ETV Bharat / state

ಸಮುದ್ರಕ್ಕಿಳಿಯುವ ಬೋಟ್​ಗಳಿಗೆ ಎಐಎಸ್​ ಟ್ರಾನ್ಸ್ ಫಂಡರ್​ ಯಂತ್ರ ಕಡ್ಡಾಯ - mangalore costel news

ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಬೋಟ್​ಗಳು ಕೆಲವು ಬಾರಿ ಅಪಾಯಕ್ಕೆ ಸಿಲುಕಿಕೊಳ್ಳುತ್ತವೆ. ಇದರಿಂದ ಪಾರು ಮಾಡಲು ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರಿಕಾ ಇಲಾಖೆ ಕಡ್ಡಾಯವಾಗಿ ಎಐಎಸ್​ ಟ್ರಾನ್ಸ್ ಫಂಡರ್​ ಯಂತ್ರವನ್ನು ಅಳವಡಿಸಲು ಆದೇಶಿಸಿದೆ ಎಂದು ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು

ಎಐಎಸ್​ ಟ್ರಾನ್ಸ್​ ಫಂಡರ್​​ ಯಂತ್ರ ಅಳವಡಿಸುವುದನ್ನು ಕಡ್ಡಾಯಗೊಳಿಸಿ ಸೂಚನೆ ನೀಡಿದ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ
author img

By

Published : Aug 25, 2019, 5:49 PM IST

ಮಂಗಳೂರು: ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಪ್ರತಿಯೊಂದು ಬೋಟ್​ಗೂ ಕಡ್ಡಾಯವಾಗಿ ಎಐಎಸ್​ ಟ್ರಾನ್ಸ್ ಫಂಡರ್​ ಯಂತ್ರವನ್ನು ಅಳವಡಿಸಲು ಮೀನುಗಾರಿಕಾ ಇಲಾಖೆ ಕಡ್ಡಾಯಗೊಳಿಸಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಹೇಳಿದರು.

ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ

ಮೀನಿಗಾರಿಕೆಗೆ ತೆರಳಿದಾಗ ಬೋಟ್​ಗಳು ಸಮುದ್ರದಲ್ಲಿ ಕೆಲವು ಬಾರಿ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಮೀನುಗಾರರ ಪ್ರಾಣ ಹಾನಿ ಜೊತೆಗೆ ಬೋಟ್​ಗಳು ಸಮುದ್ರದ ಪಾಲಾಗುತ್ತವೆ. ಇಂತಹ ಅಪಾಯಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಮೀನುಗಾರಿಕೆ ಇಲಾಖೆ ಈ ವರ್ಷದಿಂದ ಎಐಎಸ್ ಟ್ರಾನ್ಸ್ ಫಂಡರ್ ಯಂತ್ರವನ್ನು ಬೋಟ್​ಗಳಲ್ಲಿ ಅಳವಡಿಸುವುದು ಕಡ್ಡಾಯಗೊಳಿಸಿದೆ ಎಂದರು.

ಕೆಲವು ಭಾರಿ ತಾಂತ್ರಿಕ ಸಮಸ್ಯೆ ಎದುರಾಗುತ್ತದೆ. ಇಂತಹ ಸಮಯದಲ್ಲಿ ಏನು ಮಾಡುವುದು ಎಂದು ಮೀನುಗಾರರಿಗೆ ತಿಳಿಯದಂತಾಗುತ್ತದೆ. ಬೋಟ್​ಗಳು ಎಲ್ಲಿ ಹೋಗಿವೆ ಎಂಬ ಮಾಹಿತಿಯು ತಿಳಿಯುವುದಿಲ್ಲ. ಈ ಟ್ರಾನ್ಸ್ ಫಂಡರ್ ಅಳವಡಿಕೆಯಿಂದ ಬೋಟ್​ಗಳು ಪತ್ತೆ ಸಾಧ್ಯ ಎಂದರು.

ಇದು ಬೋಟ್​ ಇರುವ ನಿಖರ ಮಾಹಿತಿ ನೀಡುತ್ತದೆ. ಕೋಸ್ಟಲ್ ಗಾರ್ಡ್​ನವರ ಕಂಟ್ರೋಲ್‌ ರೂಂಗೆ ಎಲ್ಲ ಮಾಹಿತಿ ಲಭ್ಯವಾಗುತ್ತದೆ. ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾದ ಬಳಿಕ ಪತ್ತೆ ಹಚ್ಚಲು ಸಾಕಷ್ಟು ಶ್ರಮ ಪಡಬೇಕಾಯಿತು. ಪ್ರತಿ ಬೋಟ್​ಗಳಿಗೆ ಡೀಸೆಲ್ ಪಾಸ್​ಬುಕ್​ನ್ನು ಮೀನುಗಾರಿಕೆ ಇಲಾಖೆ ನೀಡಬೇಕಾಗುತ್ತೆ. ಎಐಎಸ್​ ಟ್ರಾನ್ಸ್​ ಫಂಡರ್​ ಯಂತ್ರ ಅಳವಡಿಸಿ ಬಿಲ್ ತೋರಿಸಿದವರಿಗೆ ಮಾತ್ರ ಪಾಸ್​ಬುಕ್ ನೀಡುತ್ತಿದ್ದೇವೆ. ಹಾಗಾಗಿ ಹೆಚ್ಚಿನ ಬೋಟ್​ಗಳು ಈ ಯಂತ್ರವನ್ನು ಅಳವಡಿಸಿವೆ ಎಂದು ಇಲಾಖೆ ತಿಳಿಸಿದೆ.

Intro:ಮಂಗಳೂರು: ಮೀನುಗಾರಿಕೆಗೆ ತೆರಳುವ ಮೀನುಗಾರಿಕಾ ಬೋಟ್ ಗಳು ಸಮುದ್ರದಲ್ಲಿ ಕೆಲವು ಬಾರಿ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಇದರ ಮೀನುಗಾರರ ಪ್ರಾಣ ಹಾನಿ, ಬೋಟ್ ಗಳು ಸಮುದ್ರಪಾಲಾಗುವುದು ನಡೆಯುತ್ತದೆ. ಈ ಕಾರಣದಿಂದ ಅಪಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಮೀನುಗಾರಿಕ ಇಲಾಖೆ ಈ ವರ್ಷದಿಂದ ಎಐಎಸ್ ಟ್ರಾನ್ಸ್ ಫಂಡರ್ ಯಂತ್ರವನ್ನು ಬೋಟ್ ಗಳಲ್ಲಿ ಅಳವಡಿಸುವುದು ಕಡ್ಡಾಯಗೊಳಿಸಿದೆ.

Body:ಮೀನುಗಾರಿಕೆಗೆ ಹೋಗುವ ಪ್ರತಿಯೊಂದು ಬೋಟ್ ಸಮುದ್ರಕ್ಕೆ ಹೋದ ಬಳಿಕ ಪ್ರತಿಕ್ಷಣವು ಅಪಾಯದಿಂದಲೇ ಸಂಚರಿಸಬೇಕಾಗುತ್ತದೆ. ಸಮುದ್ರ ಯಾವಾಗ ‌ಮುನಿಯುತ್ತದೆಯೋ, ಬೋಟ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಡುತ್ತದೆಯೋ ಎಂಬ ಆತಂಕ ಪ್ರತಿಯೊಬ್ಬರಲ್ಲಿ ಇರುತ್ತದೆ. ಅಂತಹ ಸಮಸ್ಯೆ ಎದುರಾದರೆ ಏನು ಮಾಡುವುದೆಂಬುದು ತೋಚುವುದಿಲ್ಲ. ಅಷ್ಟು ಮಾತ್ರವಲ್ಲದೆ ಮೀನುಗಾರಿಕೆಗೆ ಹೋದ ಬೋಟ್ ಗಳು ಎಲ್ಲಿ ಹೋಗಿದೆ ಎಂಬ ಮಾಹಿತಿಯು ಬೋಟ್ ಮಾಲಕರಿಗೆ, ಮೀನುಗಾರರ ಕುಟುಂಬಿಕರಿಗೆ ತಿಳಿಯುವುದಿಲ್ಲ. ಇದಕ್ಕಾಗಿ ಈ ಬಾರಿಯಿಂದ ಪ್ರತಿ ಬೋಟ್ ಗಳು ಎಐಎಸ್ ಟ್ರಾನ್ಸ್ ಫಾಂಡರ್ ಅಳವಡಿಸುವುದು ಕಡ್ಡಾಯ ಮಾಡಲಾಗಿದೆ. ಎಐಎಸ್ ಟ್ರಾನ್ಸ್ ಫಾಂಡರ್ ಅಳವಡಿಸಿದ ಬೋಟ್ ಗಳು ಯಾವ ಸ್ಥಳದಲ್ಲಿದೆ ಎಂಬ ನಿಖರ ಮಾಹಿತಿಯು ಕೋಸ್ಟಲ್ ಗಾರ್ಡ್ ನವರ ಕಂಟ್ರೋಲ್‌ ರೂಂ ಗೆ ಬರುತ್ತದೆ‌. ಬೋಟ್ ಯಾವ ಸ್ಥಳದಲ್ಲಿದೆ, ಯಾವ ದಿಕ್ಕಿನಿಂದ ಹೊರಟಿದೆ, ಯಾವ ಕಡೆಗೆ ಹೋಗುತ್ತದೆ ಎಂಬ ಮಾಹಿತಿ ಲಭ್ಯವಾಗಲಿದೆ. ಈ ಕಾರಣದಿಂದ ಇದನ್ನು ಬೋಟ್ ಗಳಿಗೆ ಅಳವಡಿಸುವುದು ಕಡ್ಡಾಯವಾಗಿದೆ. ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾದ ಬಳಿಕ ಈ ಬೋಟ್ ಪತ್ತೆ ಹಚ್ಚಲು ಸಾಕಷ್ಟು ಶ್ರಮಪಡಬೇಕಾಯಿತು. ಈ ಹಿನ್ನೆಲೆಯಲ್ಲಿ ಬೋಟ್ ಗಳಿಗೆ ಎಐಎಸ್ ಟ್ರಾನ್ಸ್ ಫಾಂಡರ್ ಅಳವಡಿಸಿದರೆ ಇಂತಹ ಸಮಸ್ಯೆ ಆದಾಗ ಬೋಟ್ ಗಳನ್ನು ಪತ್ತೆ ಹಚ್ಚಲು ಸಾಧ್ಯವಿದೆ. ಯಾವುದಾದರೂ ಬೋಟ್ ಸಮುದ್ರ ಮಧ್ಯೆ ತಾಂತ್ರಿಕ ಅಥವಾ ಬೇರೆ ಯಾವುದೇ ಸಮಸ್ಯೆ ಗೊಳಗಾದರೆ ಅವರನ್ನು ರಕ್ಷಿಸಲು ನಿಖರ ಸ್ಥಳಕ್ಕೆ ಹೋಗಲು ಈ ಯಂತ್ರ ಉಪಯೋಗಕ್ಕೆ ಬರಲಿದೆ. ಪ್ರತಿ ಬೋಟ್ ಗಳಿಗೆ ಡೀಸೆಲ್ ಪಾಸ್ ಬುಕ್ ಮೀನುಗಾರಿಕ ಇಲಾಖೆ ನೀಡಬೇಕಾಗಿರುವುದರಿಂದ ಈ ಯಂತ್ರ ಅಳವಡಿಸಿದ ಬಿಲ್ ತೋರಿಸಿದವರಿಗೆ ಪಾಸ್ ಬುಕ್ ನೀಡಲಾಗುತ್ತದೆ. ಇದರಿಂದ ಹೆಚ್ಚಿನ ಬೋಟ್ ಗಳು ಈ ಯಂತ್ರವನ್ನು ಅಳವಡಿಸಿ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಟಿದೆ. ಬೈಟ್- ತಿಪ್ಪೇಸ್ವಾಮಿ, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆಗೆ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.