ETV Bharat / state

ಅಗ್ನಿಶಾಮಕ ದಳದ ವಾಹನ ಪಲ್ಟಿ... ಅಪಾಯದಿಂದ ಪಾರಾದ ಸಿಬ್ಬಂದಿ! - ವಾಹನ ಅಪಘಾತ

ಸುಳ್ಯದಿಂದ ಜಾಲ್ಸೂರು ಕಡೆ ಹೋಗುತ್ತಿದ್ದ ವಾಹನ ಅಡ್ಕಾರಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು, ವಾಹನದಲ್ಲಿದ್ದ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.

Accident
Accident
author img

By

Published : Jul 4, 2020, 8:17 PM IST

ಸುಳ್ಯ(ಮಂಗಳೂರು): ಸುಳ್ಯದ ಜಾಲ್ಸೂರು ಸಮೀಪದ ಅಡ್ಕಾರಿನಲ್ಲಿ ಅಗ್ನಿಶಾಮಕ ದಳದ ವಾಹನವೊಂದು ಪಲ್ಟಿಯಾದ ಘಟನೆ ಸಂಭವಿಸಿದೆ.

ಸುಳ್ಯದಿಂದ ಜಾಲ್ಸೂರು ಕಡೆ ಹೋಗುತ್ತಿದ್ದ ವಾಹನ ಅಡ್ಕಾರಿನಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ವಾಹನದ ಟಯರ್ ಗಳು ಮಳೆಗಾಲದಲ್ಲಿ ಓಡಾಡಲೂ ಸಾಧ್ಯವಾಗದ ರೀತಿಯಲ್ಲಿ ಸವೆದಿರುವುದೇ ಅಪಘಾತಕ್ಕೆ ಮೂಲ ಕಾರಣ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಹಿಂದಿನಿಂದಲೂ ಹಲವು ಕಡೆಗಳಲ್ಲಿ ಅಗ್ನಿಶಾಮಕ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯ ತುರ್ತು ವಾಹನಗಳು ತುರ್ತು ಪರಿಸ್ಥಿತಿಯಲ್ಲಿ ಉಪಯೋಗಿಸುವ ಸ್ಥಿತಿಯಲ್ಲಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಇದಕ್ಕೆ ಇವತ್ತಿನ ಘಟನೆ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ.

ವಾಹನದಲ್ಲಿದ್ದ ಸಿಬ್ಬಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ವಾಹನ ಸಂಪೂರ್ಣ ಜಖಂ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.