ಬಂಟ್ವಾಳ: ಲಾಕ್ ಡೌನ್ನ ಎರಡನೇ ದಿನವಾದ ಇಂದು ಬಂಟ್ವಾಳ ಮತ್ತು ಬಿ.ಸಿ. ರೋಡ್ ಸೇರಿದಂತೆ ತಾಲೂಕಿನ ಹಲವೆಡೆ ಬೆಳಗಿನ ವೇಳೆ ವಾಹನ, ಜನಸಂಚಾರ ಕಂಡುಬಂತು.
ಅಗತ್ಯ ವಸ್ತುಗಳ ಖರೀದಿಗೆ ಬರುವವರು, ಕೆಲಸಗಳಿಗೆ ತೆರಳುವವರು, ದ್ವಿಚಕ್ರ ವಾಹನ, ಕಾರು, ವ್ಯಾನ್ಗಳಲ್ಲಿ ಓಡಾಡಿದರು. ಆದ್ರೆ ಸುಮಾರು 10:30ರ ವೇಳೆ ಚಟುವಟಿಕೆಗಳು ಕ್ಷೀಣವಾದವು.
ಕೆಲ ಹೊತ್ತಿನಲ್ಲಿ ವಾಹನಗಳ ಓಡಾಟ ಕಡಿಮೆಯಾಗಿ, ರಸ್ತೆಯಲ್ಲಿ ಪೊಲೀಸರಷ್ಟೇ ಕಂಡುಬಂದರು. ಕಳೆದ ಲಾಕ್ಡೌನ್ಗಿಂತ ಭಿನ್ನವಾಗಿ ಈ ಬಾರಿ ಜನರೇ ಸ್ವಯಂಪ್ರೇರಿತರಾಗಿ ಮಧ್ಯಾಹ್ನದ ಬಳಿಕ ರಸ್ತೆಗಿಳಿಯದೆ ಸರ್ಕಾರದ ಕ್ರಮಗಳನ್ನು ಅನುಸರಿಸಿದರು.