ETV Bharat / state

ಮದ್ವೆಯಾಗೋದಾಗಿ ನಂಬಿಸಿ ವಂಚಿಸಿದ ಆರೋಪ: ಅಪರಾಧಿಗೆ 7 ವರ್ಷ ಕಠಿಣ ಸಜೆ - Mangalore News

ಮದುವೆಯಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗದೆ ವಂಚಿಸಿದ ಆರೋಪಕ್ಕೆ ಸಂಬಂಧಪಟ್ಟಂತೆ ವ್ಯಕ್ತಿಯೋರ್ವನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ 7ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಅಪರಾಧಿಗೆ 7 ವರ್ಷ ಕಠಿಣ ಸಜೆ
author img

By

Published : Oct 11, 2019, 8:03 PM IST

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ವಂಚನೆಗೈದ ಆರೋಪದಲ್ಲಿ ವ್ಯಕ್ತಿಗೆ 2ನೇ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯ 7ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಹಾಸನ ಮೂಲದ ಗಣೇಶ್ ಕುಮಾರ್(38) ಎಂಬಾತನ ಮಂಗಳೂರಿನಲ್ಲಿ ನೆಲೆಸಿದ್ದು, ಈತನಿಗೆ 2010ರಲ್ಲಿ ಯುವತಿಯೋರ್ವಳ ಪರಿಚಯವಾಗಿದೆ. ಬಳಿಕ ಈ ಪರಿಚಯ ಪ್ರೀತಿಗೆ ತಿರುಗಿ ಲೈಂಗಿಕ ಸಂಪರ್ಕವೂ ಬೆಳೆದಿತ್ತು. ಈ ವೇಳೆ ಅಪರಾಧಿ ಗಣೇಶ್ ಯುವತಿಗೆ ಮದುವೆಯಾಗುದಾಗಿ ಆಮಿಷ ಒಡ್ಡಿದ್ದ. ಬಳಿಕ ಮದುವೆ ನಿಶ್ಚಯ ಮಾಡಿ ಯುವತಿಯ ಮನೆಯವರನ್ನೂ ಬರಹೇಳಿದ್ದ. ಆದರೆ ಆ ಬಳಿಕ ಗಣೇಶ್ ಕುಮಾರ್ ತಲೆ ಮರೆಸಿಕೊಂಡಿದ್ದ.

ಈ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ 2ನೇ ಹೆಚ್ಚುವರಿ ಜಿಲ್ಲಾ ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಪಲ್ಲವಿ, ವಿಚಾರಣೆ ನಡೆಸಿ ಆರೋಪಿಯ ಮೇಲಿರುವ ಆಪಾದನೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆತ ತಪ್ಪಿತಸ್ಥನೆಂದು ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376 ಅತ್ಯಾಚಾರ ಆರೋಪದಡಿ ಗಣೇಶ್ ಕುಮಾರ್​ಗೆ 7 ವರ್ಷ ಕಠಿಣ ಸಜೆ 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ, ಸೆಕ್ಷನ್ 417 ವಂಚನೆ ಪ್ರಕರಣಕ್ಕೆ ಆರು ತಿಂಗಳ ಸಜೆ, ಸೆಕ್ಷನ್ 506 ಬೆದರಿಕೆಯೊಡ್ಡಿರುವುದಕ್ಕೆ ಆರು ತಿಂಗಳ ಸಜೆ, ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ಕಾಯ್ದೆಯಡಿಯ ಅಪರಾಧಕ್ಕೆ ಆರು ತಿಂಗಳ ಸಜೆ, 2,500 ರೂ. ದಂಡ, ಡಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರಿ ಅಭಿಯೋಜಕರಾಗಿ ಶೇಖರ್ ಶೆಟ್ಟಿ ವಾದ ಮಂಡಿಸಿದ್ದರು.

Intro:ಮಂಗಳೂರು: ಮದುವೆ ಆಗುವೆನೆಂದು ನಂಬಿಸಿ ಯುವತಿಯೋರ್ವಳೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ ವಂಚನೆಗೈದ ಹಾಸನ ಮೂಲದ
ಗಣೇಶ್ ಕುಮಾರ್(38) ಎಂಬಾತನ ಮೇಲಿನ ಆರೋಪ ಸಾಬಿತಾಗಿರುವ ಹಿನ್ನೆಲೆಯಲ್ಲಿ‌ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ 7ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಅಪರಾಧಿ ಗಣೇಶ್ ಕುಮಾರ್ ಮಂಗಳೂರಿನಲ್ಲಿ ನೆಲೆಸಿದ್ದು ಈತನಿಗೆ 2010ರ ಸಂದರ್ಭ ಯುವತಿಯೋರ್ವಳ ಪರಿಚಯವಾಗಿದೆ. ಬಳಿಕ ಈ ಪರಿಚಯ ಪ್ರೀತಿಗೆ ತಿರುಗಿ ಲೈಂಗಿಕ ಸಂಪರ್ಕವೂ ಬೆಳೆದಿತ್ತು. ಈ ಸಂದರ್ಭ ಆತ ಯುವತಿಗೆ ಮದುವೆಯಾಗುವೆನೆಂಬ ಆಮಿಷ ಒಡ್ಡುತ್ತಿದ್ದ. ಬಳಿಕ ಮದುವೆ ನಿಶ್ಚಯ ಮಾಡಿ ಯುವತಿಯ ಮನೆಯವರನ್ನು ಬರಹೇಳಿದ್ದ. ಅವರು ಮದುವೆ ತಯಾರಿ ಮಾಡಿದ ಸಂದರ್ಭದಲ್ಲಿ ಗಣೇಶ್ ಕುಮಾರ್ ತಲೆ ಮರೆಸಿಕೊಂಡಿದ್ದನು.

ಈ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ಪೊಲೀಸ್ ನಿರೀಕ್ಷಕಿ ಕಲಾವತಿ ಪ್ರಕರಣ ದಾಖಲಿಸಿಕೊಂಡಿದ್ದು, ಎಸಿಪಿಗಳಾದ ತಿಲಕ್ ಚಂದ್ರ ಹಾಗೂ ಸದಾನಂದ ವರ್ಣೇಕರ್ ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು.

Body:ಪ್ರಕರಣವನ್ನು ಕೈಗೆತ್ತಿಕೊಂಡ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಕೆ.ಪಲ್ಲವಿ ವಿಚಾರಣೆ ನಡೆಸಿ ಆರೋಪಿಯ ಮೇಲಿರುವ ಆಪಾದನೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಆತ ತಪ್ಪಿತಸ್ಥನೆಂದು ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೆಕ್ಷನ್ 376 ಅತ್ಯಾಚಾರ ಮಾಡಿರುವುದಕ್ಕೆ 7 ವರ್ಷ ಕಠಿಣ ಸಜೆ 5 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸಜೆ, ಸೆಕ್ಷನ್ 417 ವಂಚನೆ ಪ್ರಕರಣಕ್ಕೆ ಆರು ತಿಂಗಳ ಸಜೆ, ಸೆಕ್ಷನ್ 506 ಬೆದರಿಕೆಯೊಡ್ಡಿರುವುದಕ್ಕೆ ಆರು ತಿಂಗಳ ಸಜೆ, ಪರಿಶಿಷ್ಟ ಜಾತಿ ಹಾಗೂ ಪಂಗಡ ದೌರ್ಜನ್ಯ ಕಾಯ್ದೆಯಡಿಯ ಅಪರಾಧಕ್ಕೆ ಆರು ತಿಂಗಳ ಸಜೆ, 2,500 ರೂ. ದಂಡ, ಡಂಡ ತೆರಲು ತಪ್ಪಿದ್ದಲ್ಲಿ ಒಂದು ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರಕಾರಿ ಅಭಿಯೋಜಕರಾಗಿ ಶೇಖರ್ ಶೆಟ್ಟಿ ವಾದ ಮಂಡಿಸಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.