ETV Bharat / state

ಬೆಳ್ತಂಗಡಿ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಿಗೆ ಭವ್ಯ ಸ್ವಾಗತ - belthangady latest news

ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿ ತವರೂರಿಗೆ ಮರಳಿದ ಯೋಧರಾದ ಕನ್ಯಾಡಿಯ ಸುಧಾಕರ ಗೌಡ ಮತ್ತು ಮೇಘಶ್ಯಾಮ ಅವರಿಗೆ ಧರ್ಮಸ್ಥಳ ಹಾಗೂ ಉಜಿರೆ ಗ್ರಾಮಸ್ಥರು ಮತ್ತು ಕನ್ಯಾಡಿ ವೀರಕೇಸರಿ ವತಿಯಿಂದ ಇಂದು ಉಜಿರೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.

A grand welcome for retired soldiers who have served in the Indian Army
ಬೆಳ್ತಂಗಡಿ: ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಿಗೆ ಭವ್ಯ ಸ್ವಾಗತ
author img

By

Published : Feb 6, 2021, 8:01 PM IST

ಬೆಳ್ತಂಗಡಿ: ಸೈನಿಕನೋರ್ವ ಯಾವುದೇ ಹಕ್ಕುಗಳಿಗೆ ಹೋರಾಡದೆ ಯಾವಾಗ ನಿಷ್ಠೆಯಿಂದ ದೇಶ ಸೇವೆಗೈಯಲು ಸಾಧ್ಯವಾಗುತ್ತದೋ ಆಗ ಆ ದೇಶ ಸುಭಿಕ್ಷೆಯಿಂದ ಕೂಡಿರುತ್ತದೆ. ಸೈನಿಕನ ಜೀವನ ಕಷ್ಟಗಳ ಪರ್ವತವಿದ್ದಂತೆ, ಕಷ್ಟಗಳನ್ನೇ ಸುಖವನ್ನಾಗಿ ಭಾವಿಸಿ ಒಗ್ಗಿಕೊಳ್ಳುವವನೇ ಸೈನಿಕ. ಎಲ್ಲರೂ ಒಗ್ಗೂಡಿ ಇರುವ ಸಂತೋಷವನ್ನು ಅರಸಿ ಈ ದೇಶದ ಏಕತೆ, ಅಖಂಡತೆಗಾಗಿ ಶ್ರಮಿಸೋಣ ಎಂದು ಮಾಜಿ ಸೈನಿಕ ಗೋಪಾಲಕೃಷ್ಣ ಕಾಂಚೋಡ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿವೃತ್ತರಾದ ಸೈನಿಕರಿಗೆ ಭವ್ಯ ಸ್ವಾಗತ

ಭಾರತೀಯ ಸೇನೆಯಲ್ಲಿ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿ ತವರೂರಿಗೆ ಮರಳಿದ ಯೋಧರಾದ ಕನ್ಯಾಡಿಯ ಸುಧಾಕರ ಗೌಡ ಮತ್ತು ಮೇಘಶ್ಯಾಮ ಅವರಿಗೆ ಧರ್ಮಸ್ಥಳ ಹಾಗೂ ಉಜಿರೆ ಗ್ರಾಮಸ್ಥರು ಹಾಗೂ ಕನ್ಯಾಡಿ ವೀರಕೇಸರಿ ವತಿಯಿಂದ ಇಂದು ಉಜಿರೆಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ನಡೆದ ಸಭೆಯಲ್ಲಿ ಮಾತನಾಡಿದರು.

ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ತುಂಗಪ್ಪ ಗೌಡ ಮಾತನಾಡಿ, ತಮ್ಮ ಸೇವೆಯನ್ನು ಈ ಮಾತೃಭೂಮಿಗಾಗಿ ಅರ್ಪಿಸಿ ಸೈನ್ಯಕ್ಕಾಗಿ ಸೇರ್ಪಡೆಗೊಂಡ ವೀರರ ಗೌರವಾರ್ಪಣೆ ಈ ನಾಡಿಗೆ ಹೆಮ್ಮೆಯ ವಿಚಾರ. ಇಂದು ನಿವೃತ್ತಿ ಹೊಂದಿದ ಸುಧಾಕರ ಗೌಡ ಹಾಗೂ ಮೇಘಶ್ಯಾಮ ಅವರನ್ನು ಪಡೆದ ಪೋಷಕರು ಧನ್ಯರು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: ಬಾಸ್ಕೆಟ್‌ ಬಾಲ್‌ ಅತೀ ವೇಗವಾಗಿ ಬೆಳೆಯುತ್ತಿರುವ ಕ್ರೀಡೆ; ಬೊಮ್ಮಾಯಿ

ಸುಧಾಕರ ಗೌಡ ಹಾಗೂ ಮೇಘಶ್ಯಾಮ ಅವರು ತಮ್ಮ ಸೈನ್ಯದ ಅನುಭವ ಹಂಚಿಕೊಂಡು, ದೇಶ ಸೇವೆಯ ಪ್ರತಿಕ್ಷಣವೂ ರೋಮಾಂಚನಕಾರಿ. ಸೈನಿಕ ಧರಿಸುವ ಸಮವಸ್ತ್ರದ ಮೇಲಿನ ಆತ್ಮವಿಶ್ವಾಸ ಹಾಗೂ ಸಮಸ್ತ ಕೋಟಿ ಜನರ ಆಶೀರ್ವಾದವು ಭೂಮಿತಾಯಿಯ ಸೇವೆಗೈಯುವ ಅದ್ಭುತ ಕ್ಷಣವಾಗಿ ಬದಲಾಗುತ್ತದೆ. ಯುವ ಸಮೂಹ ಹೆಚ್ಚೆಚ್ಚು ಸೇನೆಯಲ್ಲಿ ತೊಡಗಿಸಿಕೊಳ್ಳಬೇಕು. ಸೇನೆಗೆ ಸೇರಬಯಸುವವವರಿಗೆ ಅನುಕೂಲವಾಗುವ ದೃಷ್ಟಿಯಿಂದ ಪ್ರತಿ ಜಿಲ್ಲೆಯಲ್ಲಿ ತರಬೇತಿ ಕೇಂದ್ರ ತೆರೆದಲ್ಲಿ ಮತ್ತಷ್ಟು ಮಂದಿ ಸೇನೆಗೆ ಸೇರಲು ಅನುಕೂಲವಾಗಲಿದೆ ಎಂದರು.

ಒಕ್ಕಲಿಗ ಗೌಡರ ಸಂಘದ ವತಿಯಿಂದ ಅಧಕ್ಷ ಕೇರಿಮಾರು ಬಾಲಕೃಷ್ಣ ಗೌಡ, ಬ್ಯಾಂಕ್‌ನ ಅಧಕ್ಷ ರಂಜನ್ ಗೌಡ, ಸಿಇಒ ದಿನೇಶ್ ಗೌಡ ಕಲ್ಲಾಜೆ, ನಿರ್ದೇಶಕರಾದ ಕೇಶವ ಗೌಡ ಬೆಳಾಲು, ಚೇತನ ಚಂದ್ರಶೇಖರ ಮತ್ತಿತರರು ನಿವೃತ್ತ ಸೈನಿಕರನ್ನು ಸಮ್ಮಾನಿಸಿದರು.

ಮೆರವಣಿಗೆ:

ಭಾರತಾಂಬೆಗೆ ಪುಷ್ಪಾರ್ಚನೆಗೈದ ಬಳಿಕ ಉಜಿರೆ ಪೇಟೆಯಿಂದ ಅವರ ಮನೆಯವರೆಗೆ ನಿವೃತ್ತ ಸೈನಿಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು. ಕನ್ಯಾಡಿ ಶಾಲೆಗೆ ಬಂದು ಅಲ್ಲಿ ಮಕ್ಕಳ ಗೌರವ ವಂದನೆ ಬಳಿಕ ನಿವೃತ್ತ ಸೈನಿಕರ ಮನೆಯ ತನಕ ಭವ್ಯ ಮೆರವಣಿಗೆಯೊಂದಿಗೆ ಬೀಳ್ಕೊಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.