ದಕ್ಷಿಣಕನ್ನಡ: ಬ್ಯಾಂಕ್ಗೆ ಬಂದಿದ್ದ ಯುವಕನೊಬ್ಬ ಬ್ಯಾಂಕ್ ಬಳಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ಕಡಬ ತಾಲೂಕಿನ ಆಲಂಕಾರಿನಲ್ಲಿ ನಡೆದಿದೆ.
ಆಲಂಕಾರು ಗ್ರಾಮದ ಕರಂದ್ಲಾಜೆ ನಿವಾಸಿ ನಾರಾಯಣ ಗೌಡರ ಪುತ್ರ ರೋಹಿತಾಕ್ಷ (27) ಮೃತ. ರೋಹಿತಾಕ್ಷ ತನ್ನ ಕಾರಿನಲ್ಲಿ ಪುತ್ತೂರಿಗೆ ಹೋಗಿ, ಬಳಿಕ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಬಂದಿದ್ದ. ಬ್ಯಾಂಕಿನ ವ್ಯವಹಾರಗಳನ್ನು ಮುಗಿಸಿಕೊಂಡು ಹೊರಗೆ ಬಂದು ಮನೆಗೆ ತೆರಳಲು ಕಾರಿನಲ್ಲಿ ಕುಳಿತಿರುವಾಗ ಕಾರಿನೊಳಗೆ ಕುಸಿದು ಬಿದ್ದಿದ್ದಾನೆ. ತಕ್ಷಣ ಬ್ಯಾಂಕಿನ ಸಿಬ್ಬಂದಿ 108 ವಾಹನದಲ್ಲಿ ಆಸ್ಪತ್ರೆಗೆಗೆ ದಾಖಲಿಸಿಸುವ ಪ್ರಯತ್ನ ನಡೆಸಿರಾದರೂ,ಅಷ್ಟರಲ್ಲೇ ಯುವಕ ಮೃತಪಟ್ಟಿದ್ದಾನೆ.
ರೋಹಿತಾಕ್ಷ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರಬಹುದೆಂದು ಹೇಳಲಾಗಿದೆ.