ETV Bharat / state

ಬೆಳ್ತಂಗಡಿ: ಕುಡಿದ ಅಮಲಿನಲ್ಲಿ ಪತ್ನಿಕೊಂದ ಪತಿ: ಆರೋಪ - belthangady murder case

ಗುರುವಾರ ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಜಾನ್ಸನ್ ಮರದ ತುಂಡಿನಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ರಾತ್ರಿ 11 ಗಂಟೆಗೆ ಈ ಘಟನೆ ಸಂಭವಿಸಿದ್ದು, ಕುಸಿದು ಬಿದ್ದ ಸೌಮ್ಯ ಅವರನ್ನು ತಕ್ಷಣ ಪತಿ ಜಾನ್ಸನ್ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುವ ಸಂದರ್ಭ ಸೌಮ್ಯ ಮೃತಪಟ್ಟಿದ್ದಾರೆ.

accused as Murder of wife by husband at belthangady
ಬೆಳ್ತಂಗಡಿ: ಕುಡಿದ ಅಮಲಿನಲ್ಲಿ ಪತಿಯಿಂದ ಪತ್ನಿಯ ಕೊಲೆ ಆರೋಪ
author img

By

Published : Jan 8, 2021, 10:13 AM IST

ಬೆಳ್ತಂಗಡಿ: ತಾಲೂಕಿನ ಗಂಡಿಬಾಗಿಲು ಸಮೀಪ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಪತಿ ಹೊಡೆದು ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ‌‌ ನಡೆದಿದೆ.

ನೆರಿಯಾ ಗ್ರಾಮದ ಗಂಡಿಬಾಗಿಲು ನಿವಾಸಿ ಸೌಮ್ಯ ಫ್ರಾನ್ಸಿಸ್ (40) ಕೊಲೆಯಾಗಿದ್ದು, ಈಕೆಯ ಪತಿ ಜಾನ್ಸನ್ (47) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಮೂಲತಃ ಕೇರಳದ ಇರುಟ್ಟಿ ನಿವಾಸಿಗಳಾಗಿದ್ದು, ಗಂಡಿ ಬಾಗಿಲು ಸಮೀಪ ಜಮೀನು ಹೊಂದಿದ್ದರು. ಇಬ್ಬರು ರಬ್ಬರ್ ಟ್ಯಾಪಿಂಗ್ ವೃತ್ತಿ ನಿರ್ವಹಿಸುತ್ತಿದ್ದು, ಪ್ರತಿ ನಿತ್ಯ ಪತಿ - ಪತ್ನಿ ನಡುವೆ ಗಲಾಟೆ ನಡೆಯುತ್ತಿತ್ತು. ಗುರುವಾರ ಗಲಾಟೆ ವಿಕೋಪಕ್ಕೆ ತಿರುಗಿ ಪತಿ ಜಾನ್ಸನ್ ಮರದ ತುಂಡಿನಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ: ಹಳೆ ವೈಷಮ್ಯ ಶಂಕೆ

ರಾತ್ರಿ 11 ಗಂಟೆಗೆ ಈ ಘಟನೆ ಸಂಭವಿಸಿದ್ದು, ಕುಸಿದು ಬಿದ್ದ ಸೌಮ್ಯ ಅವರನ್ನು ತಕ್ಷಣ ಪತಿ ಜಾನ್ಸನ್ ಸ್ಥಳೀಯರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯುವ ಸಂದರ್ಭ ಸೌಮ್ಯ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.