ETV Bharat / state

ಮದುವೆ ವಿಚಾರಕ್ಕೆ ಜಗಳ: ವ್ಯಕ್ತಿಯ ಹಸ್ತ ಕತ್ತರಿಸಿ ಆರೋಪಿ ಪರಾರಿ

author img

By

Published : May 21, 2023, 10:21 PM IST

ವ್ಯಕ್ತಿಯೋರ್ವನ ಹಸ್ತವನ್ನು ಕತ್ತರಿಸಿ, ಕೊಲೆಗೆ ಯತ್ನಿಸಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ

accused-escaped-after-cutting-the-man-hand-in-mangaluru
ಮದುವೆ ವಿಚಾರವಾಗಿ ಜಗಳ: ವ್ಯಕ್ತಿಯ ಹಸ್ತ ಕತ್ತರಿಸಿ ಆರೋಪಿ ಪರಾರಿ

ಬಂಟ್ವಾಳ(ದಕ್ಷಿಣ ಕನ್ನಡ): ಮದುವೆ ವಿಚಾರವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೋರ್ವನ ಹಸ್ತವನ್ನು ಕತ್ತರಿಸಿ, ಕೊಲೆಗೆ ಯತ್ನಿಸಿರುವ ಘಟನೆ ಬಂಟ್ವಾಳ ಕಸಬಾ ಗ್ರಾಮದ ಕೆಳಗಿನ ಮಂಡಾಡಿಯಲ್ಲಿ ನಡೆದಿದೆ. ಆರೋಪಿ ಎಂದು ಹೇಳಲಾಗಿರುವ ಸಂತೋಷ್, ಆತನ ಸ್ನೇಹಿತ ಶಿವರಾಜ್ ಕುಲಾಲ್ ಎಂಬಾತನ ಕೊಲೆ ಯತ್ನ ನಡೆಸಿ ಪರಾರಿಯಾಗಿದ್ದಾನೆ.

ಘಟನೆಯ ವಿವರ: ಶಿವರಾಜ್ ಕುಲಾಲ್ ಮಂಗಳೂರಿನ ಮೆಸ್ಕಾಂ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿಕೊಂಡಿದ್ದು, ಇತ್ತೀಚಿಗೆ ಗುತ್ತಿಗೆ ಅವಧಿ ಮುಗಿದ ಕಾರಣ ಮನೆಯಲ್ಲೇ ಇದ್ದರು. ಆದರೆ ಮೇ. 21 ರಂದು ರಾತ್ರಿ ವೇಳೆ ಈತನ ಮೊಬೈಲ್​ಗೆ ಅನಾಮಧೇಯ ಕರೆ ಬಂದಿದ್ದು, ಕರೆಯನ್ನು ಸ್ವೀಕರಿಸಿ ಯಾರು ಎಂದು ಕೇಳಿದಾಗ ಆ ಕಡೆಯಿಂದ ಪ್ರತಿಕ್ರಿಯಿಸಿದ ವ್ಯಕ್ತಿ ನಾನು ಸಂತೋಷ್​ ಎಂದು ಹೇಳಿದ್ದಾನೆ. ಆತ ಹಲ್ಲೆಗೊಳಗಾಗಿದ್ದ ಶಿವರಾಜ್ ಕುಲಾಲ್​ನ ಪರಿಚಿತನಾಗಿದ್ದು, ನಿನ್ನ ಬಳಿ ಮಾತನಾಡಬೇಕು ಬಿ ಕಸಬಾ ಗ್ರಾಮದ ಅರಬ್ಬಿ ಗುಡ್ಡೆಯ ಗಣೇಶ ಸ್ಟೋರ್​ ಅಂಗಡಿ ಬಳಿಗೆ ಬರುವಂತೆ ತಿಳಿಸಿದ್ದಾನೆ.

ಅದರಂತೆ ಶಿವರಾಜ್ ಕುಲಾಲ್ ಅಲ್ಲಿಗೆ ಹೋದಾಗ ಅಲ್ಲಿ ಸಂತೋಷ್, ತನ್ನ ಅಕ್ಕನ ಮದುವೆ ವಿಚಾರವಾಗಿ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದು ಸಂತೋಷ್​, ಶಿವರಾಜ್ ಕುಲಾಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಬಂಟ್ವಾಳ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಗ್ರಾನೈಟ್ ಅಂಗಡಿ ಮಾಲೀಕನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು.. ತುಮಕೂರಿನಲ್ಲಿ ಹರಿದ ನೆತ್ತರು

ಎರಡೇ ದಿನದಲ್ಲಿ 7 ಮಂದಿ ಕೊಲೆ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಎರಡು ದಿನಗಳಲ್ಲೇ ಮೈಸೂರು ಪೊಲೀಸರು ಬಂಧಿಸಿದ್ದರು. ಇಲ್ಲಿನ ವಿ. ವಿ. ಪುರಂನ ಕಾಳಿದಾಸ ರಸ್ತೆಯಲ್ಲಿರುವ ಟೈಲರ್ ಶಾಪ್ ಬಳಿ ವಿ. ವಿ. ಪುರಂ ನಿವಾಸಿ ಚಂದ್ರು ಎಂಬುವರ ಮೇಲೆ ಹಳೆ ದ್ವೇಷದ ಹಿನ್ನೆಲೆ ಮೇ 18ರಂದು ಆರೋಪಿಗಳು ಹತ್ಯೆ ಮಾಡಿದ್ದರು. ಈ ಸಂಬಂಧ ವಿ. ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳ ಪತ್ತೆಗಾಗಿ ಮೈಸೂರು ನಗರದ ಪೊಲೀಸ್ ಆಯುಕ್ತ ಬಿ. ರಮೇಶ್, ಎನ್​ಆರ್​ ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ್, ದೇವರಾಜ ವಿಭಾಗದ ಎಸಿಪಿ ಶಾಂತಮಲ್ಲಪ್ಪ, ಸಿಸಿಬಿ ಘಟಕದ ಎಸಿಪಿ ಸಂದೇಶ್ ಕುಮಾರ್ ಹಾಗೂ ಮಂಡಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಯೋಗೇಶ್ ಮತ್ತು ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ಪ್ರತ್ಯೇಕ ತಂಡವನ್ನು ರಚಿಸಲಾಗಿತ್ತು. ಈ ತಂಡವು ಮೇ 20ರಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಮೈಸೂರು ನಗರದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್. ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ:ಬೆಂಗಳೂರಿನ ಕುಖ್ಯಾತ ರೌಡಿ ಕೊಲೆ: ತಮಿಳುನಾಡಿನ ಕಾಡಿನಲ್ಲಿ ಶವವಾಗಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.