ಬಂಟ್ವಾಳ : ರಂಜಾನ್ ಇಫ್ತಾರ್ ( ವೃತ ತೊರೆಯುವುದು) ಗೆ ಸಮಯವಾದ ಕಾರಣ ಸಂಜೆ ಮನೆಗೆ ತೆರಳುತ್ತಿದ್ದ ಸಂದರ್ಭ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ ಸುದ್ದಿ ಕೇಳಿ, ಕೂಡಲೇ ಕಾರ್ಯಾಚರಣೆ ನಡೆಸಿ ಆತನನ್ನು ರಕ್ಷಿಸಿದ ಗೂಡಿನಬಳಿಯ ಸತ್ತಾರ್ ಅವರ ಸೇವಾ ಮನೋಭಾವಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಶುಕ್ರವಾರ ಸಂಜೆ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿದ್ದ. ಕೂಡಲೇ ಗೂಡಿನ ಬಳಿಯ ಸತ್ತಾರ್ ಮತ್ತು ಅವರ ಸ್ನೇಹಿತ ಸಾದಿಕ್ ರಕ್ಷಿಸಿದ್ದರು. ಉಪವಾಸಿಗರಾಗಿದ್ದ ಸತ್ತಾರ್ ಮತ್ತು ಸಾದಿಕ್ ಇಫ್ತಾರ್ಗೆ ಸಮಯವಾದರೂ ಮನೆಗೆ ಹೋಗದೇ ನದಿಯಲ್ಲಿ ಈಜಿ ಯುವಕನ ಪ್ರಾಣ ರಕ್ಷಿಸಿದ್ದಾರೆ. ಈ ಮೂಲಕ ಜನರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ನೋಡಿ : ಮಾರ್ಕೆಟ್ಗೆ ಬಂದಿದೆ ಪರಿಸರ ಸ್ನೇಹಿ ಮಾಸ್ಕ್.. ಮಂಗಳೂರಿನ ಪೇಪರ್ ಸೀಡ್ಸ್ ಸಂಸ್ಥೆ ಆವಿಷ್ಕಾರ
ಇಫ್ತಾರ್ ನಿಮಿತ್ರ ಸಂಜೆ ಮನೆಗೆ ತೆರಳುವಾಗ ಯುವಕನೊಬ್ಬ ನದಿಗೆ ಹಾರಿದ ವಿಷಯ ತಿಳಿದು ಸ್ನೇಹಿತ ಸಾದಿಕ್ನ ಸಹಾಯದಿಂದ ಆತನನ್ನು ರಕ್ಷಿಸಿದ್ದೇವೆ. ಯುವಕ ತನ್ನ ಮೊಬೈಲ್ ಅನ್ನು ಸೇತುವೆಯಲ್ಲಿ ಬಿಟ್ಟು ಹೋಗಿದ್ದ ಕಾರಣ, ಕೂಡಲೇ ಆತನ ಮನೆಯವರನ್ನು ಸಂಪರ್ಕಿಸಲು ಸಾಧ್ಯವಾಯಿತು. ಯುವಕನ ಪ್ರಾಣ ಉಳಿಸಿದ್ದು ಸಮಾಧಾನಕರ ವಿಚಾರ ಎಂದು ಸತ್ತಾರ್ ಹೇಳಿದ್ದಾರೆ.