ETV Bharat / state

ಮಂಗಳೂರು: ಮೆಸ್ಕಾಂ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ - ಮಂಗಳೂರು ಎಸಿಬಿ ದಾಳಿ

ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ದಯಾಲು ಸುಂದರ್ ರಾಜ್ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ‌.

ಮೆಸ್ಕಾಂ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
ಮೆಸ್ಕಾಂ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ
author img

By

Published : Mar 16, 2022, 10:37 AM IST

ಮಂಗಳೂರು: ಇಂದು ಬೆಳಗ್ಗೆ ನಗರದ ಮೆಸ್ಕಾಂ ಅಧಿಕಾರಿಯ ಮನೆ ಹಾಗೂ ಕಚೇರಿ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ದಯಾಲು ಸುಂದರ್ ರಾಜ್ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ‌. ನಗರದ ಮಲ್ಲಿಕಟ್ಟೆ ಸಮೀಪ ಬಾಡಿಗೆಗೆ ವಾಸವಾಗಿರುವ ವಿಜಯ ಅಪಾರ್ಟ್​​​ಮೆಂಟ್ ಹಾಗೂ ಮೆಸ್ಕಾಂ ಕಚೇರಿ ಮೇಲೂ ದಾಳಿ ‌ಮಾಡಲಾಗಿದೆ. ಎಸ್​ಪಿ ಸಿ.ಎ.ಸೈಮನ್ ಹಾಗೂ ಕಾರವಾರ ಎಸಿಬಿ‌ ನೇತೃತ್ವದ ತಂಡ ದಾಳಿ ‌ನಡೆಸಿದೆ.

ಮೆಸ್ಕಾಂ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಎಸಿಬಿ‌ ಅಧಿಕಾರಿಗಳು ಎಲ್ಲಾ ದಾಖಲೆಗಳು, ಕಡತಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ 10 ವರ್ಷಗಳಿಂದ ದಯಾಲು ಸುಂದರ್ ರಾಜ್ ಅವರು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತ ಎಸಿಬಿ ದಾಳಿ ವೇಳೆ ದಯಾಲು ಬೆಂಗಳೂರಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ರಾಜ್ಯದ 75 ಕಡೆ ಎಸಿಬಿ ದಾಳಿ.. 18 ಸರ್ಕಾರಿ ಅಧಿಕಾರಿಗಳ ದಾಖಲೆ ಪರಿಶೀಲಿಸುತ್ತಿರುವ ACB ಸಿಬ್ಬಂದಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.