ETV Bharat / state

ಸಿದ್ದರಾಮಯ್ಯ ಹೇಳಿಕೆಯಿಂದ ಮತ ಬರುತ್ತೆ ಅಂತಾದರೆ ಬಿಜೆಪಿಯವರು ಕೆಲಸ ಮಾಡಿಲ್ಲ ಎಂದರ್ಥ: ಮಲ್ಲಿಕಾರ್ಜುನ ಖರ್ಗೆ - ಕಾಂಗ್ರೆಸ್​ ಪಕ್ಷದ ಮುಖಂಡತ್ವ

ರಾಜ್ಯದಲ್ಲಿ ಬಿಜೆಪಿಯವರು ಗೆಲ್ಲುವ ಸ್ಥಿತಿಯಲ್ಲಿ ಇಲ್ಲವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
author img

By

Published : Apr 24, 2023, 9:56 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಮಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿನಿಂದ ಬಿಜೆಪಿಗೆ ಮತ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ನಗರದ ಮೇರಿಹಿಲ್​ನಲ್ಲಿರುವ ಹೆಲಿಪ್ಯಾಡ್​ನಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಬಿಜೆಪಿಗೆ ಮತ ಬರುತ್ತದೆ ಎಂದರೆ ಇಲ್ಲಿಯವರೆಗೆ ಬಿಜೆಪಿಯವರು ಕೆಲಸಮಾಡಿಲ್ಲ ಎಂದು ಅರ್ಥ. ಅವರು ಕೆಲಸದಿಂದ ಬರುತ್ತದೆ ಎಂದು ಹೇಳಿಲ್ಲ. ಸಿದ್ದರಾಮಯ್ಯ ಅವರ ಹೇಳಿಕೆಯಿಂದ ಮತ ಬರುತ್ತದೆ ಎಂದರೆ ಅವರಿಗೆ ಬಹಳ ಹತಾಶೆಯಾಗಿದೆ ಎಂದು ಕಾಣುತ್ತದೆ ಎಂದರು.

ಮತಕ್ಕೋಸ್ಕರ ಇಂತಹ ಮಾತುಗಳನ್ನು ಆಡಿದರೆ ದೇಶಕ್ಕೆ ಒಳ್ಳೆಯದಲ್ಲ: ಸಹಜವಾಗಿ ಬಿಜೆಪಿಯವರು ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ಅದಕ್ಕೆ ಇಂತ ಮಾತುಗಳನ್ನು ಆಡುತ್ತಾರೆ. ಪ್ರತಿಯೊಂದು ರಾಜಕೀಯ ಪಕ್ಷ ಸಿದ್ದಾಂತದ ಮೇಲೆ ಹೋರಾಟ ನಡೆಸುತ್ತಾರೆ. ಯಾರಾದರೂ ಜಾತಿ ಧರ್ಮ ಚುನಾವಣೆಯಲ್ಲಿ, ರಾಜಕೀಯದಲ್ಲಿ ತಂದರೆ ಅದು ದೇಶಕ್ಕೆ ಒಳ್ಳೆಯದಾಗುವುದಿಲ್ಲ.‌ ಅದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ, ಸಂವಿಧಾನದ ಇತಿಮಿತಿಯಲ್ಲಿ ಮಾತಾಡಿದರೆ ಒಳ್ಳೆಯದು. ಸುಮ್ಮನೆ ಮತಕ್ಕೋಸ್ಕರ ಇಂತಹ ಮಾತುಗಳನ್ನು ಆಡಿದರೆ ದೇಶಕ್ಕೆ ಸಮಾಜಕ್ಕೆ ಒಳ್ಳೆಯದಲ್ಲ ಎಂದರು.

ಕಾಂಗ್ರೆಸ್​ ಪಕ್ಷದ ಮುಖಂಡತ್ವಕ್ಕೆ ಒಪ್ಪಿ ಬರುವವರಿಗೆ ಸ್ವಾಗತ: ಜಗದೀಶ್​​ ಶೆಟ್ಟರ್ ಮತ್ತೆ ಬಿಜೆಪಿಗೆ ಬರ್ತಾರೆ ಎಂದು ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾನು ಭವಿಷ್ಯ ನುಡಿಯಲು ಆಗಲ್ಲ. ಯಾರ ರಕ್ತ ಪರೀಕ್ಷೆ ಮಾಡಿ ನಾವು ತೆಗೊಂಡಿಲ್ಲ. ಪಕ್ಷದ ತತ್ವ ಒಪ್ಪಿಕೊಂಡು, ನಮ್ಮ ನೀತಿ, ಸಿದ್ಧಾಂತ ಒಪ್ಪಿಕೊಂಡು ಬಂದವರಿಗೆ ಸ್ವಾಗತ ಇದೆ. ಕಾಂಗ್ರೆಸ್ ಪಕ್ಷದ ತತ್ವ ಒಪ್ಪಿಕೊಂಡ ಜನರಿಗೆ ನಾವು ಸಹಜವಾಗಿ ಸ್ವಾಗತಿಸುತ್ತೇವೆ. ಅವರು ಬರ್ತಾರೆ ಹೋಗ್ತಾರೆ ಎಂಬುದಕ್ಕೆ ಸಂಬಂಧ ಇಲ್ಲ. ನಮ್ಮ ಪಕ್ಷದಲ್ಲಿ ನಿಯತ್ತಾಗಿ ನಮ್ಮ ತತ್ವಕ್ಕೆ ಒಪ್ಪಿ‌ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡತ್ವಕ್ಕೆ ಒಪ್ಪಿ ಯಾರು ಬರುತ್ತಾರೋ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ತಿಳಿಸಿದರು.

ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ- ಸಿಎಂ: ಇನ್ನೊಂದೆಡೆ ಬಿಜೆಪಿಗೆ ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ, ಕಳೆದ ಚುನಾವಣೆಗಳಿಗೆ ಹೋಲಿಸಿದ್ರೆ ಅದರ ಸರಾಸರಿ ಹೆಚ್ಚಾಗುತ್ತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವಾಸ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಲಿಂಗಾಯತ ಮತಗಳ ಸರಾಸರಿ ಪ್ರಮಾಣ ಈ ಬಾರಿ ಹೆಚ್ಚಾಗುತ್ತೆ. ಲಕ್ಷ್ಮಣ ಸವದಿ, ಜಗದೀಶ್​ ಶೆಟ್ಟರ್ ಹೋಗಿರುವುದರಿಂದ ಲಿಂಗಾಯತ ಮತ ಸರಾಸರಿಯಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ ಎಂದು ಹೇಳಿದರು.

ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಹೇಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಅವರ ಹೇಳಿಕೆಯನ್ನು ನಾವು ತಿರುಚಿಲ್ಲ. ರಾಹುಲ್ ಗಾಂಧಿಯವರು ಕರ್ನಾಟಕಕ್ಕೆ ಬಂದಷ್ಟು ಬಿಜೆಪಿಗೆ ಲಾಭ, ರಾಹುಲ್ ಗಾಂಧಿಯವರು ಹೋದ ಕಡೆಯೆಲ್ಲೆಲ್ಲಾ ಅದು ಸಾಬೀತಾಗಿದೆ. ರಾಹುಲ್ ಗಾಂಧಿ ನಿನ್ನೆ ಕೂಡಲಸಂಗಮಕ್ಕೆ ಹೋಗಿದ್ದು ತೋರಿಕೆಗಾಗಿ ವಿಭೂತಿ ಹಚ್ಚಿದ್ದಾರೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ವೀರಶೈವ ಮತಗಳು ಕೈಬಿಡುತ್ತವೆ ಎಂಬ ಆತಂಕ ಇಲ್ಲ : ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.