ಕಡಬ: ನಗರದ ಮುಖ್ಯ ರಸ್ತೆಯಲ್ಲಿ ನಿನ್ನೆ ದ್ವಿಚಕ್ರ ವಾಹನಗಳೆರಡರ ನಡುವೆ ಭೀಕರ ರಸ್ತೆ ಅಪಘಾತ ನಡೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಘಾತದ ಸಮಯದಲ್ಲಿ ದ್ವಿಚಕ್ರ ವಾಹನ ಸವಾರೆಯೊಬ್ಬರು ಅಪಘಾತ ನೋಡಿಯೂ ತನ್ನ ವಾಹನ ನಿಲ್ಲಿಸದೇ ಹೋಗುತ್ತಿರುವ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಅಪಘಾತ ನಡೆದ ವೇಳೆ ಇಬ್ಬರೂ ಸವಾರರು ರಸ್ತೆಗೆ ಅಪ್ಪಳಿಸಿದ್ದಾರೆ. ಈ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ವಾಹನ ನಿಲ್ಲಿಸದೆ, ರಸ್ತೆಯಲ್ಲಿ ಬಿದ್ದವರನ್ನು ನೋಡಿದರೂ ವಾಹನ ನಿಲ್ಲಿಸದೇ ಹೋಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇನ್ನು ಅಪಘಾತವಾಗುತ್ತಿದ್ದಂತೆ ಪಕ್ಕದ ವಾಣಿಜ್ಯ ಸಂಕೀರ್ಣದಲ್ಲಿನ ಜನರು ಆಗಮಿಸಿ ರಸ್ತೆಯಲ್ಲಿ ಬಿದ್ದವರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದ್ದಾರೆ.