ETV Bharat / state

ಬಕ್ರೀದ್ ದಿನ ಉಳ್ಳಾಲದಲ್ಲಿ ದರ್ಗಾ ಅಧೀನದ ಎಲ್ಲ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ - Ullala latest news

ಬಕ್ರೀದ್ ಹಬ್ಬದ ದಿನ ಉಳ್ಳಾಲದ ಕೇಂದ್ರ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರಿಗೆ ಸಾಮೂಹಿಕ ಪ್ರಾರ್ಥನೆ ನಡೆಸಲು ಅವಕಾಶ ಕಲ್ಪಿಸಲಾಗಿದೆ.

Ullala
Ullala
author img

By

Published : Jul 29, 2020, 12:14 PM IST

ಉಳ್ಳಾಲ : ಕೊರೊನಾ ಭೀತಿಯಿಂದ ಕಳೆದ ಮೂರು ತಿಂಗಳಿಂದ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿತ್ತು. ಇದೀಗ ಬಕ್ರೀದ್ ಹಬ್ಬದಂದು ಎಲ್ಲ ಮಸೀದಿಗಳಲ್ಲಿ ಪ್ರಾರ್ಥನೆ ನಡೆಯಲಿದೆ ಎಂದು ಸೈಯದ್ ಮದನಿ ದರ್ಗಾ ಆಡಳಿತ ಸಮಿತಿ ಅಧ್ಯಕ್ಷ ಅಬ್ದುಲ್‌ ರಶೀದ್ ಹೇಳಿದರು.

ನಗದರ ಹಜ್ರತ್​​ ಶಾಲಾ ಆವರಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜೂ.8 ರಂದೇ ಧಾರ್ಮಿಕ‌ ಕ್ಷೇತ್ರಗಳಿಗೆ ಜನರ ಪ್ರವೇಶಕ್ಕೆ ಅವಕಾಶ ಕೊಟ್ಟರೂ, ಸಮುದಾಯ ಸ್ವಯಂ ಆಗಿ ಜಾಗೃತಿ ಕಾಪಾಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿರಲಿಲ್ಲ ಎಂದರು.

ಇದೀಗ ಬಕ್ರೀದ್ ಹಬ್ಬದಂದು ಕೇಂದ್ರ ಮಸೀದಿಯಲ್ಲಿ ಬೆಳಗ್ಗೆ 8.30ಕ್ಕೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಜನ ಆಯಾಯ ಪ್ರದೇಶದ ಮಸೀದಿಗಳಲ್ಲೇ ಆದಷ್ಟು ಪ್ರಾರ್ಥನೆಯಲ್ಲಿ ಭಾಗವಹಿಸಿ‌ ಕೇಂದ್ರ ಮಸೀದಿಯಲ್ಲಿ ಹೆಚ್ಚು ಜನಸಂದಣಿ‌ ಸೇರದಂತೆ ಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಲಾಗಿದೆ.

ಪ್ರಾರ್ಥನೆ ಸಂದರ್ಭದಲ್ಲಿ ಸರ್ಕಾರದ ಎಲ್ಲ ನಿಬಂಧನೆಗಳನ್ನು ಪಾಲಿಸುವ ಅನಿವಾರ್ಯತೆಯಿಂದ ಜನಸಂದಣಿ ಸಾಧ್ಯವಾದಷ್ಟು ಕಡಿಮೆ ಮಾಡಬೇಕಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.