ETV Bharat / state

ಜೇಟ್ಲಿಯವರು ಭಾರತದ ಪರಿವರ್ತನೆಯ ಹರಿಕಾರ: ನಳಿನ್​​ ಕುಮಾರ್ ಕಟೀಲ್​​

ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿರುವ ಅರುಣ್ ಜೇಟ್ಲಿಯವರು ತಮ್ಮ ಚಾಣಕ್ಷತನದಿಂದಲೇ ಯೋಜನೆಗಳನ್ನು ಮಾಡಿ ಅನುಷ್ಠಾನಗೊಳಿಸುವುದರಲ್ಲಿ ಬಹಳ ನಿಸ್ಸೀಮರು. ಅವರ ಅಗಲಿಕೆ ಬೇಸರವುಂಟುಮಾಡಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು.

ಜೇಟ್ಲಿಯವರು ಭಾರತದ ಪರಿವರ್ತನೆಯ ಹರಿಕಾರ: ನಳಿನ್ ಕುಮಾರ್ ಕಟೀಲು
author img

By

Published : Aug 24, 2019, 11:35 PM IST

ಮಂಗಳೂರು: ಭಾರತ ದೇಶ ಇಂದು ಪರಿವರ್ತನೆ ಕಾಣಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿದರೆ, ಇದರ ಹಿಂದಿನ ಹರಿಕಾರ ಅರುಣ್ ಜೇಟ್ಲಿಯವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ಜೇಟ್ಲಿಯವರು ಭಾರತದ ಪರಿವರ್ತನೆಯ ಹರಿಕಾರ: ನಳಿನ್ ಕುಮಾರ್ ಕಟೀಲು

ಮಂಗಳೂರಿನ ಕೊಡಿಯಾಲ್ ಬೈಲ್​ನಲ್ಲಿರುವ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅರುಣ್ ಜೇಟ್ಲಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ನೋಟು ಅಮಾನ್ಯವಾದಾಗ ಯಾವುದೇ ಸಮಸ್ಯೆಗಳಾಗಿಲ್ಲ. ಜೆಎಸ್​ಟಿ ಬಂದಾಗ ವ್ಯಾಪಾರ ನಷ್ಟವಾಗುತ್ತದೆ ಅಂದರು ತೊಂದರೆಯಾಗಿಲ್ಲ. ತ್ರಿವಳಿ ತಲಾಖ್ ಜಾರಿಗೆ ಬಂದಾಗ ಗಲಾಟೆಗಳಾಗುತ್ತವೆ ಎಂಬ ಮಾತುಗಳು ಕೇಳಿ ಬಂತು. ಏನೂ ಆಗಿಲ್ಲ. ಕಾಶ್ಮೀರದ 370 ವಿಧಿ ರದ್ಧತಿಯಾದಾಗ ದೇಶಕ್ಕೆ ಬೆಂಕಿ ಬೀಳುತ್ತೆ ಎಂದರು. ಯಾವುದೇ ಹಾನಿಯಾಗಿಲ್ಲ. ಕಾರಣ ಇದರ ಹಿಂದಿನ ಚಾಣಕ್ಷತನ ಇದ್ದದ್ದು ಅರುಣ್ ಜೇಟ್ಲಿಯವರದ್ದು. ಹಾಗಾಗಿಯೇ ಇಂತಹ ಕಾರ್ಯ ಯೋಜನೆಗಳನ್ನು ಮಾಡಿ ಅನುಷ್ಠಾನಗೊಳಿಸುವುದರಲ್ಲಿ ಅವರು ಬಹಳ ನಿಸ್ಸೀಮರಾಗಿದ್ದರು ಎಂದು ಹೇಳಿದರು.

ಅರುಣ್ ಜೇಟ್ಲಿಯವರು ವಿದ್ಯಾರ್ಥಿ ದೆಸೆಯಲ್ಲಿಯೇ ತುರ್ತು ಪರಿಸ್ಥಿತಿ ಸಂದರ್ಭ ಜೈಲು ವಾಸವನ್ನು ಅನುಭವಿಸಿ, ಬಳಿಕ ಜಯಪ್ರಕಾಶ್ ನಾರಾಯಣರೊಂದಿಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ಕೈಗೊಂಡರು‌. ಎಬಿವಿಪಿಯಿಂದ ಭಾರತೀಯ ಜನತಾ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಚುನಾವಣೆಯಲ್ಲಿ ರಾಜಕೀಯ ಗೆಲುವಿನ ತಂತ್ರಗಾರಿಕೆ ಮಾಡುವುದರಲ್ಲಿ ಅರುಣ್ ಜೇಟ್ಲಿಯವರು ಒಬ್ಬರು. ಬಿಹಾರದಂತಹ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವು ಸಾಧಿಸಿದ್ದರೆ ಅದರಲ್ಲಿ ಜೇಟ್ಲಿ ಪಾತ್ರ ಮಹತ್ತರವಾದುದು. 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲು ಅವರು ಬಹಳ ದೊಡ್ಡದಾದ ಕೊಡುಗೆ ನೀಡಿದ್ದಾರೆ. ಇಂದು ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಳಿನ್ ಕುಮಾರ್ ಹೇಳಿದರು.

Intro:ಮಂಗಳೂರು: ಭಾರತದೇಶ ಇಂದು ಪರಿವರ್ತನೆ ಕಾಣಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ವಹಿಸಿದರೆ, ಇದರ ಹಿಂದಿನ ಹರಿಕಾರ ಅರುಣ್ ಜೇಟ್ಲಿಯವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅರುಣ್ ಜೈಟ್ಲಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ನೋಟು ಅಮಾನ್ಯವಾದಾಗ ಯಾವುದೇ ಸಮಸ್ಯೆಗಳಾಗಿಲ್ಲ. ಜೆಎಸ್ ಟಿ ಬಂದಾಗ ವ್ಯಾಪಾರ ನಷ್ಟವಾಗುತ್ತದೆ ಅಂದರು ತೊಂದರೆಯಾಗಿಲ್ಲ. ತ್ರಿವಳಿ ತಲಾಖ್ ಜಾರಿಗೆ ಬಂದಾಗ ಗಲಾಟೆಗಳಾಗುತ್ತದೆ ಎಂಬ ಮಾತುಗಳು ಕೇಳಿ ಬಂತು ಏನೂ ಆಗಿಲ್ಲ. ಕಾಶ್ಮೀರದ 370 ವಿಧಿ ರದ್ಧತಿಯಾದಾಗ ದೇಶಕ್ಕೆ ಬೆಂಕಿ ಬೀಳುತ್ತೆ ಎಂದರು ಯಾವುದೇ ಹಾನಿಯಾಗಿಲ್ಲ. ಕಾರಣ ಇದರ ಹಿಂದಿನ ಚಾಣಕ್ಷ್ಯತನವಿದ್ದದ್ದು ಅರುಣ್ ಜೇಟ್ಲಿಯವರದ್ದು. ಹಾಗಾಗಿಯೇ ಇಂತಹ ಕಾರ್ಯ ಯೋಜನೆಗಳನ್ನು ಮಾಡಿ ಅನುಷ್ಠಾನ ಗೊಳಿಸುವುದರಲ್ಲಿ ಬಹಳ ನಿಸ್ಸೀಮರು ಎಂದು ಹೇಳಿದರು.

Body:ಅರುಣ್ ಜೇಟ್ಲಿಯವರು ವಿದ್ಯಾರ್ಥಿ ದೆಸೆಯಲ್ಲಿಯೇ ತುರ್ತುಪರಿಸ್ಥಿತಿ ಸಂದರ್ಭ ಜೈಲು ವಾಸವನ್ನು ಅನುಭವಿಸಿ, ಬಳಿಕ ಜಯಪ್ರಕಾಶ್ ನಾರಾಯಣರೊಂದಿಗೆ ಭ್ರಷ್ಟಾಚಾರ ವಿರುದ್ಧ ಹೋರಾಟ ಕೈಗೊಂಡರು‌. ಎಬಿವಿಪಿಯಿಂದ ಭಾರತೀಯ ಜನತಾ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶ ಮಾಡಿದರು. ಚುನಾವಣೆಯಲ್ಲಿ ರಾಜಕೀಯ ಗೆಲುವಿನ ತಂತ್ರಗಾರಿಕೆಯನ್ನು ಮಾಡುವುದರಲ್ಲಿ ಅರುಣ್ ಜೇಟ್ಲಿಯವರು ಒಬ್ಬರು. ಬಿಹಾರದಂತಹ ಪ್ರದೇಶದಲ್ಲಿ ಭಾರತೀಯ ಜನತಾ ಪಾರ್ಟಿ ಗೆಲು ಸಾಧಿಸಿದ್ದರೆ ಅದರಲ್ಲಿ ಜೇಟ್ಲಿ ಪಾತ್ರ ಮಹತ್ತರವಾದುದು. 2008ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಸ್ಥಾಪಿಸಲು ಅವರು ಬಹಳ ದೊಡ್ಡದಾದ ಕೊಡುಗೆ ನೀಡಿದ್ದಾರೆ. ಇಂದು ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಳಿನ್ ಕುಮಾರ್ ಹೇಳಿದರು.

ಈ ಸಂದರ್ಭ ಶಾಸಕರಾದ ಸಂಜೀವ ಮಠಂದೂರು, ಡಾ.ವೈ.ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಮಾಜಿ ಶಾಸಕ ಯೋಗೀಶ್ ಭಟ್ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.