ETV Bharat / state

ಗುರುಪುರ ಚಿಲಿಂಬಿ ಗುಡ್ಡೆಯಲ್ಲಿ ಅನ್ಯಕೋಮಿನ ಜೋಡಿ ಶಂಕೆ : ಕಾರ್ಯಾಚರಣೆ ನಡೆಸಿದ ಬಜರಂಗದಳ - ಗುರುಪುರ ಚಿಲಿಂಬಿ ಗುಡ್ಡೆಯಲ್ಲಿ ಅನ್ಯಕೋಮಿನ ಜೋಡಿ ಶಂಕೆ

ವಿಚಾರಣೆ ವೇಳೆ ಜೋಡಿಗಳು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿರುವುದು ತಿಳಿದು ಬಂದಿದೆ..

Mangalore Police Station
ಮಂಗಳೂರು ಪೊಲೀಸ್​ ಠಾಣೆ
author img

By

Published : Oct 3, 2021, 8:15 PM IST

Updated : Oct 3, 2021, 10:01 PM IST

ಮಂಗಳೂರು : ಚಿಲಿಂಬಿ ಗುಡ್ಡೆಯಲ್ಲಿ ಅನ್ಯಕೋಮಿನ ಜೋಡಿಗಳಿರುವ ಬಗ್ಗೆ ಬಜರಂಗ ದಳ ಕಾರ್ಯಕರ್ತರು ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿತ್ತು. ಇದರ ಬೆನ್ನಲ್ಲೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಯುವಕ-ಯುವತಿಯರ ತಂಡವೊಂದು ಸುತ್ತಾಡಲು ಚಿಲಿಂಬಿ ಗುಡ್ಡೆಗೆ ಬಂದಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು, ಪೊಲೀಸರಿಗೆ ಈ ಕುರಿತಂತೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು, ವಿಚಾರಣೆ ನಡೆಸಿದ್ದರು. ಈ ವೇಳೆ ಜೋಡಿಗಳು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದಿರುವುದು ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಯುವತಿಯರಲ್ಲಿ ಓರ್ವಳು ಅಪ್ರಾಪ್ತೆಯಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಇಬ್ಬರು ಯುವಕರು ಮಾದಕದ್ರವ್ಯ ಸೇವನೆ ಮಾಡಿರುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಪೊಕ್ಸೊ ಕಾಯ್ದೆ ಹಾಗೂ ಎನ್​ಡಿಪಿಎಸ್​​ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ.

Last Updated : Oct 3, 2021, 10:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.