ETV Bharat / state

ಬಂಟ್ವಾಳದ ಲೊರೆಟ್ಟೊದಲ್ಲಿ ಅಕ್ರಮ ಕಸಾಯಿಖಾನೆ : ಮೂವರ ಬಂಧನ - ಜಾನುವಾರುಗಳನ್ನು ಹತ್ಯೆ ಮಾಡಿ ಮಾರಾಟ

ಲೊರೆಟ್ಟೊ ನಿವಾಸಿಗಳಾದ ಉಮ್ಮರ್ ಫಾರೂಕ್, ಆದಂ ಮತ್ತು ಆಸ್ಬಕ್ ಎಂಬ ಮೂವರನ್ನು ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾರಾಟ ಮಾಡಲಾಗುತ್ತಿದ್ದ ಹಿನ್ನೆಲೆ ಬಂಧಿಸಲಾಗಿದೆ.

An illegal slaughterhouse in Loretto: Three Accused arrest by police
ಲೊರೆಟ್ಟೊದಲ್ಲಿ ಅಕ್ರಮ ಕಸಾಯಿಖಾನೆ
author img

By

Published : May 19, 2020, 8:00 PM IST

ಮಂಗಳೂರು (ದ.ಕ.) : ಜಿಲ್ಲೆಯ ಲೊರೆಟ್ಟೊ ಟಿಪ್ಪುನಗರ ಎಂಬಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಹತ್ಯೆ ಮಾಡಿ ಮಾರಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಂಟ್ವಾಳ ನಗರ ಠಾಣೆಯ ಎಸ್.ಐ.ಅವಿನಾಶ್ ಮತ್ತು ಸಿಬ್ಬಂದಿ, ಮೂವರನ್ನು ಬಂಧಿಸಿದ್ದಾರೆ.

ಲೊರೆಟ್ಟೊ ನಿವಾಸಿಗಳಾದ ಉಮ್ಮರ್ ಫಾರೂಕ್, ಆದಂ ಮತ್ತು ಆಸ್ಬಕ್ ಬಂಧಿತ ಆರೋಪಿಗಳು. ನಾಲ್ಕು ಜಾನುವಾರು, ಎರಡು ಕ್ವಿಂಟಾಲ್​ ದನದ ಮಾಂಸ, ಎರಡು ದನದ ತಲೆ, ಒಂದು ಪಿಕಪ್ ವಾಹನ ಹಾಗೂ ಜಾನುವಾರು ಕಡಿದು ಮಾಂಸ ಮಾಡಲು ಉಪಯೋಗಿಸುವ ಸಲಕರಣೆಗಳನ್ನು ಬಂಧಿತರಿಂದ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.