅದಕ್ಕೆ ಮರುಗದೆ ತಮ್ಮ ಗುರಿಯಂತೆ ಉಪನ್ಯಾಸಕನಾಗಿರುವ ಅನ್ವಿತ್ ಕುಮಾರ್ ಎಲ್ಲರಿಗೂ ಮಾದರಿ.

ಇದನ್ನೂ ಓದಿ: ಕಿತ್ತೂರು, ಕಲ್ಯಾಣ ಕರ್ನಾಟಕದಲ್ಲೂ 'ಟಿಪ್ಪು ನಿಜಕನಸುಗಳು' ನಾಟಕ ಪ್ರದರ್ಶನ

Last Updated : Jan 27, 2023, 3:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.