ಮಂಗಳೂರು: ''ಬಿಜೆಪಿ ಸರ್ಕಾರವು ಹನುಮಂತ ಮತ್ತು ರಾಮನ ಹೆಸರಿನಲ್ಲಿ ರಾಜಕೀಯ ಮಾಡುತ್ತದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ'' ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು. ನಗರದ ಮಲ್ಲಿಕಟ್ಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ''ಕರ್ನಾಟಕ ಕಾಂಗ್ರೆಸ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ಪ್ರಸ್ತಾವದ ಬಗ್ಗೆ ಮಾತನಾಡಿದ ಅವರು, ''ರಾಜಸ್ಥಾನದಲ್ಲಿ ಜಾರಿಗೆ ತಂದಿರುವ ಹಳೆಯ ಪಿಂಚಣಿ ಯೋಜನೆ, 25 ಲಕ್ಷ ರೂ.ವರೆಗಿನ ಉಚಿತ ಆರೋಗ್ಯ ವಿಮೆಯಂತಹ ಯೋಜನೆಗಳನ್ನು ಕರ್ನಾಟಕದಲ್ಲೂ ಪುನರಾವರ್ತಿಸಬೇಕು ಎಂದ ಅವರು ಬಿಜೆಪಿಯ ಪ್ರಣಾಳಿಕೆ ನಕಲಿ'' ಅಂತಾ ಹೇಳಿದರು.
ಇದನ್ನೂ ಓದಿ: ಅಂದು ಶ್ರೀರಾಮನನ್ನು ಬಂಧಿಸಿಟ್ಟಿದ್ದರು, ಈಗ ಬಜರಂಗದಳ ಕಾರ್ಯಕರ್ತರ ಬಂಧನಕ್ಕೆ ಕಾಂಗ್ರೆಸ್ ಸಂಕಲ್ಪ ಮಾಡಿದೆ : ಮೋದಿ ವಾಗ್ದಾಳಿ
''ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರವು ದೇಶದಲ್ಲಿ ಶೇ.40ರಷ್ಟು ಕಮೀಷನ್ ವಿಚಾರದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಏಕೈಕ ಸರ್ಕಾರವಾಗಿದೆ. ಬಿಜೆಪಿ ಹಿಂದಿನ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಇಂದಿಗೂ ಆ ಭರವಸೆಯನ್ನು ಈಡೇರಿಸಿಲ್ಲ. ಬಿಜೆಪಿ 2 ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದರೂ ಅದನ್ನು ಸಹ ಇದುವರೆಗೂ ಈಡೇರಿಸಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಬಿಜೆಪಿಗೆ ಜನಾದೇಶದಲ್ಲಿ ನಂಬಿಕೆಯಿಲ್ಲ. ಕುದುರೆ ವ್ಯಾಪಾರದ ಮೂಲಕ ಕರ್ನಾಟಕ, ಗೋವಾ ಮತ್ತು ಇತರ ರಾಜ್ಯಗಳಲ್ಲಿ ದೇಶದ ಅನೇಕ ಸರ್ಕಾರಗಳನ್ನು ಉರುಳಿಸಿದೆ'' ಹಾಗೂ ಹೊಸ ಸರ್ಕಾರಗಳನ್ನು ರಚಿಸಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪಿಸಿದರು.
ಇದನ್ನೂ ಓದಿ: ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಅಲ್ಲ, ಭ್ರಷ್ಟ ಸರ್ಕಾರ: ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್ ವಾಗ್ದಾಳಿ
ಬಿಜೆಪಿ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಮಾತನಾಡಿದ ಅವರು, ''ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಮೊದಲು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲಿ'' ಎಂದು ಸವಾಲು ಹಾಕಿದರು. ಅವರು ಸಿಎಎ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಜನರಿಗೆ ಸಾಮಾಜಿಕ ಭದ್ರತೆಯನ್ನು ಖಾತ್ರಿಪಡಿಸಲು ಬಯಸುತ್ತದೆ. ರಾಜಸ್ಥಾನದಲ್ಲಿ ನಾವು 500 ರೂಪಾಯಿ ಮೌಲ್ಯದ ಸಿಲಿಂಡರ್‌ಗಳನ್ನು ಒದಗಿಸುತ್ತಿದ್ದೇವೆ. 25 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಒದಗಿಸುತ್ತಿದ್ದೇವೆ. ಕರ್ನಾಟಕದಲ್ಲಿ ಇದೇ ರೀತಿಯ ಖಾತರಿಗಳನ್ನು ಭರವಸೆ ನೀಡಲಾಗಿದೆ'' ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹೇಳಿದರು.
ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ರಾಷ್ಟ್ರಮಟ್ಟದ ಸ್ಟಾರ್ ಪ್ರಚಾರಕರನ್ನು ಕರೆಸಿ ಭರ್ಜರಿ ಕ್ಯಾಂಪೇನ್ ಮಾಡ್ತಿದೆ. ಬಿಜೆಪಿಯನ್ನು ಈ ಬಾರಿ ಮಣಿಸಿ, ಅಧಿಕಾರಕ್ಕೆ ಏರಲು ಎಲ್ಲ ತಯಾರಿ ಮಾಡಿಕೊಂಡಿದೆ. ಮೇ 10 ರಂದು ನಡೆಯುವ ಮತದಾನ ಎಲ್ಲ ಪಕ್ಷಗಳ ಹಣೆ ಬರಹ ನಿರ್ಧರಿಸಲಿದೆ.
ಇದನ್ನೂ ಓದಿ: ಮೋದಿ ಸಮಾವೇಶದ ಯಶಸ್ಸಿಗೆ ದೇವರ ಮೊರೆ: 108 ತೆಂಗಿನಕಾಯಿಯ ಗಣಹೋಮ ಪೂಜೆ ಸಲ್ಲಿಸಿದ ಶಾಸಕಿ!
ಇದನ್ನೂ ಓದಿ: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಕುಳಿತವರ ಎಟಿಎಂ ಆಗಲಿದೆ: ಅಮಿತ್ ಶಾ