ETV Bharat / state

ಮಠಂತಬೆಟ್ಟು ದೇವಳದಲ್ಲಿ 'ಅಮ್ಮನ ಚರಿತ್ರೆ - ಚಿಣ್ಣರ ವಿಮರ್ಶೆ' ವಿಶೇಷ ಕಾರ್ಯಕ್ರಮ - ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ. 21 ರಿಂದ 26 ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಅಮ್ಮನ ಚರಿತ್ರೆ- ಚಿಣ್ಣರ ವಿಮರ್ಶೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Ashtabandha Brahmakalashotsavam
ಮಠಂತಬೆಟ್ಟು ದೇವಳದ 'ಅಮ್ಮನ ಚರಿತ್ರೆ-ಚಿಣ್ಣರ ವಿಮರ್ಶೆ' ವಿನೂತನ ಕಾರ್ಯಕ್ರಮ
author img

By

Published : Jan 20, 2020, 5:55 PM IST

ಪುತ್ತೂರು: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ. 21 ರಿಂದ 26 ರ ವರೆಗೆ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ದೇವಿಯ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ಅಮ್ಮನ ಚರಿತ್ರೆ- ಚಿಣ್ಣರ ವಿಮರ್ಶೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮಠಂತಬೆಟ್ಟು ದೇವಳದ 'ಅಮ್ಮನ ಚರಿತ್ರೆ-ಚಿಣ್ಣರ ವಿಮರ್ಶೆ' ವಿನೂತನ ಕಾರ್ಯಕ್ರಮ

ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಚಿಣ್ಣರ ಸಮಿತಿಯಿಂದ ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಯೋಜನೆಯೊಂದಿಗೆ "ಅಮ್ಮನ ಚರಿತ್ರೆ, ಚಿಣ್ಣರ ವಿಮರ್ಶೆ" ಕಾರ್ಯಕ್ರಮಕ್ಕೆ ಕೋಡಿಬಾಡಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.

ಸುಮಾರು 150 ಶಾಲೆಗಳಲ್ಲಿ ಈ ಚಿಣ್ಣರ ವಿಮರ್ಶೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ದೇವಿಯ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಚಿಣ್ಣರೇ ಮಾಡಲಿದ್ದಾರೆ. ರಸಪ್ರಶ್ನೆಯಲ್ಲಿ ಬಹುಮಾನ ಪಡೆದ ಮಕ್ಕಳನ್ನು ಸನ್ಮಾನಿಸುವ ಕಾರ್ಯವೂ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆಯಲಿದೆ. ದೇವಸ್ಥಾನದಲ್ಲಿ ಚಿಣ್ಣರ ಸಮಿತಿಯನ್ನು ರಚಿಸಲಾಗಿದ್ದು, ದೇವಿ ಚರಿತ್ರೆಯನ್ನು ಮಕ್ಕಳಲ್ಲಿ ತುಂಬುವ ಕೆಲಸ ಈ ಚಿಣ್ಣರ ಸಮಿತಿ ಮೂಲಕ ನಡೆಯಲಿದೆ.

ಬ್ರಹ್ಮಕಲಶೋತ್ಸವದಲ್ಲಿ ಈ ಭಾಗದ ಪ್ರತಿ ಕುಟುಂಬಗಳನ್ನು ಸೇರಿಸಿಕೊಳ್ಳುವ ಇರಾದೆಯಿಂದ ದೇವಳಕ್ಕೆ ಬೇಕಾದ ಅಕ್ಕಿಯನ್ನು ಬೆಳೆಸುವ ಗದ್ದೆ ಬೇಸಾಯ, ಮನೆಗೊಂದು ಬಾಳೆಗಿಡ-ದೇವಿಗೊಂದು ಬಾಳೆಗೊನೆ, ತರಕಾರಿ ಬೆಳೆಸುವುದು ಮುಂತಾದ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಆಯ್ದ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಚಿಣ್ಣರ ಸಮಿತಿ ಅಧ್ಯಕ್ಷ ಪ್ರದೀಲ್ ಎ.ರೈ ಅಧ್ಯಕ್ಷತೆ ವಹಿಸಿದ್ದರು.

Intro:Body:

ಮಠಂತಬೆಟ್ಟು ದೇವಳದ `ಅಮ್ಮನ ಚರಿತ್ರೆ-ಚಿಣ್ಣರ ವಿಮರ್ಶೆ' ವಿನೂತನ ಕಾರ್ಯಕ್ರಮ

ಪುತ್ತೂರು; ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ೨೧ ರಿಂದ ೨೬ ರ ತನಕ ನಡೆಯುವ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಇದರ ಜತೆ ದೇವಿಯ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ಅಮ್ಮನ ಚರಿತ್ರೆ- ಚಿಣ್ಣರ ವಿಮರ್ಶೆ ಎಂಬ ವಿನೂತನ ಕಾರ್ಯಕ್ರಮಕ್ಕೂ ಮುಂದಾಗಿದೆ.

ಮಠAತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಚಿಣ್ಣರ ಸಮಿತಿ ವತಿಯಿಂದ ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಯೋಜನೆಯೊAದಿಗೆ "ಅಮ್ಮನ ಚರಿತ್ರೆ, ಚಿಣ್ಣರ ವಿಮರ್ಶೆ" ಕಾರ್ಯಕ್ರಮಕ್ಕೆ ಕೋಡಿಬಾಡಿ ಶಾಲೆಯಲ್ಲಿ ಚಾಲನೆ ನೀಡಲಾಯಿತು.

ಸುಮಾರು ೧೫೦ಶಾಲೆಗಳಲ್ಲಿ ಈ ಚಿಣ್ಣರ ವಿಮರ್ಶೆ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ದೇವಿಯ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಚಿಣ್ಣರೇ ಮಾಡಲಿದ್ದಾರೆ. ರಸಪ್ರಶ್ನೆಯಲ್ಲಿ ಬಹುಮಾನ ಪಡೆದ ಮಕ್ಕಳನ್ನು ಸನ್ಮಾನಿಸುವ ಕಾರ್ಯವೂ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ನಡೆಯಲಿದೆ. ದೇವಸ್ಥಾನದಲ್ಲಿ ಚಿಣ್ಣರ ಸಮಿತಿಯನ್ನು ರಚಿಸಲಾಗಿದ್ದು, ದೇವಿ ಚರಿತ್ರೆಯನ್ನು ಮಕ್ಕಳಲ್ಲಿ ತುಂಬುವ ಕೆಲಸ ಈ ಚಿಣ್ಣರ ಸಮಿತಿ ಮೂಲಕ ನಡೆಯಲಿದೆ.

ಬ್ರಹ್ಮಕಲಶೋತ್ಸವದಲ್ಲಿ ಈ ಭಾಗದ ಪ್ರತಿ ಕುಟುಂಬಗಳನ್ನು ಸೇರಿಸಿಕೊಳ್ಳುವ ಇರಾದೆಯಿಂದ ದೇವಳಕ್ಕೆ ಬೇಕಾದ ಅಕ್ಕಿಯನ್ನು ಬೆಳೆಸುವ ಗದ್ದೆ ಬೇಸಾಯ, ಮನೆಗೊಂದು ಬಾಳೆಗಿಡ-ದೇವಿಗೊಂದು ಬಾಳೆಗೊನೆ, ತರಕಾರಿ ಬೆಳೆಸುವುದು ಮುಂತಾದ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಆಯ್ದ ಶಾಲೆಗಳ ಆಸಕ್ತ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಚಿಣ್ಣರ ಸಮಿತಿ ಅಧ್ಯಕ್ಷ ಪ್ರದೀಲ್ ಎ.ರೈ ಅಧ್ಯಕ್ಷತೆ ವಹಿಸಿದ್ದರು.

ಚಿಣ್ಣರ ಸಮಿತಿ ಪ್ರಧಾನಕಾರ್ಯದರ್ಶಿ ಸಾನ್ವಿ ಎಂ ರೈ ಮಠಂತಬೆಟ್ಟು, ಕಾರ್ಯಧ್ಯಕ್ಷ ನಿಶಿತಾ ಜಿ ಶೆಟ್ಟಿ ಮಠಂತಬೆಟ್ಟು, ಸಂಚಾಲಕ ಗುರುವಿಲಾಸ್ ಕೃಷ್ಣಗಿರಿ, ಸಂಘಟನಾ ಸಂಚಾಲಕ ರಿಧಿ ಎ. ರೈ, ಕೋಡಿಂಬಾಡಿ ಶಾಲಾ ನಾಯಕ ಚಿನ್ಮಯಿ, ಸಾಯಿ ಪ್ರಸಾದ್ ಮೋನಡ್ಕ, ಕಾರ್ಯದರ್ಶಿ ದಿಗಂತ್ ಡೆಕ್ಕಾಜೆ, ಉಪಾಧ್ಯಕ್ಷರಾದ ಯಶ್ವಿ ಡಿ. ಶೆಟ್ಟಿ, ಶರಣ್ ಸೇಡಿಯಾಪು, ಶ್ರಾವಣಿ. ಯಸ್. ರೈ ಕೆದಿಕಂಡೆಗುತ್ತು, ಸಂಚಿತ ಕೃಷ್ಣಮೂರ್ತಿ ಪಾದೆ, ನಿದೀಶಾ ಜಿ ಶೆಟ್ಟಿ, ಪ್ರಣಮ್ಯ, ಧನ್ವಿ ಡಿ ಶೆಟ್ಟಿ, ಜಗದೀಶ್ ಕೃಷ್ಣಗಿರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ, ಕಾರ್ಯಧ್ಯಕ್ಷರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಪ್ರಧಾನ ಕಾರ್ಯದರ್ಶಿ ಜಯನಂದ ಕೋಡಿ, ಪ್ರಚಾರ ಸಮಿತಿಯ ಸಂಚಾಲಕರಾದ ಜಯಪ್ರಕಾಶ್ ಕಾರ್ಯದರ್ಶಿ, ರಮೇಶ್ ನಾಯಕ್ ನಿಡ್ಯ, ಮಹಿಳಾ ಸಮಿತಿಯ ಗೌರವ ಅಧ್ಯಕ್ಷೆ ಸುಮ ಅಶೋಕ್ ರೈ, ಅಧ್ಯಕ್ಷ ರಶ್ಮಿ ನಿರಂಜನ್ ರೈ ಮಠಂತಬೆಟ್ಟು ಮತ್ತಿತರರು ಹಾಜರಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.