ಬೆಳ್ತಂಗಡಿ: ಅಳದಂಗಡಿ ಸಮೀಪದ ಕೆದ್ದು ಎಂಬಲ್ಲಿ ರಿಕ್ಷಾ ಹಾಗೂ ಒಮ್ನಿ ಕಾರು ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.
ಪಿಲ್ಯ ನಿವಾಸಿ ಭುಜಬಲಿ ಹೆಗ್ಡೆ (60) ಮೃತ ವ್ಯಕ್ತಿ. ಪಿಲ್ಯ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಆಪೆ ರಿಕ್ಷಾ ಹಾಗೂ ಗುರುವಾಯನಕೆರೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕಾರು ಪರಸ್ಪರ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ.
ಆಟೋ ಚಾಲಕ ಶಶಿಧರ್ ಹಾಗೂ ಮೃತ ವ್ಯಕ್ತಿಯ ಪತ್ನಿ ಹಾಗೂ ಪುತ್ರ, ಒಮ್ನಿಯಲ್ಲಿದ್ದ ಇಬ್ಬರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.