ETV Bharat / state

ಉರ್ವ ಪೊಲೀಸ್ ಠಾಣೆ ಅಧಿಕಾರಿಗಳ ಕಾರ್ಯವೈಖರಿಗೆ ಸಿಕ್ತು ಪ್ರಶಂಸನಾ ಪತ್ರ

ಉರ್ವ ಠಾಣೆಯ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಸಿಬ್ಬಂದಿಗಳಿಗೆ ಅಭಿನಂದನಾ ಪತ್ರ ಸಲ್ಲಿಸಿದರು.

ಪ್ರಶಂಸನಾ ಪತ್ರ
author img

By

Published : Aug 30, 2019, 5:56 PM IST

ಮಂಗಳೂರು: ನಗರದ ಉರ್ವ ಠಾಣೆಯ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅಭಿನಂದನಾ ಪತ್ರ ಸಲ್ಲಿಸಿದರು.

ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಡೇನಿಯಲ್ ಡೆರಿಕ್ ಪಾಯಸ್ ಎಂಬುವವರ ತೆಂಗಿನ ಮರವು ಆಗಸ್ಟ್ 13ರಂದು ಭಾರಿ ಮಳೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಪಕ್ಕದ ಮನೆಯ ಮೇಲೆ ಮುರಿದು ಬಿದ್ದು ಮೇಲ್ಛಾವಣಿ ಹಾನಿಯಾಗಿತ್ತು. ಈ ಕುರಿತಾಗಿ ಡೇನಿಯಲ್ ರವರು ಉರ್ವ ಬೀಟ್ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ನವೀನ್ ಅವರಿಗೆ ಮಾಹಿತಿ ನೀಡಿದ್ದರು. ಆ ಕೂಡಲೇ ಕಾರ್ಯಪ್ರವೃತ್ತರಾದ ಎಎಸ್ ಐ ದೇಜಪ್ಪ, ಮೋಹನ್, ಹೆಡ್ ಕಾನ್ ಸ್ಟೇಬಲ್ ನವೀನ್, ಪೊಲೀಸ್ ಕಾನ್ ಸ್ಟೇಬಲ್ ವಿನ್ಸೆಂಟ್ ಕುರುವಿಲ್ಲಾ ಮರವನ್ನು ತೆರವುಗೊಳಿಸಲು ವ್ಯವಸ್ಥೆ ಮಾಡಿದ್ದರು.

mangalore district latest news
ಉರ್ವ ಪೊಲೀಸ್ ಠಾಣೆ ಅಧಿಕಾರಿಗಳ ಕಾರ್ಯವೈಖರಿಗೆ ಪ್ರಶಂಸನಾ ಪತ್ರ

ಅಲ್ಲದೆ ಅಗ್ನಿಶಾಮಕ ದಳ, ಮೆಸ್ಕಾಂ, ಮನಪಾ, ಗ್ರಾಮ ಲೆಕ್ಕಿಗರಿಗೆ ಮಾಹಿತಿ ತಿಳಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆಯನ್ನು ಪ್ರಶಂಸಿಸಿ ಡೇನಿಯಲ್ ಡೆರಿಕ್ ಪಾಯಸ್ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿಂದು ಉರ್ವ ಪೊಲೀಸ್ ಠಾಣೆಯ ಸಿಬ್ಬಂದಿಗೆ ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ನೀಡಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.

Intro:ಮಂಗಳೂರು: ನಗರದ ಉರ್ವ ಠಾಣೆಯ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿ ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಇಂದು ಅಭಿನಂದನಾ ಪತ್ರ ಸಲ್ಲಿಸಿದರು.

ಪ್ರಕರಣದ ಹಿನ್ನೆಲೆ: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಡೇನಿಯಲ್ ಡೆರಿಕ್ ಪಾಯಸ್ ಅವರ ತೆಂಗಿನ ಮರವು ಆಗಸ್ಟ್ 13ರಂದು ಭಾರೀ ಮಳೆಯ ಹಿನ್ನೆಲೆಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಪಕ್ಕದ ಮನೆಗೆ ಮುರಿದು ಬಿದ್ದಿದ್ದು, ಮೇಲ್ಛಾವಣಿಗೆ ಹಾನಿಯಾಗಿತ್ತು.

ಈ ಸಂದರ್ಭ ಡೇನಿಯಲ್ ಡೆರಿಕ್ ಪಾಯಸ್ ಅವರು ಮನೆಯಿಂದ ಹೊರಗಡೆಯಿದ್ದರು. ಈ ಬಗ್ಗೆ ಪಕ್ಕದ ಮನೆಯವರು ಡೆರಿಕ್ ಪಾಯಸ್ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಅವರು ಉರ್ವ ಬೀಟ್ ಪೊಲೀಸ್ ನ ಹೆಡ್ ಕಾನ್ ಸ್ಟೇಬಲ್ ನವೀನ್ ಅವರಿಗೆ ಮಾಹಿತಿ ನೀಡಿದ್ದಾರೆ. ಆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಉರ್ವ ಠಾಣೆಯ ಎಎಸ್ ಐಗಳಾದ ದೇಜಪ್ಪ, ಮೋಹನ್, ಹೆಡ್ ಕಾನ್ ಸ್ಟೇಬಲ್ ನವೀನ್, ಪೊಲೀಸ್ ಕಾನ್ ಸ್ಟೇಬಲ್ ವಿನ್ಸೆಂಟ್ ಕುರುವಿಲ್ಲಾ ಮರವನ್ನು ತೆರವುಗೊಳಿಸಲು ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಅಗ್ನಿಶಾಮಕ ದಳ, ಮೆಸ್ಕಾಂ, ಮನಪಾ, ಗ್ರಾಮ ಲೆಕ್ಕಿಗರಿಗೆ ಮಾಹಿತಿ ತಿಳಿಸಿದ್ದು, ಈ ಎಲ್ಲಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಪೊಲೀಸ್ ಇಲಾಖೆಯನ್ನು ಪ್ರಶಂಸಿಸಿ ಡೇನಿಯಲ್ ಡೆರಿಕ್ ಪಾಯಸ್ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.

Body:ಈ ಹಿನ್ನೆಲೆಯಲ್ಲಿ ಇಂದು ಉರ್ವ ಪೊಲೀಸ್ ಠಾಣೆಯ ಎಎಸ್ ಐಗಳಾದ ದೇಜಪ್ಪ, ಮೋಹನ್, ಹೆಡ್ ಕಾನ್ ಸ್ಟೇಬಲ್ ನವೀನ್, ಪೊಲೀಸ್ ಕಾನ್ ಸ್ಟೇಬಲ್ ವಿನ್ಸೆಂಟ್ ಕುರುವಿಲ್ಲಾ ಅವರಿಗೆ ಪೊಲೀಸ್ ಆಯುಕ್ತರು ಪ್ರಶಂಸನಾ ಪ್ರತ್ರ ನೀಡಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.