ETV Bharat / state

ಪೊಲೀಸರಿಂದ ಭಯದ ವಾತವರಣ ಸೃಷ್ಟಿ: ಝೈನೀ ಕಾಮಿಲ್​​ ಆರೋಪ

ಮಂಗಳೂರಿನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪೊಲೀಸರು ಲಾಠಿಚಾರ್ಜ್ ನಡೆಸಿ ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ‌ ಎಂದು ಎಸ್​ವೈಎಸ್​ನ ಪ್ರಧಾನ ಕಾರ್ಯದರ್ಶಿ ಡಾ. ಎಂಎಸ್ಎಂ ಝೈನೀ ಕಾಮಿಲ್ ಆರೋಪಿಸಿದ್ದಾರೆ.

an atmosphere of fear by the police in mangalore
ಎಸ್​ವೈಎಸ್​ನ ಪ್ರಧಾನ ಕಾರ್ಯದರ್ಶಿ ಡಾ.ಎಂಎಸ್ಎಂ ಝೈನೀ ಕಾಮಿಲ್
author img

By

Published : Dec 26, 2019, 11:54 PM IST

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪೊಲೀಸರು ಲಾಠಿಚಾರ್ಜ್ ನಡೆಸಿ ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ‌ ಎಂದು ಎಸ್​ವೈಎಸ್​ನ ಪ್ರಧಾನ ಕಾರ್ಯದರ್ಶಿ ಡಾ. ಎಂಎಸ್ಎಂ ಝೈನೀ ಕಾಮಿಲ್ ಆರೋಪಿಸಿದ್ದಾರೆ.

ಎಸ್​ವೈಎಸ್​ನ ಪ್ರಧಾನ ಕಾರ್ಯದರ್ಶಿ ಡಾ. ಎಂಎಸ್ಎಂ ಝೈನೀ ಕಾಮಿಲ್

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಾಯಕರ ಮೇಲೆ ಗೋಲಿಬಾರ್ ನಡೆಸಿ, ಅವರನ್ನು ತಪ್ಪಿತಸ್ಥರನ್ನಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಎಫ್ಐಆರ್​​ ದಾಖಲೆ ಮಾಡಿ, ಅವರಿಗೆ ಸರ್ಕಾರ ಘೋಷಣೆ ಮಾಡಿದ ಪರಿಹಾರವನ್ನು ಹಿಂಪಡೆಯುವಂತೆ ಮಾಡಲಾಗಿದೆ ಎಂದು ದೂರಿದರು.

Intro:ಮಂಗಳೂರು: ನಗರದಲ್ಲಿ ಗುರುವಾರ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಪೊಲೀಸರು ಲಾಠಿಚಾರ್ಜ್ ನಡೆಸಿ ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ್ದಾರೆ‌ ಎಂದು ಎಸ್ ವೈ ಎಸ್ ನ ಪ್ರಧಾನ ಕಾರ್ಯದರ್ಶಿ ಡಾ.ಎಂಎಸ್ಎಂ ಝೈನೀ ಕಾಮಿಲ್ ಹೇಳಿದರು.

ನಗರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅಮಾಯಕರ ಮೇಲೆ ಗೋಲಿ ಬಾರ್ ನಡೆಸಿ ಅವರನ್ನು ತಪ್ಪಿತಸ್ಥರನ್ನಾಗಿ ಬಿಂಬಿಸಿ ಎಫ್ಐಆರ್ ನ್ನು ದಾಖಲೆ ಮಾಡಿ, ಅವರಿಗೆ ಸರಕಾರ ಘೋಷಣೆ ಮಾಡಿದಂತಹ ಪರಿಹಾರವನ್ನು ಹಿಂಪಡೆಯುವಂತಹ ಸ್ಥಿತಿಗೆ ತಲುಪಿದೆ‌. ಅಂದರೆ ಸರಕಾರ ತರುವ ಕಾನೂನುಗಳ ಬಗ್ಗೆ ನ್ಯಾಯಯುತವಾಗಿ ಪ್ರತಿಭಟನೆ ಮಾಡುವ ಹಕ್ಕು ಸಂವಿಧಾನದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.

Body:ಗೋಲಿಬಾರ್ ನಡೆಸಿದ ಸಂದರ್ಭ ಯಾವುದೇ ಮುನ್ಸೂಚನೆ ಇರಲಿಲ್ಲ. ಗೋಲಿಬಾರ್ ನಡೆಸಿದ ಸ್ಥಳದಲ್ಲಿ ಯಾವುದೇ ರೀತಿಯ ದೊಡ್ಡ ಮಟ್ಟದ ಪ್ರತಿಭಟನೆ ಯೂ ನಡೆಯುತ್ತಿರಲಿಲ್ಲ ಎಂಬುದಕ್ಕೆ ವೀಡಿಯೋ ಸಾಕ್ಷಿಯೂ ಇದೆ. ಆದ್ದರಿಂದ ಈ ಬಗ್ಗೆ ಮುಸ್ಲಿಂ ಸಮುದಾಯಕ್ಕೆ ಬಹಳ ಬೇಸರ, ದುಃಖವುಂಟಾಗಿದೆ. ಆಸ್ಪತ್ರೆಯಲ್ಲಿಯೂ ಪೊಲೀಸರು ನಡೆಸಿದ ದಾಂಧಲೆಯಿಂದ ರೋಗಿಗಳು ಭಯಭೀತರಾಗಿದ್ದರು ಎಂದು ಹೇಳಿದರು.

ಪ್ರಧಾನ ಮಂತ್ರಿ ಮೋದಿಯವರು ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ 'ಸಬ್ ಕಾ ಸಾತ್ ಸಬ್ ಕಾ ವಿಶ್ವಾಸ್' ಜೊತೆಗೆ 'ಸಬ್ ಕಾ ವಿಶ್ವಾಸ್' ಎಂಬುದನ್ನೂ ಸೇರಿಸಿದ್ದರು‌. ಅದರ ಬಗ್ಗೆ ನಾವು ನಿರೀಕ್ಷೆಯಲ್ಲಿದ್ದೇವೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಸಿದರೆ ಖಂಡಿತಾ ವಾಗಿಯೂ ಅಮಾಯಕರಿಗೆ ಸಿಗಬೇಕಾದಂತಹ 10 ಲಕ್ಷ ರೂ. ಮರಳಿ ಸಿಕ್ಕಿಯೇ ಸಿಗುತ್ತದೆ ಎಂದು ಡಾ.ಎಂಎಸ್ಎಂ ಝೈನೀ ಕಾಮಿಲ್ ಹೇಳಿದರು.

Reporeter_Vishwanath Panjimogaru

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.