ದಕ್ಷಿಣ ಕನ್ನಡ: ನೆಲ್ಯಾಡಿ ಮೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಇಚ್ಲಂಪ್ಪಾಡಿಯಲ್ಲಿ ಕರ್ತವ್ಯ ನಿರತ ಪವರ್ ಮ್ಯಾನ್ಗಳ ಮೇಲೆ ಸ್ಥಳೀಯ ವ್ಯಕ್ತಿಯೊಬ್ಬ ಹಲ್ಲೆ ಮಾಡಿರುವ ಘಟನೆ ನಡೆದಿದೆ. ನಿನ್ನೆ ಇಚ್ಲಂಪ್ಪಾಡಿಯ ಸುಳ್ಯಮಜಲು ಎಂಬಲ್ಲಿ ಪವರ್ ಮ್ಯಾನ್ಗಳಾದ ಶರಣಪ್ಪ ಚಲವಾದಿ ಮತ್ತು ಆನಂದ್ ಲಮಾಣಿ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದಾಗ, ಸ್ಥಳೀಯ ಶಿಬು ವರ್ಗೀಸ್ ಎಂಬ ವ್ಯಕ್ತಿ ಪವರ್ ಮ್ಯಾನ್ ಗಳ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಾಳು ಪವರ್ ಮ್ಯಾನ್ ಶರಣಪ್ಪ ಚಲವಾದಿಯವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.ಇದೀಗ ಮತ್ತೆ ನೋವು ಕಾಣಿಸಿಕೊಂಡ ಹಿನ್ನಲೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.