ETV Bharat / state

ಕ್ಷುಲ್ಲಕ‌ ಕಾರಣಕ್ಕೆ ಸ್ನೇಹಿತನ ಹತ್ಯೆ ಪ್ರಕರಣ: ಐವರು ಆರೋಪಿಗಳ ಬಂಧನ - ಮಂಗಳೂರಿನಲ್ಲಿ ಕ್ಷುಲ್ಲಕ‌ ಕಾರಣಕ್ಕೆ ಸ್ನೇಹಿತನ ಹತ್ಯೆ ಪ್ರಕರಣ

ಸ್ನೇಹಿತನನ್ನೇ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ನಗರ ನಿವಾಸಿಗಳಾದ ಜಾಯ್ಸನ್, ಪ್ರಮೀತ್,‌ ಕಾರ್ತಿಕ್, ಪ್ರಜ್ವಲ್, ದುರ್ಗೇಶ್ ಬಂಧಿತ ಆರೋಪಿಗಳು.

ಐವರು ಆರೋಪಿಗಳು ಅಂದರ್
ಐವರು ಆರೋಪಿಗಳು ಅಂದರ್
author img

By

Published : Oct 18, 2021, 3:05 PM IST

ಮಂಗಳೂರು : ಕ್ಷುಲ್ಲಕ ಕಾರಣಕ್ಕೆ ಲಾಡ್ಜ್​​​ನಲ್ಲಿ ಸ್ನೇಹಿತನನ್ನೇ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಮಂಗಳೂರು ನಗರ ನಿವಾಸಿಗಳಾದ ಜಾಯ್ಸನ್, ಪ್ರಮೀತ್,‌ ಕಾರ್ತಿಕ್, ಪ್ರಜ್ವಲ್, ದುರ್ಗೇಶ್ ಬಂಧಿತ ಆರೋಪಿಗಳಾಗಿದ್ದಾರೆ.

ಮೃತ ಧನುಷ್ ಸೇರಿದಂತೆ ಆರೋಪಿಗಳೆಲ್ಲರೂ ಸ್ನೇಹಿತರಾಗಿದ್ದರು. ಧನುಷ್​​​​ಗೆ ಮಹಿಳೆಯರ, ತಾಯಿ, ತಂಗಿ, ಅಕ್ಕಂದಿರ ಪದ ಬಳಕೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸುವ ಕೆಟ್ಟ ಚಾಳಿ ಇತ್ತು. ಆದ್ದರಿಂದ ಈ ಬಗ್ಗೆ ಆತನಿಗೆ ತಿಳಿ ಹೇಳಬೇಕೆಂದು ಈ‌ ಸ್ನೇಹಿತರೆಲ್ಲ ಸೇರಿ ಪಾರ್ಟಿ ಆಯೋಜಿಸಿದ್ದರು. ಈ ಹಿನ್ನೆಲೆಯಲ್ಲಿ ದಸರಾ ದಿನ‌(ಅ.15)‌ಮಂಗಳೂರಿನ ಪಂಪ್ ವೆಲ್ ಬಳಿಯ ಸಾಯಿ ಪ್ಯಾಲೇಸ್ ಲಾಡ್ಜ್ ನಲ್ಲಿ ರೂಂ ಮಾಡಿ ಪಾರ್ಟಿ ಆಯೋಜಿಸಿದ್ದಾರೆ.

ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ಮಾತನಾಡಿ, ಪಾರ್ಟಿಯಲ್ಲಿ ಈ ಬಗ್ಗೆ ಧನುಷ್ ಗೆ ತಿಳಿಸಿದ್ದಾರೆ. ಆದರೂ ಆತ ಉಡಾಫೆಯಿಂದ ವರ್ತಿಸುತ್ತಾನೆ. ಈ ಸಂದರ್ಭ ವಾಗ್ವಾದ ಬೆಳೆದು ಒಬ್ಬರಿಗೊಬ್ಬರಿಗೂ ಹೊಡೆದಾಟ ನಡೆಯುತ್ತದೆ.

ಈ ಸಂದರ್ಭ ಜಾಯ್ಸನ್ ಎಂಬಾತ ತನ್ನ ಬಳಿಯಿದ್ದ ಬಟನ್ ಚಾಕುವಿನಿಂದ ಎದೆಗೆ ಹಾಗೂ ಬೆನ್ನಿಗೆ ಮೂರು ಬಾರಿ ಇರಿದಿದ್ದಾನೆ. ಆಗ ಧನುಷ್ ಜೀವಭಯದಿಂದ ಹೊರಗೆ ಓಡಿಕೊಂಡು ಬಂದು ಲಾಡ್ಜ್ ಮೆಟ್ಟಿಲಿನಲ್ಲಿ ಬೀಳುತ್ತಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಈಗಾಗಲೇ ಬಂಧನವಾಗಿದ್ದು, ಇನ್ನೋರ್ವನ ಬಂಧನ ಇನ್ನಷ್ಟೇ ಆಗಬೇಕಿದೆ. ಆರೋಪಿಗಳಲ್ಲಿ ಸುರತ್ಕಲ್ ನಿವಾಸಿ ಜಾಯ್ಸನ್, ನಂದಿಗುಡ್ಡ ನಿವಾಸಿ ಪ್ರಮೀತ್, ವಾಮಂಜೂರು ನಿವಾಸಿ ಕಾರ್ತಿಕ್ ಎಂಬವರ ಮೇಲೆ ನಗರದ ವಿವಿಧ ಠಾಣೆಗಳಲ್ಲಿ ಈಗಾಗಲೇ ಬೇರೆ ಬೇರೆ ಪ್ರಕರಣಗಳು ದಾಖಲಾಗಿವೆ.

ಪ್ರಜ್ವಲ್ ಹಾಗೂ ದುರ್ಗೇಶ್ ಎಂಬ ಆರೋಪಿಗಳ ಮೇಲೆ ಸದ್ಯಕ್ಕೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.