ETV Bharat / state

ಮೂಡುಬಿದಿರೆ ತಾಲೂಕು ಕಚೇರಿ ಮೇಲೆ ಎಸಿಬಿ ಅಧಿಕಾರಿಗಳಿಂದ ದಿಢೀರ್​​​​ ದಾಳಿ

author img

By

Published : Oct 15, 2019, 7:50 AM IST

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೂಡುಬಿದಿರೆ ತಾಲೂಕು ಕಚೇರಿ ಮೇಲೆ ದಾಳಿ ನಡೆಸಿ ಹೆಚ್ಚುವರಿ 66 ಸಾವಿರ ರೂ. ನಗದು ಪತ್ತೆ ಮಾಡಿದ್ದಾರೆ.

ಮೂಡುಬಿದಿರೆ ತಾಲೂಕು ಕಚೇರಿ

ಮಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮೂಡುಬಿದಿರೆ ತಾಲೂಕು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹೆಚ್ಚುವರಿ 66 ಸಾವಿರ ರೂ. ನಗದು ಪತ್ತೆಯಾಗಿದೆ.

ನಾಗರಿಕರೊಬ್ಬರು ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಉಡುಪಿ, ಕಾರವಾರ ಹಾಗೂ ಚಿಕ್ಕಮಗಳೂರು ವಿಭಾಗಗಳ ಪೊಲೀಸ್ ನಿರೀಕ್ಷಕರು, ಹೆಡ್ ಕಾನ್​ಸ್ಟೇಬಲ್​ಗಳು, ಕಾನ್​​ಸ್ಟೇಬಲ್​ಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಚೇರಿಯ ಸರ್ವೇ ವಿಭಾಗ, ಜನಸ್ನೇಹಿ ವಿಭಾಗ, ಅಟಲ್ ಜೀ ವಿಭಾಗ ಹಾಗೂ ಉಪ ತಹಶೀಲ್ದಾರರ ಕಚೇರಿ ಪರಿಶೀಲನೆ ನಡೆಸಿ, ತಾಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಎಂಟು ಮಂದಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇನ್ನು ಇಲ್ಲಿ ಸಿಕ್ಕ 66 ಸಾವಿರ ರೂ. ಹೆಚ್ಚುವರಿ ನಗದಿಗೆ ಯಾವುದೇ ದಾಖಲೆಗಳು ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Intro:ಮಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ಮೂಡುಬಿದಿರೆ ತಾಲೂಕು ಕಚೇರಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಹೆಚ್ಚುವರಿ 66 ಸಾವಿರ ರೂ. ನಗದು ಪತ್ತೆಯಾಗಿದೆ.

ನಾಗರಿಕರೊಬ್ಬರು ಈ ಬಗ್ಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಗಳು ದಿಢೀರ್ ದಾಳಿ ನಡೆದಿದ್ದಾರೆ. ಉಡುಪಿ, ಕಾರವಾರ ಹಾಗೂ ಚಿಕ್ಕಮಗಳೂರು ವಿಭಾಗಗಳ ಪೊಲೀಸ್ ನಿರೀಕ್ಷಕರು, ಹೆಡ್ ಕಾನ್ ಸ್ಟೇಬಲ್ ಗಳು, ಕಾನ್ ಸ್ಟೇಬಲ್ ಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭ ಕಚೇರಿಯ ಸರ್ವೇ ವಿಭಾಗ, ಜನಸ್ನೇಹಿ ವಿಭಾಗ, ಅಟಲ್ ಜೀ ವಿಭಾಗ ಹಾಗೂ ಉಪ ತಹಶಿಲ್ದಾರರ ಕಚೇರಿಯನ್ನು ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ತಾಲ್ಲೂಕು ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಎಂಟು ಮಂದಿಯನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

Body:ಈ ಸಂದರ್ಭ ದೊರಕಿದ 66 ಸಾವಿರ ರೂ. ಹೆಚ್ಚುವರಿ ನಗದಿಗೆ ಯಾವುದೇ ದಾಖಲೆಗಳು ಇಲ್ಲದಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.