ETV Bharat / state

ಆದಿವಾಸಿಗಳ ಸಮಸ್ಯೆಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ: ಎಸ್.ವೈ.ಗುರುಶಾಂತ್ - news kannada

ಮೂಲ ಆದಿವಾಸಿಗಳಿಗೆ ಭೂಮಿಯ ಹಕ್ಕು ಸಿಗುವವರೆಗೂ ರಾಜ್ಯ ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯಗಳು ಸಿಗುವುದಿಲ್ಲ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್ ಹೇಳಿದರು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್
author img

By

Published : Feb 15, 2019, 5:14 PM IST

Updated : Feb 15, 2019, 5:37 PM IST

ಮಂಗಳೂರು: ಆದಿವಾಸಿಗಳಿಗೆ ಯಾವುದೇ ಮೂಲಭೂತ ಸೌಲಭ್ಯಗಳು ದೊರಕುತ್ತಿಲ್ಲ. ಅವರಿಗೆ ಭೂಮಿಯ ಹಕ್ಕು ಸಿಕ್ಕರೆ ಮಾತ್ರ ಆದಿವಾಸಿಗಳು, ಈ ನೆಲದ ಮಕ್ಕಳು ಎನಿಸುತ್ತಾರೆ ಅಂತಾ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್ ಹೇಳಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್ ಆದಿವಾಸಿ ಸಮುದಾಯಗಳ ಬೇಡಿಕೆಗಳನ್ನು‌ ಈಡೇರಿಸಲು ಒತ್ತಾಯಿಸಿ ಆದಿವಾಸಿ ಸಂಘಟನೆಗಳಿಂದ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಚಲೋ ನಡೆಯಿತು.

ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್
ಈ ವೇಳೆ ಮಾತನಾಡಿದ ಅವರು, ಯಾರಿಗೆ ಅರಣ್ಯತ್ವಗಳ ಕಾಯ್ದೆಯ ಪ್ರಕಾರ ಭೂಮಿ ಸಿಕ್ಕಿದೆಯೋ, ಅವರಿಗೆ ಸಾಲ ಕೊಡಲು ಸರ್ಕಾರದ ಕಾಯ್ದೆ ಇದೆ. ಎಲ್ಲಾ ಸೌಲಭ್ಯಗಳು ದೊರಕುವ ಕಾನೂನು ಇದೆ. ಆದರೆ, ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು. ಮೂಲನಿವಾಸಿಗಳಾದ ಆದಿವಾಸಿಗಳು ಇಂದು ಹಲವಾರು ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿದ್ದಾರೆ. ಸ್ವಾತಂತ್ರ್ಯ ಲಭಿಸಿ 72 ವರ್ಷಗಳು ಕಳೆದರೂ ಇಂದಿಗೂ ಹಲವಾರು ಕುಟುಂಬಗಳು ರಸ್ತೆ, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಅಲ್ಲದೆ ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ನಿವಾಸಿಗಳ ಜಮೀನಿನ‌ ಮೇಲೆ ಹೈಕೋರ್ಟ್​​ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದಿವಾಸಿಗಳ ಜಮೀನುಗಳನ್ನು ವಶಪಡಿಸಿಕೊಂಡು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಆದಿವಾಸಿಗಳ ಹಕ್ಕುಗಳನ್ನು ಮಾನ್ಯಗೊಳಿಸಬೇಕು. ಈ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಗುರುಶಾಂತ್ ಹೇಳಿದರು.
undefined

Intro:ಮಂಗಳೂರು: ಭೂಮಿಯ ಹಕ್ಕು ದೊರಕಿದರೆ ಮಾತ್ರ ಆದಿವಾಸಿಗಳು ಈ ನೆಲದ ಮಕ್ಕಳು ಎಂದು ಆಗುತ್ತದೆ. ಅಲ್ಲದೆ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ. ಭೂಮಿಯ ಹಕ್ಕು‌ ಯಾರಿಗೆ ಸಿಕ್ಕಿದೆ ಅವರು ಬ್ಯಾಂಕ್ ನಲ್ಲಿ ಸಾಲ ಪಡೆಯಲು ಹೋದಲ್ಲಿ ಭೂಮಿಯ ಪಟ್ಟ ಇಲ್ಲ ಎಂದು ಸಾಲ ಕೊಡುವುದಿಲ್ಲ. ಯಾರಿಗೆ ಅರಣ್ಯತ್ವಗಳ ಕಾಯ್ದೆಯ ಪ್ರಕಾರ ಭೂಮಿ ಸಿಕ್ಕಿದೆ, ಅವರಿಗೆ ಸಾಲ ಕೊಡಲು ಸರಕಾರದ ಕಾಯ್ದೆ ಇದೆ. ಎಲ್ಲಾ ಸೌಲಭ್ಯಗಳು ದೊರಕುವ ಕಾನೂನು ಇದೆ. ಆದರೆ ಸರಕಾರ ಅದರ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್ ಹೇಳಿದರು.

ಆದಿವಾಸಿ ಸಮುದಾಯಗಳ ಹಲವಾರು ಬೇಡಿಕೆಗಳನ್ನು‌ ಈಡೇರಿಸಲು ಒತ್ತಾಯಿಸಿ ಆದಿವಾಸಿ ಸಂಘಟನೆಗಳಿಂದ ಇಂದು ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಚಲೋದ ನೇತೃತ್ವ ವಹಿಸಿ ಅವರು ಮಾತನಾಡಿದರು.

Body:ಮೂಲನಿವಾಸಿಗಳಾದ ಆದಿವಾಸಿಗಳು ಇಂದು ಹಲವಾರು ಸಮಸ್ಯೆಗಳ ಸುಳಿಗಳಲ್ಲಿ ಸಿಲುಕಿ ಬದುಕುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 72 ವರ್ಷಗಳು ಕಳೆದರೂ ಇಂದಿಗೂ ಹಲವಾರು ಕುಟುಂಬಗಳು ರಸ್ತೆ, ವಿದ್ಯುತ್ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಅಲ್ಲದೆ ನೆರಿಯ ಗ್ರಾಮದ ಬಾಂಜಾರು ಮಲೆಕುಡಿಯ ನಿವಾಸಿಗಳ ಜಮೀನಿನ‌ ಮೇಲೆ ರಾಜ್ಯ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆದಿವಾಸಿಗಳ ಜಮೀನುಗಳನ್ನು ವಶಪಡಿಸಿಕೊಂಡು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಆದಿವಾಸಿಗಳ ಹಕ್ಕುಗಳನ್ನು ಮಾನ್ಯಗೊಳಿಸಬೇಕು. ಈ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದು ಗುರುಶಾಂತ್ ಹೇಳಿದರು.

Reporter_Vishwanath Panjimogaru

Conclusion:
Last Updated : Feb 15, 2019, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.