ಮಂಗಳೂರು: ಲಾಕ್ಡೌನ್ನಲ್ಲಿ ಎಲ್ಲರೂ ಮನೆಯಲ್ಲಿಯೇ ಲಾಕ್ ಆಗಿ ಸಮಯ ಕಳೆಯುವುದೇ ದುಸ್ತರವಾಗಿ ಪರಿಣಮಿಸಿದ್ದ ಕಾಲ. ಆದರೆ ಕೆಲವರು ಇದೇ ಸಮಯವನ್ನು ವಿವಿಧ ರೀತಿಯಲ್ಲಿ ಸದುಪಯೋಗ ಪಡಿಸಿಕೊಂಡದ್ದೂ ಇದೆ. ಇಂತಹದ್ದೇ ಕಾರ್ಯವನ್ನು 'ವನಸುಮ ಸಂಜೀವಿನಿ' ಎಂಬ ಮಹಿಳಾ ಒಕ್ಕೂಟದ ಸದಸ್ಯೆಯರೂ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.
'ವನಸುಮ ಸಂಜೀವಿನಿ' ಮಹಿಳಾ ಒಕ್ಕೂಟದ ಸದಸ್ಯೆಯರು ಕೇಂದ್ರ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್ಆರ್ ಎಲ್ಎಂ) ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಏಳು ವರ್ಷಗಳಿಂದ ಹಡೀಲು ಬಿದ್ದಿದ್ದ ಗದ್ದೆಯಲ್ಲಿ ಭತ್ತದ ಕೃಷಿ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಪಂ ವ್ಯಾಪ್ತಿಯ ಮಜಲು ಎಂಬಲ್ಲಿನ ದಿ.ನಾರಾಯಣ ದೇವಸ್ಯರ ಮಕ್ಕಳಿಗೆ ಸೇರಿದ ಹಡೀಲು ಗದ್ದೆಯಲ್ಲಿ ಮಹಿಳಾ ಒಕ್ಕೂಟದ 40 ಮಂದಿ ಸದಸ್ಯೆಯರು ಉಳುಮೆ ಮಾಡಿದ್ದಾರೆ. ಈ ಮೂಲಕ 23 ಸ್ವಸಹಾಯ ಗುಂಪುಗಳು ಜೊತೆಯಾಗಿದ್ದಾರೆ. ಒಂದು ತಿಂಗಳ ಕಾಲ ಹಡೀಲು ಗದ್ದೆಯಲ್ಲಿ ಬೆಳೆದ ಮುಳ್ಳುಪೊದೆಗಳು, ಗಿಡಗಂಟಿಗಳು, ಕಳೆಗಳನ್ನು ತೆಗೆದು ಸ್ವಚ್ಛಮಾಡಿದ್ದಾರೆ. ಬಳಿಕ ಟ್ರ್ಯಾಕ್ಟರ್ ನಿಂದ ಗದ್ದೆಯನ್ನು ಉಳುಮೆ ಮಾಡಿದ್ದಾರೆ.
ಇದನ್ನು ಓದಿ:ಪುತ್ತೂರು... ವಿಷ್ಣು ದೇವಾಲಯಕ್ಕೆ ಗದ್ದೆ ಬಿಟ್ಟು ಕೊಟ್ಟ ಮುಸ್ಲಿಂ ಕುಟುಂಬ