ಬಂಟ್ವಾಳ : ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದೆ. ಶೇ.91.63 ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ 400 ವಿದ್ಯಾರ್ಥಿಗಳು ಹಾಜರಾಗಿದ್ದು, 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 215 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದ ಶಿವಾನಿ ಎಂಬಿ 588 ಅಂಕ, ಸಾಯಿಕೃಷ್ಣ ಪೂಜಾರಿ 575, ಅನನ್ಯ ಡಿ.ಆರ್ 572, ವಾಣಿಜ್ಯ ವಿಭಾಗದ ಚೈತ್ರಾಂಜಲಿ 585, ಶಮ ಎಮ್ 584, ಮೆಲಿಟ ಪ್ರಿಮಲ್ ಲೋಬೊ 582, ಅನುಷ ಆರ್ ಪ್ರಭು 579, ಪ್ರಶಿಕ್ಷಾ 578, ಉಷಾಕಿರಣ ಎಮ್.ಜೆ 577, ತನುಶ್ರೀ ಆರ್.ಜೆ 572 ಮತ್ತು ಕಲಾ ವಿಭಾಗದ ಲಿನ್ ಕಾರ್ಮೆಲ್ ಡಿಕೋಸ್ಟ್ 549 ಅಂಕಗಳನ್ನು ಗಳಿಸಿರುತ್ತಾರೆ.
ವಿಜ್ಞಾನ ವಿಭಾಗದ ಶಿವಾನಿ ಎಂಬಿ, ಬಿ ಸಿ ರೋಡ್‌ಮಠ ನಿವಾಸಿ ಮನೋಹರ್ ಮತ್ತು ಸಬಿತಾ ಅವರ ಪುತ್ರಿ. ಈಕೆ ಫಿಸಿಕ್ಸ್‌ನಲ್ಲಿ 99, ಕೆಮೆಸ್ಟ್ರಿ100, ಗಣಿತ 100, ಬಯೊಲಾಜಿಯಲ್ಲಿ 100 ಅಂಕ ಗಳಿಸಿದ್ದು, ಪಿಸಿಎಂಬಿಯಲ್ಲಿ ಶೇ.99.75ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ.