ETV Bharat / state

ಅಮೃತ ಸೋಮೇಶ್ವರ ನಮ್ಮ ನಾಡು ಕಂಡ ಇನ್ನೊಬ್ಬ ಶಿವರಾಮ ಕಾರಂತ : ಪ್ರಭಾಕರ ಜೋಶಿ - ಯಕ್ಷಗಾನ ಕಲಾವಿದ

ಕಾರಂತ, ಮಾಸ್ತಿ ಕುವೆಂಪು, ಬೇಂದ್ರೆ ಈ ತಲೆಮಾರು ಕಳೆದ ಮೇಲೆ ಎರಡನೇ ತಲೆಮಾರಿನಲ್ಲಿ ಅವರಂತೆ ದೊಡ್ಡ ಸಾಧನೆ ಮಾಡಿದ ನಾಲ್ಕೈದು ಸಾಧಕರನ್ನು ಗುರುತಿಸುವುದಿದ್ದರೆ ಅದರಲ್ಲಿ ಖಂಡಿತವಾಗಿ ಅಮೃತರು ಅಗ್ರ ಪಂಕ್ತಿಯಲ್ಲಿರುತ್ತಾರೆ.

ಲೇಖಕ ಅಮೃತ ಸೋಮೇಶ್ವರ
author img

By

Published : Mar 24, 2019, 4:25 AM IST

ಮಂಗಳೂರು: ಕರಾವಳಿಯ ಸಂಯುಕ್ತ, ಸಾಂಸ್ಕೃತಿಕ ಬಹುಭಾಷಿಕ ನೆಲದ ಸಕಲ ಆಸಕ್ತಿಯನ್ನು ಹೀರಿ ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಬೆಳೆಯಬಲ್ಲ ಎಂಬುದಕ್ಕೆ ಸಾಕ್ಷಿ ಅಮೃತ ಸೋಮೇಶ್ವರ ಅವರು. ವಿಶ್ವದ ಶ್ರೇಷ್ಠ ಸಾಹಿತಿ ಮತ್ತು ಕನ್ನಡದ ಮಹಾನ್ ಲೇಖಕ ಎಂದು ಹೇಳಬಹುದು.

ಕಾರಂತ, ಮಾಸ್ತಿ ಕುವೆಂಪು, ಬೇಂದ್ರೆ ಈ ತಲೆಮಾರು ಕಳೆದ ಮೇಲೆ ಎರಡನೇ ತಲೆಮಾರಿನಲ್ಲಿ ಅವರಂತೆ ದೊಡ್ಡ ಸಾಧನೆ ಮಾಡಿದ ನಾಲ್ಕೈದು ಸಾಧಕರನ್ನು ಗುರುತಿಸುವುದಿದ್ದರೆ ಅದರಲ್ಲಿ ಖಂಡಿತವಾಗಿ ಅಮೃತರು ಅಗ್ರಪಂಕ್ತಿಯಲ್ಲಿರುತ್ತಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಡಾ‌.ಎಂ.ಪ್ರಭಾಕರ ಜೋಷಿ ಹೇಳಿದರು.

ಲೇಖಕ ಅಮೃತ ಸೋಮೇಶ್ವರ

ನಗರದ ಸೋಮೇಶ್ವರ, ಕೋಟೆಕಾರ್ ನಲ್ಲಿ ಖ್ಯಾತ ಸಂಶೋಧಕ, ಲೇಖಕ ಪ್ರೊ.ಅಮೃತ ಸೋಮೇಶ್ವರ ಅವರಿಗೆ ಶ್ರೀಮತಿ ಟಿ.ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದ ಅವರು, ನಮ್ಮ ಪ್ರದೇಶದ ತುಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಯಕ್ಷಗಾನ, ಪದ್ಯ, ಪಾಡ್ದನ, ಗೀತನಾಟಕ, ನೃತ್ಯನಾಟಕ ಎಲ್ಲಾ ಸೇರಿ ಒಬ್ಬನ ಆಸಕ್ತಿ ಹೇಗೆ ಬೆಳೆಯಬಹುದೋ, ಅದನ್ನೆಲ್ಲಾ ಬೆಳೆಸಿಕೊಂಡು ಸುಮ್ಮನೆ ಪ್ರವರ್ಥನೆ ಮಾಡದೆ ಅದರಲ್ಲಿ ಶ್ರೇಷ್ಠ ಕೃತಿಗಳನ್ನು ಕೊಟ್ಟವರು ಪ್ರೊ.ಅಮೃತ ಸೋಮೇಶ್ವರ. ಅಲ್ಲದೆ ನಮ್ಮ ನಾಡು ಕಂಡ ಇನ್ನೊಬ್ಬ ಶಿವರಾಮ ಕಾರಂತ ಎಂದು ಪ್ರಭಾಕರ ಜೋಶಿ ಹೇಳಿದರು.

ಈ ಸಂದರ್ಭ ಪ್ರೊ.ವರದೇಶ ಹಿರೇಗಂಗೆ, ಮಾಹೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಚ್‌.ಎಸ್.ಬಲ್ಲಾಳ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ಮಾಹೆ ಕುಲಸಚಿವ ಡಾ.ನಾರಾಯಣ ಸಭಾಹಿತ್, ಸಾಹಿತಿ ಡಾ‌.ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಪಸ್ಥಿತರಿದ್ದರು.

Intro:ಮಂಗಳೂರು: ಕರಾವಳಿಯ ಸಂಯುಕ್ತ, ಸಾಂಸ್ಕೃತಿಕ ಬಹುಭಾಷಿಕ ನೆಲದ ಸಕಲ ಆಸಕ್ತಿಯನ್ನು ಹೀರಿ ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಬೆಳೆಯಬಲ್ಲದೆಂಬುದಕ್ಕೆ ಅಖಿಲ ಭಾರತ ಮಟ್ಟದ ಮಾದರಿಗಳಲ್ಲಿ ಇರುವ ಕೆಲವೇ ಮಂದಿಗಳಲ್ಲಿ ಓರ್ವರು ಅಮೃತ ಸೋಮೇಶ್ವರ. ಅವರು ವಿಶ್ವದ ಶ್ರೇಷ್ಠ ಸಾಹಿತಿ. ಯಾವುದೇ ಅನುಮಾನವಿಲ್ಲದೆ ಅಮೃತರು ಕನ್ನಡದ ಮಹಾನ್ ಲೇಖಕ ಎಂದು ಹೇಳಬಹುದು. ಕಾರಂತ, ಮಾಸ್ತಿ ಕುವೆಂಪು, ಬೇಂದ್ರೆ ಈ ತಲೆಮಾರು ಕಳೆದ ಮೇಲಿನ ಎರಡನೇ ತಲೆಮಾರಿನಲ್ಲಿ ಅವರಂತೆ ಮತ್ತು ಅವರಂತೆ ಅಲ್ಲದೆ ದೊಡ್ಡ ಸಾಧನೆ ಮಾಡಿದ ನಾಲ್ಕೈದು ಸಾಧಕರನ್ನು ಗುರುತಿಸುವುದಿದ್ದರೆ ಅದರಲ್ಲಿ ಖಂಡಿತವಾಗಿ ಅಮೃತರು ಅಗ್ರಪಂಕ್ತಿಯಲ್ಲಿರುತ್ತಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಡಾ‌.ಎಂ.ಪ್ರಭಾಕರ ಜೋಷಿ ಹೇಳಿದರು.

ನಗರದ ಸೋಮೇಶ್ವರ, ಕೋಟೆಕಾರ್ ನಲ್ಲಿ ಖ್ಯಾತ ಸಂಶೋಧಕ, ಲೇಖಕ ಪ್ರೊ.ಅಮೃತ ಸೋಮೇಶ್ವರ ಅವರಿಗೆ ಶ್ರೀಮತಿ ಟಿ.ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.

Body:ನಮ್ಮ ಪ್ರದೇಶದ ತುಳು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಯಕ್ಷಗಾನ, ಪದ್ಯ, ಪಾಡ್ದನ, ಗೀತನಾಟಕ, ನೃತ್ಯನಾಟಕ ಎಲ್ಲಾ ಸೇರಿ ಒಬ್ಬನ ಆಸಕ್ತಿ ಹೇಗೆ ಬೆಳೆಯಬಹುದೋ, ಅದನ್ನೆಲ್ಲಾ ಬೆಳೆಸಿಕೊಂಡು ಸುಮ್ಮನೆ ಪ್ರವರ್ಥನೆ ಮಾಡದೆ ಅದರಲ್ಲಿ ಶ್ರೇಷ್ಠ ವಾದ ಕೃತಿಗಳನ್ನು ಕೊಟ್ಟವರು ಪ್ರೊ.ಅಮೃತ ಸೋಮೇಶ್ವರ. ಅಲ್ಲದೆ ನಮ್ಮ ನಾಡು ಇನ್ನೊಬ್ಬ ಶಿವರಾಮ ಕಾರಂತರನ್ನು ಕಂಡದಿದ್ದರೆ ಅದು ಅಮೃತರಲ್ಲಿ ಎಂದು ಪ್ರಭಾಕರ ಜೋಶಿ ಹೇಳಿದರು.

ಪ್ರಶಸ್ತಿಯು ಒಂದು ಲಕ್ಷ ರೂ. ನಗದು, ಫಲಪುಷ್ಪ, ಪ್ರಶಸ್ತಿ ಫಲಕಗಳನ್ನು ಒಳಗೊಂಡಿತ್ತು.

Conclusion:ಈ ಸಂದರ್ಭ ಪ್ರೊ.ವರದೇಶ ಹಿರೇಗಂಗೆ, ಮಾಹೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಡಾ.ಎಚ್‌.ಎಸ್.ಬಲ್ಲಾಳ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ಮಾಹೆ ಕುಲಸಚಿವ ಡಾ.ನಾರಾಯಣ ಸಭಾಹಿತ್, ಸಾಹಿತಿ ಡಾ‌.ಏರ್ಯ ಲಕ್ಷ್ಮೀನಾರಾಯಣ ಆಳ್ವ ಉಪಸ್ಥಿತರಿದ್ದರು.

Reporter_Vishwanath Panjmogaru
ETV Bharat Logo

Copyright © 2025 Ushodaya Enterprises Pvt. Ltd., All Rights Reserved.