ಮಂಗಳೂರು: ಶಿವಮೊಗ್ಗದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರಲ್ಲಿ ಇಬ್ಬರು ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲೂ ದುಷ್ಕೃತ್ಯ ಎಸಗಿ ಬಂಧಿತರಾಗಿದ್ದರು. ಬಂಧನ ಆರೋಪಿಗಳು ಮಂಗಳೂರಿನಲ್ಲಿ ಉಗ್ರ ಸಂಘಟನೆಯ ಪರವಾಗಿ ಗೋಡೆ ಬರಹ ಬರೆದ ಕಾರಣ ಬಂಧಿತರಾಗಿದ್ದರು.
ಇವರು 2020 ನವೆಂಬರ್ನಲ್ಲಿ ಮಂಗಳೂರು ನಗರದ ಕದ್ರಿ ಮತ್ತು ಕೋರ್ಟ್ ರಸ್ತೆಯ ಗೋಡೆಗಳಲ್ಲಿ ಉಗ್ರ ಪರ ಬರಹಗಳನ್ನು ಬರೆದಿದ್ದರು. ಇವರು 'ಲಷ್ಕರ್ ಇ ತೋಯ್ಬಾ' ಉಗ್ರ ಸಂಘಟನೆಯ ಪರ ಜಿಂದಾಬಾದ್ ಎಂದು ಗೋಡೆ ಬರಹ ಬರೆದು ಆತಂಕ ಸೃಷ್ಟಿಸಿದ್ದರು. ಆ ಬಳಿಕ ಪೊಲೀಸರು ಆ ಗೋಡೆ ಬರಹನ್ನು ಅಳಿಸಿ ಹಾಕಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದರು.
2020 ನವೆಂಬರ್ 27ರಂದು ಕದ್ರಿ ಠಾಣೆಯ ಬಳಿ ಇರುವ ಅಪಾರ್ಟ್‌ಮೆಂಟ್‌ನ ಕಂಪೌಂಡ್ ಗೋಡೆಯ ಮೇಲೆ 'ಇಲ್ಲಿನ ಸಂಘಿಗಳು ಮತ್ತು ಮನುವಾದಿಗಳ ಜೊತೆ ವ್ಯವಹರಿಸಲು ಲಷ್ಕರ್ ಮತ್ತು ತಾಲಿಬಾನಿಗಳನ್ನು ಬರುವಂತೆ ಮಾಡಬೇಡಿ. ಲಷ್ಕರ್ ಜಿಂದಾಬಾದ್, ತಾಲಿಬಾನ್ ಜಿಂದಾಬಾದ್’ ಎಂದು ಇಂಗ್ಲಿಷ್‌ನಲ್ಲಿ ಬರೆದಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಗೆ ಬಳಿಕ ಜಾಮೀನು ಸಿಕ್ಕಿತ್ತು.
ಇದನ್ನೂ ಓದಿ : ಶಿವಮೊಗ್ಗಕ್ಕೂ ಉಗ್ರರ ನಂಟು: ಶಂಕಿತ ಯುವಕರ ಬಂಧನ - ಎಸ್ಪಿ ಮಾಹಿತಿ