ETV Bharat / state

ಬಡತನ ನಿರ್ಮೂಲನೆಗಾಗಿ ಬಿಜೆಪಿಯಿಂದ ಹಲವಾರು ಕಾರ್ಯಕ್ರಮ; ಶಾಸಕ ಮಠಂದೂರು

author img

By

Published : Aug 17, 2020, 8:59 PM IST

ಬಿಜೆಪಿ ಪುತ್ತೂರು ನಗರ ಮಂಡಲ ಯುವ ಮೋರ್ಚಾದ ವತಿಯಿಂದ ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮ ನಡೆಸಲಾಯಿತು.

putturu
ಉಚಿತ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮ

ಪುತ್ತೂರು: ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಡಳಿತ ಮಾಡುತ್ತಿರುವ ಬಿಜೆಪಿ ಸರ್ಕಾರ ಜನರ ಆರೋಗ್ಯದ ಕಾಳಜಿ ಮತ್ತು ಬಡತನ ನಿರ್ಮೂಲನೆ ಮಾಡಲು ಹತ್ತಾರು ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಸಾರ್ವಜನಿಕರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮ

ಇಲ್ಲಿನ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಬಿಜೆಪಿ ಪುತ್ತೂರು ನಗರ ಮಂಡಲ ಯುವ ಮೋರ್ಚಾದ ವತಿಯಿಂದ ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೀನದಲಿತರು, ಹಿಂದುಳಿದ ವರ್ಗದವರು, ಬಡತನ ರೇಖೆಗಿಂತ ಕೆಳಗಿರುವರನ್ನು ಜೀವನ ಸುಧಾರಣೆ ಮಾಡಲು ದೀನ್ ದಯಾಳ್ ಉಪಾಧ್ಯಾಯರು ಅಂತ್ಯೋದಯ ವ್ಯವಸ್ಥೆಯನ್ನು ಕಂಡುಕೊಂಡರು. ಅಂತಹ ವ್ಯವಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಡಿಜಿಟಲೈಸೇಷನ್ ಮೂಲಕ ಫಲಾನುಭವಿಗಳ ಮನೆ ಬಾಗಿಲಿಗೆ ನೇರ ಅವರ ಖಾತೆಗೆ ತಲುಪಿಸುವ ವ್ಯವಸ್ಥೆ ಮಾಡಿದರು.

ಆದರೆ ಗ್ರಾಮೀಣ ಭಾಗದ ಜನರಿಗೆ ನೆಟ್‌ವರ್ಕ್ ಸಮಸ್ಯೆಯಿಂದ ಒಂದಷ್ಟು ಸಮಸ್ಯೆ ಆಗಬಾರದು ಎಂದು ಸೇವಾ ಸಂಘ ಸಂಸ್ಥೆಗಳ ಮೂಲಕ ಕೆಲಸ ಮಾಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ವಿನೂತನವಾದ, ಬಡವರಿಗೆ ಅತ್ಯಮೂಲ್ಯವಾದ ಕಾರ್ಯಕ್ರಮ ಯುವ ಮೋರ್ಚಾದಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಮಧ್ಯಮ ವರ್ಗದವರಿಗೂ ಸವಲತ್ತು:

ಪ್ರಧಾನಿಯವರು ಸ್ವಾತಂತ್ರ್ಯ ದಿನ ನೀಡಿದ ಸಂದೇಶದಂತೆ ಯಾರೂ ಕೂಡಾ ಸವಲತ್ತಿನಿಂದ ವಂಚಿತರಾಗಬಾರದು ಎಂದು ಮಧ್ಯಮ ವರ್ಗದವರಿಗೂ ಸವಲತ್ತು ಕೊಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಜೊತೆ ಒಟ್ಟಾಗಿ ಆರೋಗ್ಯ ಚಿಕಿತ್ಸೆ ನೀಡುವ ಕಾರ್ಯ ನಡೆಯುತ್ತಿದೆ. ಅದೇ ರೀತಿ ಕಷ್ಟದಲ್ಲಿ ಜೀವನ ಮಾಡುತ್ತಿರುವ ಸಂದರ್ಭದಲ್ಲಿ ಮೂರು ತಿಂಗಳು ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ನೀಡಲಾಗಿದೆ.

ಬಡವರ ಖಾತೆಗೆ ನೇರ ಹಣ ಪಾವತಿ ಆಗಿದೆ. ಕಾರ್ಮಿಕರಿಗೂ ಕಿಟ್ ವಿತರಣೆ, ವಿವಿಧ ರೀತಿಯ ಕೆಲಸದಲ್ಲಿರುವ ಕಾರ್ಮಿಕರಿಗೂ ಸೌಲಭ್ಯ, ಬಡತನ ರೇಖೆಗಿಂತ ಕೆಳಗಿನವರಿಗೆ ಬಡತನ ನಿರ್ಮೂಲನೆ ಮಾಡಲು ಹತ್ತಾರು ಕಾರ್ಯಕ್ರಮ ಮಾಡಲಾಗುತ್ತಿದೆ. ಈ ಎಲ್ಲಾ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದು ಆರೋಗ್ಯ ಕಾಪಾಡಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಗುರುದತ್ ನಾಯಕ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಜನಸೇವಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. 2 ದಿನಗಳು ನಡೆಯುವ ಆಯಷ್ಮಾನ್ ಕಾರ್ಡ್​ ವಿತರಣೆ ಕಾರ್ಯದಲ್ಲಿ ಸಹಕಾರ ನೀಡುತ್ತಿರುವ ಮೇದಿನಿ ಜನಸೇವಾ ಕೇಂದ್ರ, ಪೂಜಾ ಜನಸೇವಾ ಕೇಂದ್ರ, ಶ್ರೀಪದ್ಮ ಜನಸೇವಾ ಕೇಂದ್ರ, ಅಶೋಕ್ ಪಡೀಲ್ ಜನಸೇವಾ ಕೇಂದ್ರದ ಮಾಲಿಕರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ಅಧ್ಯಕ್ಷ ಕಿಶೋರ ಕೊಳತ್ತಾಯ, ಬಿಜೆಪಿ ಗ್ರಾಮಾಂತರ ಮಂಡಲದ ನಿಕಟಪೂರ್ವ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರ ಮಂಡಲದ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.